ಬೆಂಗಳೂರು ಬೆಳಕಿಂಡಿ

7

ಬೆಂಗಳೂರು ಬೆಳಕಿಂಡಿ

Published:
Updated:

* 1871 ರಿಂದಲೂ ಒಂದು ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆಯುಳ್ಳ ನಗರವಾಗಿತ್ತು ಬೆಂಗಳೂರು.* ಸ್ವಾತಂತ್ರ್ಯ ಪೂರ್ವದಲ್ಲಿ ಲಾಲ್‌ಬಾಗ್ ಆಸುಪಾಸಿನ ಮಾವಳ್ಳಿ ಸಿದ್ದಾಪುರಗಳಲ್ಲಿ ಹಲವು ಸೇಬಿನ ತೋಟಗಳಿದ್ದವು. ಇದು ಪಟ್ಟಿ ಸೇಬಿನ ಒಂದು ಜಾತಿಗೆ ಸೇರಿತ್ತು.* ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿದ್ದಾಗ 1831ರಿಂದ 1947 ರವರೆಗೆ ಬೆಂಗಳೂರು ಬ್ರಿಟಿಷ್ ಆಡಳಿತ ಜಿಲ್ಲೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು.* ಈಗ ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳದ್ದೇ ವಿಚಾರ, ಬೆಂಗಳೂರಿಗೆ ಮೊಟ್ಟಮೊದಲು ರೈಲು ಪ್ರವೇಶ ಮಾಡಿದ್ದು 1859 ರಲ್ಲಿ.* ಪುಟ್ಟಣ್ಣಚೆಟ್ಟಿ ಅವರ ನೆನಪಿನಲ್ಲಿ ಸ್ಥಾಪಿತವಾದ ಪುರಭವನ ಬೆಂಗಳೂರಿನ ಹಳೆಯ ಸಭಾಂಗಣಗಳಲ್ಲೊಂದು. ಇದು ಬೆಂಗಳೂರು ನಗರಪಾಲಿಕೆಯ ಪ್ರಥಮ ಅಧಿಕಾರೇತರ ಚುನಾಯಿತ ಅಧ್ಯಕ್ಷ ಕೆ.ಪಿ. ಪುಟ್ಟಣ್ಣಚೆಟ್ಟಿ ಅವರ ಪರಿಶ್ರಮದಿಂದ ನಿರ್ಮಾಣಗೊಂಡ ಕಟ್ಟಡ.* ಮೊಗಲ್ ಮಾದರಿಯಲ್ಲಿ ಲಾಲ್‌ಬಾಗ್ ಅಭಿವೃದ್ಧಿಗೆ ಮೊದಲು ಕೈ ಹಾಕಿದವರು ಹೈದರಾಲಿ. ಬ್ರಿಟಿಷರು ಬೆಂಗಳೂರನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಇದನ್ನು ನೋಡಿಕೊಳ್ಳುವ ಮೇಲ್ವಿಚಾರಣೆ ಒಪ್ಪಿಸಿದ್ದು ಆಗಿನ ಕಲ್ಕತ್ತಾದ ಬೊಟಾನಿಕಲ್ ಗಾರ್ಡನ್ಸ್‌ಗೆ. ಆ ಸಂದರ್ಭದಲ್ಲಿ ಕೆಂಪು ತೋಟಕ್ಕೆ ವ್ಯವಸ್ಥಿತವಾದ ರೂಪುರೇಷೆ ಕೊಟ್ಟವರು ಗಾರ್ಡನ್ಸ್ ಮೇಲ್ವಿಚಾರಕ ವಾಲಿಚ್ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry