ಬೆಂಗಳೂರು ಬೆಳಕಿಂಡಿ

7

ಬೆಂಗಳೂರು ಬೆಳಕಿಂಡಿ

Published:
Updated:

-ಬಸವನಗುಡಿ ಬಳಿ ಇರುವ ಬ್ಯೂಗಲ್ ರಾಕ್ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡ ಕಹಳೇ ಬಂಡೆ. ಈಗದು ಆಕರ್ಷಕ ಉದ್ಯಾನ. ಕನ್ನಡ ಭಾಷೆಗೆ ಜ್ಞಾನಪೀಠ ಗೌರವ ತಂದುಕೊಟ್ಟ ಎಲ್ಲಾ ಬರಹಗಾರರ ಪ್ರತಿಮೆಗಳು ಇರುವುದು ಈ ಉದ್ಯಾನದ ವಿಶೇಷ.-ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದ ಕೈದಿಗಳು ಹಿಂದೆ ಜೈಲಿನಲ್ಲಿದ್ದ ಪ್ರಿಂಟಿಂಗ್ ಪ್ರೆಸ್, ಲಾಲ್‌ಬಾಗ್ ತೋಟ ಹಾಗೂ ವಿಧಾನಸೌಧ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುವ ಪರಿಪಾಠವಿತ್ತು.-ಅಲಸೂರು ಕೆರೆಯ ಬಹುಭಾಗ ಈಗಲೂ ಸೇನೆ ವಶದಲ್ಲಿದೆ. ಇದರಲ್ಲಿರುವ ದ್ವೀಪ ಭಾಗದ ಸುಂದರ ಪರಿಸರದಲ್ಲಿ ಬೆಂಗಳೂರಿಗೆ ಬರುವ ವಿದೇಶಿ ಅತಿಥಿಗಳಿಗೆ ಔತಣ ನೀಡುವ ಸಮಾರಂಭಗಳು ಈಚಿನವರೆಗೂ ನಡೆಯುತ್ತಿದ್ದವು. ಈ ಸಮಾರಂಭಗಳನ್ನು ಬೆಂಗಳೂರು ನಗರ ಪಾಲಿಕೆಯೇ ಏರ್ಪಡಿಸುತ್ತಿತ್ತು.-ಬೆಂಗಳೂರಿನಲ್ಲಿ ಮಹಾರಾಣಿಯವರ ಕಾಲೇಜು 1939 ರಲ್ಲಿ ಆರಂಭವಾಯಿತು.-ಛತ್ರಪತಿ ಶಿವಾಜಿಯ ಎರಡನೇ ಮದುವೆ ಸಾಯಿಬಾಯಿ ನಿಂಬಾಳ್ಕರ್ ಅವರೊಂದಿಗೆ ಜರುಗಿದ್ದು ಬೆಂಗಳೂರಿನಲ್ಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry