ಶುಕ್ರವಾರ, ನವೆಂಬರ್ 22, 2019
19 °C

ಬೆಂಗಳೂರು ವಿ.ವಿ. ವಿದ್ಯಾರ್ಥಿಗಳ ಬಸ್ ಪ್ರಯಾಣ ದರ ಹೆಚ್ಚಳ

Published:
Updated:

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ.ನಗರದ ವಿವಿಧ ಭಾಗಗಳಿಂದ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ 17 ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಮುಂದಿನ ವರ್ಷದಿಂದ ಈ ಬಸ್‌ಗಳ ಸಂಖ್ಯೆ 18ಕ್ಕೆ ಹೆಚ್ಚಲಿದೆ. ಈ ಬಸ್‌ಗಳನ್ನು ಬಿಎಂಟಿಸಿಯಿಂದ ವಿವಿ ಬಾಡಿಗೆಗೆ ಪಡೆದಿದೆ. ಪ್ರಸ್ತುತ      ವಿದ್ಯಾರ್ಥಿಗಳು ಬಸ್‌ಗೆ ವಾರ್ಷಿಕರೂ600 ಪಾವತಿಸುತ್ತಿದ್ದರು. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳುರೂ1,000 ಪಾವತಿಸಬೇಕಿದೆ.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯ ಬಳಿಕ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಸುದ್ದಿಗಾರರೊಂದಿಗೆ ಮಾತ ನಾಡಿ, `ಫೆಬ್ರುವರಿಯಲ್ಲೇ ಪ್ರಯಾಣದರ ಏರಿಕೆ ಆಗಿತ್ತು.   ಆದರೆ, ವಿಶ್ವವಿದ್ಯಾಲಯದ ದರ ಏರಿಕೆಗೆ ಅನುಮತಿ ನೀಡಿರಲಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಯಾಣದರದಲ್ಲಿ ಏರಿಕೆ ಆಗಲಿದೆ' ಎಂದರು.`ವಿಶ್ವವಿದ್ಯಾಲಯದ ನೌಕರರ ಬಸ್ ಪ್ರಯಾಣ ದರದಲ್ಲೂ ಏರಿಕೆಯಾಗಲಿದೆ.ರೂ10,000 ವರೆಗೆ ವೇತನ ಪಡೆಯುವವರು ತಿಂಗಳಿಗೆರೂ250 ಪ್ರಯಾಣದರ ಪಾವತಿಸಬೇಕಿತ್ತು.ರೂ10,000- 20,000 ದ ನಡುವೆ ವೇತನ ಪಡೆಯುವವರುರೂ350 ಹಾಗೂ 20,000ಕ್ಕಿಂತ ಅಧಿಕ ವೇತನ ಪಡೆಯುವವರುರೂ450 ಪಾವತಿಸಬೇಕಿತ್ತು. ಈ ನೌಕರರು ಇನ್ನು ಮುಂದೆ ಕ್ರಮವಾಗಿರೂ350,ರೂ450 ಹಾಗೂರೂ550 ಪಾವತಿಸಬೇಕಿದೆ. ಸಾರಿಗೆ ಸೌಲಭ್ಯ ಒದಗಿಸುತ್ತಿರುವುದರಿಂದ ವಿಶ್ವ ವಿದ್ಯಾಲಯಕ್ಕೆ ತಿಂಗಳಿಗೆರೂ8 ಲಕ್ಷ ಹೆಚ್ಚುವರಿ ಹೊರೆ ಆಗುತ್ತಿತ್ತು. ಪ್ರಯಾಣದರ ಏರಿಕೆಯಿಂದ ಹೊರೆ ಕಡಿಮೆಯಾಗಬಹುದು' ಎಂದು ಅವರು ತಿಳಿಸಿದರು.`ಜ್ಞಾನಭಾರತಿ ಕ್ಯಾಂಪಸ್‌ನಿಂದ ಸೆಂಟ್ರಲ್ ಕಾಲೇಜಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದರು.`ವಿವಿಧ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯವು ನೀಡಿರುವ ಜಮೀನಿನ ಲೀಸ್ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಂಸ್ಥೆ (ಐಸಾಕ್), ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್, ನ್ಯಾಕ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಜಮೀನು ನೀಡಲಾಗಿತ್ತು. ಈವರೆಗೆ ಎಕರೆಗೆರೂ100 ಪಡೆಯಲಾಗುತ್ತಿತ್ತು. ಇದೀಗ ಎಕರೆಗೆರೂ1,000 ದಿಂದರೂ5,000 ದ ವರೆಗೆ ನಿಗದಿ ಮಾಡಲಾಗಿದೆ. ವಿವಿ 200 ಎಕರೆ ಜಾಗವನ್ನು ಭೋಗ್ಯಕ್ಕೆ ನೀಡಿದೆ' ಎಂದರು.

ಪ್ರತಿಕ್ರಿಯಿಸಿ (+)