ಭಾನುವಾರ, ಮೇ 9, 2021
19 °C

ಬೆಂಗಳೂರು ಸಹಿತ ಹಲವೆಡೆ ಭೂಕಂಪ, ಇಂಡೋನೇಷ್ಯಾದಲ್ಲಿ ಸುನಾಮಿ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು : ಬೆಂಗಳೂರು ನಗರ ಸೇರಿದಂತೆ ದೇಶದ ಹಲವಾರು ಕಡೆ ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಭೂಮಿ ಗಡ ಗಡ ನಡುಗಿದ ಅನುಭವವಾಯಿತು. ಇದೇ ವೇಳೆಗೆ ಇಂಡೋನೇಷ್ಯಾದಲ್ಲೂ ತೀವ್ರ ಭೂಕಂಪದ ಅನುಭವವಾಗಿದ್ದು, ಸುನಾಮಿ ಅಪಾಯದ ಎಚ್ಚರಿಕೆ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.ವಿವಿಧ ಕಡೆಗಳಿಂದ ಬಂದ ವರದಿಗಳ ಪ್ರಕಾರ ಚೆನ್ನೈ, ಕೋಲ್ಕತ್ತ, ಗುವಾಹಟಿ, ಭುವನೇಶ್ವರ, ತಿರುವನಂತಪುರ, ಕೊಚ್ಚಿ, ಕಟಕ್ ಮತ್ತಿತರ ನಗರಗಳಲ್ಲೂ ಭೂಕಂಪದ ಅನುಭವವಾಗಿದೆ.ಬೆಂಗಳೂರಿನಲ್ಲಿ ಮಹಾತ್ಮಾ ಗಾಂಧಿ ರಸ್ತೆ, ಗಂಗಾನಗರ, ಸುಲ್ತಾನ ಪಾಳ್ಯ, ಆರ್.ಟಿ. ನಗರಗಳಲ್ಲಿ ಭೂಕಂಪದ ಅನುಭವವಾಗಿದ್ದು ಅಪಾರ್ಟ್ ಮೆಂಟ್ ಗಳಲ್ಲಿದ್ದ ಜನ ಕಟ್ಟಡಗಳಿಂದ ಹೊರಕ್ಕೆ ಓಡಿ ಬಂದರು. ಕೋಲ್ಕತ್ತ, ಚೆನ್ನೈ ನಗರಗಳಲ್ಲೂ ಭೂಕಂಪದ ಅನುಭವ ಆಗುತ್ತಿದ್ದಂತೆಯೇ ಮಹಡಿಗಳಲ್ಲಿದ ಜನ ರಸ್ತೆಗೆ ಓಡಿ ಬಂದರು.ಭೂಕಂಪದ ಅನುಭವವಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಕೋಲ್ಕತ್ತಾದಲ್ಲೂ ಮೆಟ್ರೋರೈಲು ಸಂಚಾರ ಸ್ಥಗಿತಗೊಳಿಸಿದ ಬಗ್ಗೆ ವರದಿ ಬಂದಿದೆ..ಎಪಿ ವರದಿ ಪ್ರಕಾರ ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 8.9 ಪ್ರಮಾಣದ ಭೂಕಂಪ ಸಂಭವಿಸಿದ್ದು, ಸುನಾಮಿ ಸಾಧ್ಯತೆ ಬಗ್ಗೆ ಭಾರತ, ಅಮೆರಿಕ ಹಾಗೂ ಇಂಡೋನೇಷ್ಯಾದ ಹವಾಮಾನ ಹಾಗೂ ಭೂಗರ್ಭ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

 

ಇಂಡೋನೇಷ್ಯಾದ ಪ್ರಾಂತೀಯ ರಾಜಧಾನಿ ಬಂಡಾ ಏಸ್ ದಿಂದ 33 ಕಿಮೀ ದೂರದಲ್ಲಿ ಸಾಗರ ಗರ್ಭದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ತಜ್ಞರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.