ಬೆಂಗಳೂರು ಬೆಳಕಿಂಡಿ

* ಹೈದರಾಲಿ ಆರಂಭಿಸಿದ ಬೆಂಗಳೂರು ಲಾಲ್‌ಬಾಗ್ ಉದ್ಯಾನವನ್ನು ಬ್ರಿಟಿಷ್ ಆಡಳಿತ, 1819ರಲ್ಲಿ ಆಗಿನ ಗವರ್ನರ್ ವಾರನ್ ಹೆಸ್ಟಿಂಗ್ ಅವರಿಗೆ ಕಾಣಿಕೆಯಾಗಿ ನೀಡಿತ್ತು.
* 1915ರ ಮೇ 5ರಂದು ಬೆಂಗಳೂರಿನಲ್ಲಿ ಪ್ರಾರಂಭವಾದಾಗ ಕನ್ನಡ ಸಾಹಿತ್ಯ ಪರಿಷತ್‌ನ ಹೆಸರು ಕರ್ನಾಟಕ ಸಾಹಿತ್ಯ ಪರಿಷತ್ ಎಂದಿತ್ತು. 1938 ರಲ್ಲಿ ಅದರ ಮರು ನಾಮಕರಣವಾಯಿತು.
* ಬೆಂಗಳೂರು ಧರ್ಮಾಂಬುಧಿ ಕೆರೆ ಬಯಲಿನಲ್ಲಿ 6ನೇ ಮೈಸೂರು ಕಾಂಗ್ರೆಸ್ ಅಧಿವೇಶನ 1946ರ ನವೆಂಬರ್ 2 ರಂದು ಜರುಗಿತು (ಈಗಿನ ಸುಭಾಷ್‌ನಗರ ಬಸ್ ನಿಲ್ದಾಣದಲ್ಲಿ).
* ಕಬ್ಬನ್‌ಪಾರ್ಕ್‌ನಲ್ಲಿ ಹಲವರ ಪ್ರತಿಮೆಗಳಿವೆ. ಆದರೆ ಇಲ್ಲಿ ಅನಾವರಣಗೊಂಡ ಮೊದಲ ಪ್ರತಿಮೆ ಸರ್ ಮಾರ್ಕ್ ಕಬ್ಬನ್ ಅವರದು (1866)
* ಮಹಿಳೆಯರಿಗಾಗಿ ಮಹಿಳೆಯರೇ ರೂಪಿಸಿದ ದೇಶದ ಮೊದಲ ಮ್ಯೂಸಿಯಂ `ಶಾಶ್ವತಿ~ ಬೆಂಗಳೂರಿನಲ್ಲಿ ಆರಂಭವಾಗಿದ್ದು 1973 ರಲ್ಲಿ, ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು ಆವರಣದಲ್ಲಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.