ಶುಕ್ರವಾರ, ಮೇ 14, 2021
21 °C

ಬೆಂಗಳೂರು ನಿರ್ಮಾತೃ ಕೆಂಪೇಗೌಡರ 501ನೇ ಜಯಂತ್ಯುತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಇಲ್ಲಿನ ನಾಲ್ಕೂ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ 501ನೇ ಜಯಂತ್ಯುತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಸಂತೆ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಪುಷ್ಪಾಂಡಮುನಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಮಾಲಾರ್ಪಣೆ ಮಾಡುವುದರೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದರು. ಗ್ರಾಮ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಡೊಳ್ಳುಕುಣಿತ, ನಂದಿ ಧ್ವಜ, ಮಹಿಳೆಯರಿಂದ ವೀರಗಾಸೆ, ಪೂಜಾಕುಣಿತ, ಚಂಡಿ ನಗಾರಿ, ಗಾರುಡಿ ಗೊಂಬೆ, ತಮಟೆ ಹಾಗೂ ವಿವಿಧ ವೇಷಭೂಷಣಗಳಿಂದ ಅಲಂಕೃತ ಜಾನಪದ ಕಲಾತಂಡಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೋಡುಗರ ಮನಸೂರೆಗೊಂಡವು.ಸಪ್ತಋಷಿ ವೈದ್ಯಕೀಯ ಗುರುಕುಲ ಆಶ್ರಮದ ಅಭಿನವ ರಾಮಾನುಜಾಚಾರ್ಯ ಸ್ವಾಮೀಜಿ, ಶನೈಶ್ಚರ ಕ್ಷೇತ್ರದ ಶಾಂತಿನಾಥ ಸ್ವಾಮೀಜಿ, ಅನ್ನಪೂರ್ಣೇಶ್ವರಿ ಕ್ಷೇತ್ರದ ಬಸವಲಿಂಗ ಸ್ವಾಮೀಜಿ, ಜಿ.ಪಂ.ಸದಸ್ಯೆ ವಾಣಿಶ್ರೀ ವಿಶ್ವನಾಥ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ಗೀತಾ ಶಶಿಕುಮಾರ್, ಬಿಬಿಎಂಪಿ ಸದಸ್ಯರಾದ ಎಂ.ಮುನಿರಾಜು, ವೈ.ಎನ್.ಅಶ್ವಥ್, ಕೆ.ವಿ.ಯಶೋಧಾ ರವಿಶಂಕರ್ ಮೊದಲಾದವರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.