ಶುಕ್ರವಾರ, ಜೂನ್ 18, 2021
28 °C

ಬೆಂಗಳೂರು ವಿ.ವಿಯಿಂದ ಇ- ಟೆಂಡರ್ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರೀಕ್ಷಾ ಸಾಮಗ್ರಿ ಖರೀದಿಗಾಗಿ `ಇ- ಪ್ರೊಕ್ಯೂರ್‌ಮೆಂಟ್~ ಬದಲು ಸಾಮಾನ್ಯ ಟೆಂಡರ್ ಕರೆದು ವಿವಾದಕ್ಕೆ ಒಳಗಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯವು ಬುಧವಾರ `ಇ- ಪ್ರೊಕ್ಯೂರ್‌ಮೆಂಟ್~ ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಿದೆ.ವಿ.ವಿ.ಯು ಮೊದಲಿಗೆ `ಇ- ಪ್ರೊಕ್ಯೂರ್‌ಮೆಂಟ್~ ಮೂಲಕ ಟೆಂಡರ್ ಕರೆದು, ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಏಕಾಏಕಿ ಸಾಮಾನ್ಯ ಟೆಂಡರ್ ಕರೆದಿತ್ತು. ಇದು ಕರ್ನಾಟಕ ಪಾರದರ್ಶಕ ಕಾಯ್ದೆಗೆ ವಿರುದ್ಧವಾದ ಕ್ರಮ ಎಂಬುದನ್ನು `ಪ್ರಜಾವಾಣಿ~ಯು ಬಯಲಿಗೆಳೆದಿತ್ತು.`ಪರೀಕ್ಷಾ ಸಾಮಗ್ರಿ ಖರೀದಿ ಟೆಂಡರ್: ಬೆಂಗಳೂರು ವಿವಿಯಿಂದ ಕಾನೂನು ಉಲ್ಲಂಘನೆ~ ಕುರಿತು ಪತ್ರಿಕೆಯ ಫೆ. 20ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.ಪತ್ರಿಕೆಯ ವರದಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯು ಫೆ. 22ರಂದು ಸಾಮಾನ್ಯ ಟೆಂಡರ್ ರದ್ದುಗೊಳಿಸುವಂತೆ ಆದೇಶಿಸಿತ್ತು. ಇ- ಆಡಳಿತ ಮತ್ತು ಉನ್ನತಶಿಕ್ಷಣ ಇಲಾಖೆಗಳ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಇದೀಗ ವಿ.ವಿ.ಯು ಇ- ಪ್ರೊಕ್ಯೂರ್‌ಮೆಂಟ್ ವಿಧಾನದಲ್ಲಿ ಟೆಂಡರ್ ಕರೆದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.