ಬೆಂಗಳೂರು ಬೆಳಕಿಂಡಿ

7

ಬೆಂಗಳೂರು ಬೆಳಕಿಂಡಿ

Published:
Updated:
ಬೆಂಗಳೂರು ಬೆಳಕಿಂಡಿ

ಬ್ರಿಟಿಷ್ ರೆಸಿಡೆಂಟರಾಗಿದ್ದ ಆರ್ಥರ್ ಹೆನ್ರಿ ಕೋಲ್ ಅವರ ನೆನಪಿನಲ್ಲಿ ಬೆಂಗಳೂರು ಕಂಟೋನ್‌ಮೆಂಟ್‌ನಲ್ಲಿ ಕೋಲ್ಸ್‌ಪಾರ್ಕ್ ನಿರ್ಮಾಣಗೊಂಡಿತು.

ಈಗಿನ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸರ್ ಮಾರ್ಕ್ ಕಬ್ಬನ್ ನಂತರ ಇಡೀ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಅವರ ಜ್ಞಾಪಕಾರ್ಥ ಈಗ ಬೆಂಗಳೂರಿನಲ್ಲಿದೆ ಕಬ್ಬನ್‌ಪಾರ್ಕ್.

ಭಾರತದ ಗಮರ್ನರ್ ಜನರಲ್ ಲಾರ್ಡ್ ಡಾಲ್‌ಹೌಸಿ 1855 ರಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಇಲ್ಲಿನ ಆಡಳಿತ ಕಾರ್ಯ ಪರಿಶೀಲನೆ ಜತೆಗೆ ಆಹ್ಲಾದಕರ ವಾತಾವರಣವನ್ನು ಸವಿದರು.

ಬೆಂಗಳೂರು ಸೆಂಟ್ರಲ್ ಜೈಲು ನಿರ್ಮಾಣವಾಗಿದ್ದು 1863 ರಲ್ಲಿ. ಇದೀಗ ಅದು ಸ್ವಾತಂತ್ರ್ಯ ಉದ್ಯಾನವಾಗಿ ಜನಾಕರ್ಷಣೆಯ ಪ್ರದೇಶ ಎನಿಸಿಕೊಂಡಿದೆ.

ಕರ್ನಾಟಕ ಹೈಕೋರ್ಟ್ ಈಗ ಕಾರ್ಯ ನಿರ್ವಹಿಸುತ್ತಿರುವ ಕೆಂಪು ಕಟ್ಟಡ ನಿರ್ಮಾಣಗೊಂಡಿದ್ದು ಬ್ರಿಟಿಷ್ ಆಡಳಿತ ಸಚಿವಾಲಯವಾಗಿ. ಬಳಿಕ ಕೆಲಕಾಲ ಇದು ಜನಪ್ರತಿನಿಧಿಗಳ ಸಭಾಂಗಣವಾಗಿ ಉಪಯೋಗವಾಗುತ್ತಿತ್ತು. ಆರಂಭದಲ್ಲಿ ಇದಕ್ಕಿದ್ದ ಹೆಸರು ಬೌರಿಂಗ್ಸ್ ಬಿಲ್ಡಿಂಗ್. ನಂತರ ಅಠಾರಾ ಕಚೇರಿಯಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಂತ ಕಟ್ಟಡ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಉದ್ಘಾಟನೆಯಾಗಿದ್ದು 1933ರ ಮೇ 29 ರಂದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry