ಗುರುವಾರ , ಅಕ್ಟೋಬರ್ 17, 2019
22 °C

ಬೆಂಗಳೂರು ಬಾಂಬ್‌ಸ್ಪೋಟ: ಮದನಿ ಜಾಮೀನು ಅರ್ಜಿ ವಜಾ

Published:
Updated:

ನವದೆಹಲಿ (ಐಎಎನ್‌ಎಸ್): 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಪಿಪಲ್ಸ್ ಡೆಮಕ್ರಟಿಕ್ ಪಾರ್ಟಿ ಅಧ್ಯಕ್ಷ ಅಬ್ದುಲ್ ನಾಜೀರ್ ಮದಾನಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರಿಂ ಕೋರ್ಟ್ ಮಂಗಳವಾರ ವಜಾ ಮಾಡಿದೆ.~ಈ ಪ್ರಕರಣದಲ್ಲಿ ಜಾಮೀನು ನೀಡಿ ಅವರನ್ನು ಬಂಧನದಿಂದ ಮುಕ್ತಿಗೊಳಿಸುವಲ್ಲಿ ನ್ಯಾಯಾಲಯಕ್ಕೆ ಆಸಕ್ತಿಯಿಲ್ಲ~ ಎಂದು ನ್ಯಾಯಪೀಠದ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.~ತಮಗೆ ಚಿಕಿತ್ಸೆಯ ಅವಶ್ಯಕತೆಯಿದ್ದು, ಕೇರಳದಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಅದಕ್ಕೆ ಅನುಕೂಲ ಕಲ್ಪಿಸಬೇಕು~ ಎಂದು ಮದನಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನೂ ತಿರಸ್ಕರಿಸಿದ ನ್ಯಾಯಾಲಯ, ಮದನಿ ಅವರಿಗೆ ಅಗತ್ಯವಿರುವ ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಮದನಿ ಪ್ರಮುಖ ಪಾತ್ರವಹಿಸಿರುವರೆಂಬ ಆರೋಪದ ಮೇಲೆ 2010ರ ಅಗಸ್ಟ್ 17ರಂದು  ಅವರನ್ನ ಬಂಧಿಸಲಾಗಿತ್ತು. 

Post Comments (+)