ಬೆಂಗಳೂರು ರನ್ನರ್ ಅಪ್

7

ಬೆಂಗಳೂರು ರನ್ನರ್ ಅಪ್

Published:
Updated:

ಯಲಹಂಕ: ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡಲು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ಸಣ್ಣ ಕೈಗಾರಿಕಾ ಸಚಿವ ನರಸಿಂಹ ನಾಯಕ್ ಹೇಳಿದರು.ಮಹಾಶಿವರಾತ್ರಿ ಹಾಗೂ ದಿವಂಗತ ಮೂರ್ತಿ ಕೂರ್ಲಪ್ಪ ಅವರ ಸ್ಮರಣಾರ್ಥವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಇಲ್ಲಿನ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ `ಮೂರ್ತಿ ಕೂರ್ಲಪ್ಪ ಕಪ್- 2012~ ರಾಜ್ಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ವಾಣಿಶ್ರೀ ವಿಶ್ವನಾಥ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ. ಗೀತಾ ಶಶಿಕುಮಾರ್, ಬಿಬಿಎಂಪಿ ಸದಸ್ಯರಾದ ಎಂ.ಮುನಿರಾಜು, ವೈ.ಎನ್.ಅಶ್ವಥ್, ಕೆ.ವಿ.ಯಶೋದಾ ರವಿಶಂಕರ್, ಮೂರ್ತಿ ಕೂರ್ಲಪ್ಪ ಅವರ ಪತ್ನಿ ವಿಜಯಲಕ್ಷ್ಮಿ ಕೂರ್ಲಪ್ಪ ಉಪಸ್ಥಿತರಿದ್ದರು.ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ಉಡುಪಿ ಫ್ರೆಂಡ್ಸ್ ತಂಡಕ್ಕೆ 1 ಲಕ್ಷ ನಗದು ಮತ್ತು ಟ್ರೋಫಿ ನೀಡಲಾಯಿತು. ದ್ವಿತೀಯ ಬಹುಮಾನ ಪಡೆದ ಬೆಂಗಳೂರಿನ ಎಸ್‌ಜಡ್‌ಸಿಸಿ ತಂಡಕ್ಕೆ 50 ಸಾವಿರ ನಗದು ಮತ್ತು ಟ್ರೋಫಿ, ಉಡುಪಿ ತಂಡದ ಪ್ರದೀಪ್‌ಗೆ  `ಪಂದ್ಯ ಪುರುಷೋತ್ತಮ~ ಎಸ್‌ಜಡ್‌ಸಿಸಿ  ತಂಡದ ಆಟಗಾರ ಸ್ವಸ್ತಿಕ್‌ಗೆ  `ಸರಣಿ ಶ್ರೇಷ್ಠ~ ಬಹುಮಾನ ನೀಡಲಾಯಿತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry