ಬೆಂಗಳೂರು ತಂಡಕ್ಕೆ ಪ್ರಶಸ್ತಿ

7

ಬೆಂಗಳೂರು ತಂಡಕ್ಕೆ ಪ್ರಶಸ್ತಿ

Published:
Updated:

ಹುಬ್ಬಳ್ಳಿ: ಬೆಂಗಳೂರು ವಿಭಾಗ ತಂಡ ಇಲ್ಲಿಯ ರೈಲ್ವೆ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಗುರುವಾರ ಮುಕ್ತಾಯವಾದ ನೈಋತ್ಯ ರೈಲ್ವೆ ಅಂತರ ವಿಭಾಗ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2-0ಯಿಂದ ಹುಬ್ಬಳ್ಳಿ ವರ್ಕ್‌ಶಾಪ್ ತಂಡವನ್ನು ಪರಾಭವಗೊಳಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.ವೈಯಕ್ತಿಕ ವಿಭಾಗದ ಸಿಂಗಲ್ಸ್‌ನಲ್ಲಿ ಬೆಂಗಳೂರು ವಿಭಾಗದ ಮೋಹಿತ್ ಕಾಮತ್ 21-13, 21-17ರಿಂದ ತಮ್ಮದೇ ವಿಭಾಗದ ಟಿ.ನಾಗೇಂದ್ರ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಪಡೆದರು. ಡಬಲ್ಸ್‌ನಲ್ಲಿ ಬೆಂಗಳೂರು ವಿಭಾಗದ ಅನಿಲ್‌ಕುಮಾರ್ ಮತ್ತು ಜಗದೀಶ ಯಾದವ್ ಜೋಡಿ 21-15, 24-22ರಿಂದ ತಮ್ಮದೇ ವಿಭಾಗದ ಹರ್ಸನ್ ಮತ್ತು ಜಮ್‌ಸೀದ್ ಜೋಡಿ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಮೇಲೆ ಹಿಡಿತ ಸಾಧಿಸಿತು.ಹಿರಿಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಬೆಂಗಳೂರು ವಿಭಾಗದ ಬೋನಾ ಥಾಮಸ್ 21-11, 21-14ರಿಂದ ಹೆಡ್‌ಕ್ವಾಟರ್ಸ್ ತಂಡದ ಎನ್.ಶ್ರೀನಿವಾಸ ಅವರನ್ನು ಸೋಲಿಸಿದರು. ಡಬಲ್ಸ್‌ನಲ್ಲಿ ಬೆಂಗಳೂರು ವಿಭಾಗದ ಬೋನಾ ಥಾಮಸ್ ಮತ್ತು ಭುವನ್ ದಾಸ್ ಜೋಡಿ ಎದುರಾಳಿ ತಂಡದ ಅನುಪಸ್ಥಿತಿಯಲ್ಲಿ ಬೆವರು ಹರಿಸದೆ ಪ್ರಶಸ್ತಿ ಎತ್ತಿ ಹಿಡಿಯಿತು.ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅಶೋಕಕುಮಾರ್ ಮಿತ್ತಲ್ ಪ್ರಶಸ್ತಿ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry