ಬೆಂಗಳೂರು-ದೆಹಲಿ ತಡೆರಹಿತ ರೈಲು

7

ಬೆಂಗಳೂರು-ದೆಹಲಿ ತಡೆರಹಿತ ರೈಲು

Published:
Updated:
ಬೆಂಗಳೂರು-ದೆಹಲಿ ತಡೆರಹಿತ ರೈಲು ದರ ಪಟ್ಟಿ.... (ರೂಪಾಯಿಗಳಲ್ಲಿ)

ಬೋಗಿ ತುರಂತೊ ಎಕ್ಸ್‌ಪ್ರೆಸ್ ರಾಜಧಾನಿ ಎಕ್ಸ್‌ಪ್ರೆಸ್

1 ಎಸಿ           5,012     4,555

2 ಎಸಿ        2,951        2,725

3ಎಸಿ      2,233          2,085 
 

ಬೆಂಗಳೂರು-ದೆಹಲಿ ರೈಲುಗಳು

ತುರಂತೊ ಎಕ್ಸ್‌ಪ್ರೆಸ್

(ಪ್ರತಿ ಶನಿವಾರ- 31 ಗಂಟೆ ಪ್ರಯಾಣ)

- ರಾಜಧಾನಿ ಎಕ್ಸ್‌ಪ್ರೆಸ್ (ಪ್ರತಿ ಮಂಗಳ, ಶುಕ್ರ, ಶನಿ-     34 ಗಂಟೆ ಪ್ರಯಾಣ)

- ಕರ್ನಾಟಕ ಎಕ್ಸ್‌ಪ್ರೆಸ್ (ಪ್ರತಿದಿನ- 40 ಗಂಟೆ ಪ್ರಯಾಣ)

- ಸಂಪರ್ಕ ಕ್ರಾಂತಿ (ಪ್ರತಿ ಮಂಗಳ, ಗುರುವಾರ-    44 ಗಂಟೆ ಪ್ರಯಾಣ)


ಬೆಂಗಳೂರು: ಕನ್ನಡಿಗರ ಬಹುದಿನಗಳ ಬೇಡಿಕೆಯಾಗಿದ್ದ ದೆಹಲಿಗೆ ತಡೆರಹಿತ ರೈಲಿಗೆ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಹಸಿರು ನಿಶಾನೆ ತೋರಿದರು.ಯಶವಂತಪುರ-ದೆಹಲಿ ಸರಾಯ್ ರೊಹಿಲ್ಲಾ ತುರಂತೊ ಎಕ್ಸ್‌ಪ್ರೆಸ್ ರೈಲು ವಾರಕ್ಕೊಮ್ಮೆ ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಸಂಚರಿಸಲು ಅವಕಾಶ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಪ್ರತಿ ಶನಿವಾರ ರಾತ್ರಿ 11.40ಕ್ಕೆ ಯಶವಂತಪುರದಿಂದ ಹೊರಡುವ ರೈಲು (ಸಂಖ್ಯೆ 12213) ದೆಹಲಿಯ ಸರಾಯ್ ರೊಹಿಲ್ಲಾ ನಿಲ್ದಾಣವನ್ನು ಸೋಮವಾರ ಬೆಳಿಗ್ಗೆ 6.50ಕ್ಕೆ ತಲುಪಲಿದೆ. ಅಂದರೆ ಪ್ರಯಾಣದ ಅವಧಿ ಕೇವಲ 31 ಗಂಟೆಗಳು. ಮಾರ್ಗ ಮಧ್ಯದಲ್ಲಿ ಎಲ್ಲಿಯೂ ನಿಲುಗಡೆ ಇರುವುದಿಲ್ಲ. ಸದ್ಯ ಬೆಂಗಳೂರಿನಿಂದ ದೆಹಲಿಗೆ ಹೋಗುವ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯದ ಪ್ರಮುಖ ನಗರಗಳಲ್ಲಿ ನಿಲ್ಲುತ್ತದೆ. ಇದು ದೆಹಲಿಗೆ ತಲುಪಲು ಸುಮಾರು 34 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ದೆಹಲಿಯ ಸರಾಯ್ ರೊಹಿಲ್ಲಾ ನಿಲ್ದಾಣದಿಂದ ಬುಧವಾರ ರಾತ್ರಿ 11 ಗಂಟೆಗೆ ಹೊರಡುವ ರೈಲು (ಸಂಖ್ಯೆ 12214) ಯಶವಂತಪುರಕ್ಕೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ.  ರೈಲಿನ ಎಲ್ಲ ಬೋಗಿಗಳು ಹವಾ ನಿಯಂತ್ರಿತ (ಎ.ಸಿ) ವ್ಯವಸ್ಥೆಯನ್ನು ಹೊಂದಿವೆ. 1 ಟೈರ್- ಒಂದು ಬೋಗಿ, 2 ಟೈರ್- 3 ಬೋಗಿಗಳು ಹಾಗೂ 3 ಟೈರ್- 9 ಬೋಗಿಗಳು ಇವೆ.  ಸ್ಲಿಪರ್ ಕ್ಲಾಸ್ ಬೋಗಿಗಳು ಇರುವುದಿಲ್ಲ.ಸರಾಯ್ ರೊಹಿಲ್ಲಾ ನಿಲ್ದಾಣ: ದೆಹಲಿಯ ಉಪನಗರವಾಗಿರುವ ಸರಾಯ್ ರೊಹಿಲ್ಲಾ ನಿಲ್ದಾಣವು ಹಳೆಯ ದೆಹಲಿಯಿಂದ 4 ಕಿ.ಮೀ, ನವದೆಹಲಿಯಿಂದ 5 ಕಿ.ಮೀ, ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ 11 ಕಿ.ಮೀ ಹಾಗೂ ಕಂಟೋನ್ಮೆಂಟ್ ಪ್ರದೇಶದಿಂದ 10 ಕಿ.ಮೀ ಅಂತರದಲ್ಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry