ಬೆಂಗಳೂರು ವೈದ್ಯ ಲಂಡನ್‌ನಲ್ಲಿ ಆತ್ಮಹತ್ಯೆ

7
ಅಂತರ್‌ಧರ್ಮೀಯ ಮದುವೆಗೆ ಪೋಷಕರ ನಕಾರ

ಬೆಂಗಳೂರು ವೈದ್ಯ ಲಂಡನ್‌ನಲ್ಲಿ ಆತ್ಮಹತ್ಯೆ

Published:
Updated:

ಲಂಡನ್ (ಐಎಎನ್‌ಎಸ್): ಅಂತರಧರ್ಮೀಯ ಮದುವೆಗೆ ಪೋಷಕರು ನಿರಾಕರಿಸಿದ ಕಾರಣ ಬೆಂಗಳೂರು ಮೂಲದ ಅರಿವಳಿಕೆ ತಜ್ಞ ಡಾ. ಮಧು ಹೊನ್ನಯ್ಯ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ತಮ್ಮ ಸಹೋದ್ಯೋಗಿ ಎಮ್ಮಾ ರಿಗ್ಟನ್ (32) ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಆದರೆ ಬೆಂಗಳೂರಿನಲ್ಲಿರುವ ಹೊನ್ನಯ್ಯ ಪೋಷಕರು ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಅವರು ತೀವ್ರ ನೊಂದು ಅರಿವಳಿಕೆಯ ಔಷಧಿಯನ್ನೇ ಚುಚ್ಚಿಕೊಂಡು ಸಾವಿಗೆ ಶರಣಾದರು ಎಂದು `ಡೈಲಿ ಮೇಲ್' ವರದಿ ಮಾಡಿದೆ.ವೇಲ್ಸ್‌ನ ಕರಾವಳಿ ತೀರದ ನಗರ ಸ್ವಾನ್ ಸೀಯ ಲಿವರ್‌ಪೂಲ್ ಆಸ್ಪತ್ರೆಯಲ್ಲಿ ಹೊನ್ನಯ್ಯ ಮತ್ತು ರಿಗ್ಟನ್ ಜತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2008ರಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ಕಾಲದ ನಂತರ ರಿಗ್ಟನ್‌ಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗ ದೊರಕಿತು.  ಆದರೂ ಆಕೆ ಹೊನ್ನಯ್ಯ ಜತೆ ಸಂಪರ್ಕದಲ್ಲಿದ್ದರು. 2010ರಲ್ಲಿ ಈ ಜೋಡಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿತ್ತು.ಮಗ ಬೇರೆ  ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಷಯ ಬ್ರಿಟನ್ನಿಗೆ ಬಂದಾಗ ಪೋಷಕರಿಗೆ ತಿಳಿಯಿತು. ಇದರಿಂದ ತೀವ್ರ ಅಸಮಾಧಾನಗೊಂಡು ತಮ್ಮ ಸಮುದಾಯದ ಕನ್ಯೆಯನ್ನೇ ಮಗನಿಗೆ ತಂದುಕೊಳ್ಳಲು ಮುಂದಾಗಿದ್ದರು.`ಆಚಾರ ವಿಚಾರ, ಸಂಪ್ರದಾಯದಲ್ಲಿನ ಭಿನ್ನತೆಯಿಂದಾಗಿ ಈ ಮದುವೆಗೆ ಪೋಷಕರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಹೊನ್ನಯ್ಯ ನಿಶ್ಚಿತಾರ್ಥ ಆಗಿರುವ ವಿಷಯವನ್ನು ತಿಳಿಸಿರಲಿಲ್ಲ' ಎಂದು ಪ್ರಕರಣದ ತನಿಖಾಧಿಕಾರಿ  ಇವಾನ್ಸ್ ತಿಳಿಸಿದ್ದಾರೆ.ಪ್ರೇಯಸಿಯಿಂದ ಬೇರೆಯಾದ ಹೊನ್ನಯ್ಯ, ಏಳು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಬರೆದಿಟ್ಟಿದ್ದ ಎಂಟು ಪುಟಗಳ ಪತ್ರದಲ್ಲಿ `ಈ ಸಾವಿಗೆ ನಾನೇ ಹೊಣೆ' ಎಂದು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry