ಬೆಂಗಳೂರು ವಿ.ವಿ.ಗೆ ಭರ್ಜರಿ ಗೆಲುವು

7
ದಕ್ಷಿಣ ವಲಯ ಅಂತರ ವಿ.ವಿ. ಕ್ರಿಕೆಟ್: ಅರ್ಜುನ್ ಹೊಯ್ಸಳ ಅಜೇಯ ದ್ವಿಶತಕ

ಬೆಂಗಳೂರು ವಿ.ವಿ.ಗೆ ಭರ್ಜರಿ ಗೆಲುವು

Published:
Updated:
ಬೆಂಗಳೂರು ವಿ.ವಿ.ಗೆ ಭರ್ಜರಿ ಗೆಲುವು

ಮಣಿಪಾಲ: ಎಡಗೈ ಬ್ಯಾಟ್ಸ್‌ಮನ್ ಅರ್ಜುನ್ ಹೊಯ್ಸಳ ಅವರು 50 ಓವರುಗಳ ಪಂದ್ಯದಲ್ಲಿ ಅಪರೂಪವಾದ ದ್ವಿಶತಕ ಬಾರಿಸಿದರು! ಬೆಂಗಳೂರು ವಿಶ್ವವಿದ್ಯಾಲಯದ ಅರ್ಜುನ್ 162 ಎಸೆತಗಳ ಆಟದಲ್ಲಿ ಅಜೇಯ 233 ರನ್ ಬಾರಿಸಿ, ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಂಡದ ಭರ್ಜರಿ ಗೆಲುವಿನಲ್ಲಿ ಎದ್ದುಕಂಡರು.ಎನ್‌ಐಟಿಕೆ ಮೈದಾನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಎದುರು ಬುಧವಾರ 260 ರನ್‌ಗಳ ಮುಖಭಂಗ ಅನುಭವಿಸಿದ ತಂಡ ವದ್ದೇಶ್ವರಂನ (ಗುಂಟೂರು ಜಿಲ್ಲೆ) ಕೆಎಲ್‌ಇಎಫ್ ವಿಶ್ವವಿದ್ಯಾಲಯ. ಎದುರಾಳಿ  ಬೌಲರುಗಳನ್ನು ಮನಸಾರೆ ದಂಡಿಸಿದ ಅರ್ಜುನ್ 29 ಬೌಂಡರಿಗಳನ್ನು ಹೊಡೆದರು. ಬೆಂಗಳೂರು ವಿ.ವಿ. 50 ಓವರುಗಳಲ್ಲಿ 4 ವಿಕೆಟ್‌ಗೆ 428 ರನ್ ಹೊಡೆದರೆ, ಕೆಎಲ್‌ಇಎಫ್ ವಿ.ವಿ. 168 ರನ್ನಿಗೆ ಆಟ ಮುಗಿಸಿತು.ಸುರಾನಾ ಕಾಲೇಜಿನ ಎಂಬಿಎ ವಿದ್ಯಾರ್ಥಿಯಾಗಿರುವ ಅರ್ಜುನ್ ಈ ಹಿಂದೆ ಕಿರಿಯರ 17, 19 ಮತ್ತು 21ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.`ರಣಜಿ ಕ್ರಿಕೆಟ್ ತಂಡದಲ್ಲಿ ಆಡಬೇಕೆಂಬುದು ನನ್ನ ಆಸೆ. ಅದಕ್ಕಾಗಿ ಶ್ರಮ ಪಡುತ್ತಿದ್ದೇನೆ' ಎಂದು ಅರ್ಜುನ್ ತಿಳಿಸಿದರು.

ಮಣಿಪಾಲ ವಿ.ವಿ. ಮುನ್ನಡೆ: ಇದೇ ವೇಳೆ ಅತಿಥೇಯ ಮಣಿಪಾಲ ವಿ.ವಿ. ತಂಡ 139 ರನ್‌ಗಳಿಂದ ಹೈದರಾಬಾದಿನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು (ಎಂಎಎನ್‌ಯು) ವಿ.ವಿ. ತಂಡದ ಮೇಲೆ ಅರ್ಹ ಜಯ ಪಡೆಯಿತು.ಗುಲ್ಬರ್ಗ ವಿ.ವಿ. ಮತ್ತು ಗುಲ್ಬರ್ಗದ ಕೇಂದ್ರಿಯ ವಿ.ವಿ., ಎದುರಾಳಿಗಳಿಗೆ ಸುಲಭದಲ್ಲೇ ಸೋತವು.

ಸ್ಕೋರುಗಳು: ಎಂಐಟಿ ಮೈದಾನ: ಮಣಿಪಾಲ ವಿ.ವಿ.: 49.3 ಓವರುಗಳಲ್ಲಿ 251 (ಮಯಾಂಕ್ ದಯಾಳ್ 72, ನಿಶಾಂತ್ ವಿ. 58, ಭರತ್ ನೇಗಿ 40; ಎಂ.ಇಮ್ರಾನ್ 32ಕ್ಕೆ3); ಎಂಎಎನ್‌ಯು, ಹೈದರಾಬಾದ್: 21.2 ಓವರುಗಳಲ್ಲಿ 112 (ದಿಲ್ಷದ್ ಅಹ್ಮದ್ 25; ಯಶರಾಜ್ ಶರ್ಮ 13ಕ್ಕೆ3, ಸುಮಿತ್ ಅಗರವಾಲ್ 18ಕ್ಕೆ3).ಮಣಿಪಾಲ ವಿ.ವಿ. ಮೈದಾನ: ಜೆಎನ್‌ಟಿಯು, ಕಾಕಿನಾಡ: 33.4 ಓವರುಗಳಲ್ಲಿ 90 (ಪ್ರಣೀತ್ ಕುಮಾರ್ 46, ಎಂ.ಮರಿಸಾಮಿ 15ಕ್ಕೆ4); ಮಧುರೈ ಕಾಮರಾಜ್ ವಿ.ವಿ: 18.1 ಓವರುಗಳಲ್ಲಿ 7 ವಿಕೆಟ್‌ಗೆ 93 (ಮನೋಜ್ ಕುಮಾರ್ 39; ಪ್ರಣೀತ್ ಕುಮಾರ್ 16ಕ್ಕೆ4). ಕಾಮರಾಜ್ ವಿ.ವಿ.ಗೆ 3 ವಿಕೆಟ್ ಜಯ.ಮಣಿಪಾಲ ವಿ.ವಿ. ಮೈದಾನ2:ಅಣ್ಣಾಮಲೈ, ಚೆನ್ನೈ: 42 ಓವರುಗಳಲ್ಲಿ 125 (ಅರವಿಂದ್ 28; ಎಂ.ಮಲೈರಾಜ್ 30ಕ್ಕೆ3); ಪಾಂಡಿಚೇರಿ ವಿ.ವಿ: 32 ಓವರುಗಳಲ್ಲಿ 80 (ಶಿವಕುಮಾರ 25ಕ್ಕೆ4, ಪ್ರಭಾಕರನ್ 17ಕ್ಕೆ3). ಅಣ್ಣಾಮಲೈ ವಿ.ವಿ.ಗೆ 45 ರನ್ ಜಯ.

ಎಂಜಿಎಂ ಕಾಲೇಜು ಮೈದಾನ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಕೇರಳ:  21.2 ಓವರುಗಳಲ್ಲಿ 54 (ಸೈಯ್ಯದ್ ಮೂಸಾ ಅಲಿ 28; ರಘುನಾಥ್ 16ಕ್ಕೆ5, ರಾಮನಾಥ್ 17ಕ್ಕೆ3); ಕಲಶಲಿಂಗಂ ವಿ.ವಿ, ಮಧುರೈ: 7.5 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 55. ಕಲಶಲಿಂಗಂ ವಿ.ವಿ.ಗೆ 10 ವಿಕೆಟ್ ಜಯ.ಎನ್‌ಐಟಿಕೆ ಮೈದಾನ1:ಕೇಂದ್ರಿಯ ವಿ.ವಿ: ಗುಲ್ಬರ್ಗ: 17.4 ಓವರುಗಳಲ್ಲಿ 46 (ಕಾರ್ತಿಕೇಯನ್ 22ಕ್ಕೆ5, ಶಿವಕುಮಾರ್ 8ಕ್ಕೆ2); ಭಾರತ್ ವಿ.ವಿ., ಚೆನ್ನೈ: 3.2 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 50. ಭಾರತ್ ವಿ.ವಿ.ಗೆ 10 ವಿಕೆಟ್ ಜಯ.

ಎನ್‌ಐಟಿಕೆ ಮೈದಾನ ಸುರತ್ಕಲ್ 2: ಬೆಂಗಳೂರು ವಿ.ವಿ: 50 ಓವರುಗಳಲ್ಲಿ 4 ವಿಕೆಟ್‌ಗೆ 428 (ಅರ್ಜುನ್ ಹೊಯ್ಸಳ ಔಟಾಗದೇ 233, ಸ್ಟಾಲಿನ್ 64, ಉಲ್ಲಾಸ್ 29); ಕೆಎಲ್‌ಇಎಫ್: 36 ಓವರುಗಳಲ್ಲಿ 168 (ಜಯಭರತ್ 70; ಗಿರೀಶ್ ಎಂ.ಕೆ. 25ಕ್ಕೆ4, ಜಿ.ಅನಿಲ್ 34ಕ್ಕೆ3).ಎಸ್‌ಎಂಎಸ್ ಕಾಲೇಜು ಮೈದಾನ, ಬ್ರಹ್ಮಾವರ:

ಗುಲ್ಬರ್ಗ ವಿ.ವಿ: 38.4 ಓವರುಗಳಲ್ಲಿ 186 (ಸಾಯಿಕುಮಾರ್ 36, ವೀರೇಶ್ 34; ಡಿ.ಚಂದ್ರಶೇಖರ್ 13ಕ್ಕೆ3, ಅನಿಲ್ ಕುಮಾರ್ 32ಕ್ಕೆ3); ಶ್ರೀಕೃಷ್ಣ ದೇವರಾಯ ವಿ.ವಿ, ಅನಂತಪುರ: 31.5 ಓವರುಗಳಲ್ಲಿ 2 ವಿಕೆಟ್‌ಗೆ 188 (ಎಸ್.ತಾಹಿರ್ ಔಟಾಗದೇ 71, ಹರ್ಷವರ್ಧನ್ 40, ಮಣಿಕಂಠ 37). ಅನಂತಪುರದ ತಂಡಕ್ಕೆ 8 ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry