ಬುಧವಾರ, ಅಕ್ಟೋಬರ್ 16, 2019
28 °C

ಬೆಂಗಳೂರು ವಿವಿ ವಿಭಜನೆ

Published:
Updated:

ಬೆಂಗಳೂರು: ಆಡಳಿತಾತ್ಮಕ ಅನುಕೂಲಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಎರಡಾಗಿ ವಿಭಜಿಸ ಲಾ ಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು.ಇಲ್ಲಿನ ಬಿಜೆಪಿ ಕಚೇರಿ `ಜಗನ್ನಾಥ ಭವನ~ದಲ್ಲಿ ಶುಕ್ರವಾರ ನಡೆದ `ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಘಟಕ~ದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು `ಬೆಂಗಳೂರು ವಿ.ವಿ. ವ್ಯಾಪ್ತಿ ಸುಮಾರು 600 ಕಾಲೇಜುಗಳು ಬರುತ್ತವೆ. ವಿ.ವಿ.ಯನ್ನು ವಿಭಜಿಸಿ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳ ವ್ಯಾಪ್ತಿಯ ಕಾಲೇಜುಗಳಿಗೆ ಪ್ರತ್ಯೇಕ ವಿ.ವಿ.ಗಳನ್ನು ಸ್ಥಾಪಿಸಲಾಗುವುದು~ ಎಂದು ತಿಳಿಸಿದರು.

Post Comments (+)