ಶುಕ್ರವಾರ, ಡಿಸೆಂಬರ್ 6, 2019
18 °C

ಬೆಂಗಳೂರು ಸಿಟಿ ಬ್ಯಾಂಕ್‌ಗೆ 105

Published:
Updated:
ಬೆಂಗಳೂರು ಸಿಟಿ ಬ್ಯಾಂಕ್‌ಗೆ 105

ಸಹಕಾರಿ ಅಂದೋಲನ 18ನೇ ಶತಮಾನದಲ್ಲಿ ಪ್ರಪಂಚದ ಎಲ್ಲೆಡೆ ಪ್ರಾರಂಭವಾಗಿದ್ದು, 19ನೇ ಶತಮಾನದ ಪ್ರಾರಂಭದಿಂದಲೇ ಇದರ ಪ್ರಭಾವ ಭಾರತದ ಮೇಲೂ ಬೀಳತೊಡಗಿತು. 1905ರಲ್ಲಿ ಈ ಸಂಸ್ಥೆ ಪತ್ತಿನ ಸಹಕಾರಿ ಸಂಘವಾಗಿ ಜನ್ಮತಾಳಿ 1907 ರಲ್ಲಿ, ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು. 105 ವಸಂತಗಳನ್ನು ದಾಟಿದ ಈ ಮಹಾಸಂಸ್ಥೆ `ಅಖಂಡ ಭಾರತದ ಪ್ರಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್~ ಕೂಡ ಹೌದು. ಅಂದು ದಿವಂಗತ ರಾಮಸ್ವಾಮಯ್ಯನವರ ನೇತೃತ್ವದಲ್ಲಿ ಕೇವಲ 150 ಸದಸ್ಯರಿಂದ, ರೂ. 2,727 ಷೇರು ಬಂಡವಾಳ, ರೂ. 2,265 ಠೇವಣಿ, ರೂ. 4,036 ಸಾಲ ಹಾಗೂ ಮುಂಗಡದಿಂದ ಪ್ರಾರಂಭವಾದ ಈ ಸಂಸ್ಥೆ ಬೆಂಗಳೂರಿನಲ್ಲಿ ಹೆಮ್ಮರವಾಗಿ ಬೆಳೆದು, ಇಂದು ಕರ್ನಾಟಕದ ನಂಬರ್ ಒಂದನೇ ಸ್ಥಾನದಲ್ಲಿದೆ. ಶತಮಾನೋತ್ಸವ ಆಚರಿಸಿಕೊಂಡ ಈ ಬೃಹತ್ ಸಂಸ್ಥೆ, ಈ ಕೆಳಗೆ ನಮೂದಿಸಿದ ಅಂಕಿ ಅಂಶಗಳಿಂದ ತನ್ನ ಸದೃಢತೆಯನ್ನು ಕಾಪಾಡಿಕೊಂಡುಬಂದಿದೆ.

ಗ್ರಾಹಕರನ್ನು `ದೇವರೆಂದು~ ನಂಬಿ ನಗುಮುಖದ ಸೇವೆ ಸಲ್ಲಿಸುತ್ತಿರುವುದೇ ಈ ಬ್ಯಾಂಕಿನ ಯಶಸ್ಸಿಗೆ ಕಾರಣ. ಬೆಂಗಳೂರಿನಲ್ಲಿ ಬ್ಯಾಂಕಿನ ಆಡಳಿತ ಕಚೇರಿ ಪಂಪಮಹಾಕವಿ ರಸ್ತೆ, ಚಾಮರಾಜಪೇಟೆಯಲ್ಲಿ ಸ್ವಂತ ಕಟ್ಟಡದಲ್ಲಿದೆ. ಈ ಬ್ಯಾಂಕಿಗೆ ನಗರದಲ್ಲಿ 13 ಶಾಖೆಗಳಿದ್ದು, ಇಂದಿರಾನಗರ ಶಾಖೆ ಕೂಡ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್ ಅಂತ್ಯದೊಳಗೆ ಇನ್ನೆರಡು ಶಾಖೆಗಳನ್ನು ಬೆಂಗಳೂರಿನಲ್ಲಿ ತೆರೆಯುವ ಕಾರ್ಯಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಗ್ರಾಹಕರು, ಸದಸ್ಯರು, ಹಾಗೂ ಸಿಬ್ಬಂದಿ ವರ್ಗದವರಿಗೆ ಹಲವಾರು ಸೌಕರ್ಯಗಳನ್ನು ಸದಾ ಒದಗಿಸುತ್ತಾ, ಸಮೃದ್ದಿಯ ಪಥದಲ್ಲಿ ಹೆಜ್ಜೆ ಇಡುತ್ತಾ ಬಂದಿರುವ ಈ ಬ್ಯಾಂಕ್, ಸಕಲರಿಗೆ ಸ್ಪಂದಿಸುತ್ತಿರುವ ಬಗೆ ಹೀಗಿರುತ್ತದೆ.

* ಹಿರಿಯ ನಾಗರಿಕರಿಗೆ, ಠೇವಣಿಯಲ್ಲಿ ಹೆಚ್ಚಿನ ಬಡ್ಡಿ ಕೊಡುವುದರ ಜೊತೆಗೆ ಡಿ.ಡಿ. ಪೇ ಆರ್ಡರ್ ಶುಲ್ಕರಹಿತವಾಗಿ ಒದಗಿಸುತ್ತದೆ. ಪ್ರಾಯಶಃ ಇಂತಹ ಸೌಲತ್ತು ಬೇರಾವ ಬ್ಯಾಂಕಿನಲ್ಲಿಯೂ ಇರಲಾರದು.

* ಪ್ರತಿವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ದಿನಗಳಂದು ಠೇವಣಿ ಹಾಗೂ ಸಾಲಪಡೆದ ಉತ್ತಮ ಗ್ರಾಹಕರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ಇತ್ತು ಸನ್ಮಾನಿಸಲಾಗುವುದು. ಜೊತೆಗೆ ಗ್ರಾಹಕರ ಹಾಗೂ ಸಿಬ್ಬಂದಿ ವರ್ಗದ ಪ್ರತಿಭಾವಂತ ಮಕ್ಕಳಿಗೆ ರೂ. 1,000 ಗೌರವಧನ, ನೆನಪಿನ ಕಾಣಿಕೆ ಹಾಗೂ ಶಾಲುಹೊದಿಸಿ ಪ್ರೋತ್ಸಾಹಿಸುತ್ತಾರೆ.

* ಸದಸ್ಯರಿಗೆ ಸಾಲ ಸೌಕರ್ಯ ಒದಗಿಸುವುದರ ಜೊತೆಗೆ ರೂ. 5,000 ಮರಣೋತ್ತರ ಪರಿಹಾರ ನೀಡಲಾಗುತ್ತಿದೆ.

* ಸಿಬ್ಬಂದಿ ವರ್ಗದವರಿಗೆ, ಮನೆಕಟ್ಟಲು, ವಾಹನ ಕೊಳ್ಳಲು, ಮತ್ತು ಇನ್ನಿತರ ವಿಚಾರಗಳಿಗೆ ಕಡಿವೆು ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಜೊತೆಗೆ ಉತ್ತಮ ವೇತನ ಶ್ರೇಣಿ, ಗ್ರೂಪ್ ಇನ್ಶೂರೆನ್ಸ್, ಸಮವಸ್ತ್ರ, ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ವಾರ್ಷಿಕ ರೂ. 5,000 ನೆರವು ನೀಡಲಾಗುವುದು.

ದಿ. ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಇಂದು ಸ್ವಂತ ಬಂಡವಾಳವಾದ ಷೇರು ಮೊಬಲಗು ಹಾಗೂ ಕಾದಿಟ್ಟ ನಿಧಿಗಳಿಂದಲೇ, ಬ್ಯಾಂಕ್ ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಇದು ಅತೀ ಭದ್ರತೆಯ ಸಂಕೇತವಾಗಿದೆ. ಈ ಹಿರಿಯ ಬ್ಯಾಂಕಿನ ಕಿರಿಯ ಅಂದರೆ ಸಣ್ಣ ವಯಸ್ಸಿನ ಅಧ್ಯಕ್ಷರಾದ ಡಾ. ಟಿ.ಎಂ. ದೇವರಾಜ್ (37 ವರ್ಷ) ಗುರಿ, 100 ಕೋಟಿ ಷೇರು ಬಂಡವಾಳ. 1,000 ಕೋಟಿ ಠೇವಣಿ ಹಾಗೂ 800 ಕೋಟಿ ಸಾಲ ಹಾಗೂ ಮುಂಗಡ ಹಾಗೂ ಅಧಿಕ ಡಿವಿಡೆಂಡ್ ಹಂಚುವಿಕೆ, ಜೊತೆಗೆ ಬ್ಯಾಂಕನ್ನು ಶೆಡ್ಯೂಲ್ ಬ್ಯಾಂಕಾಗಿ ಪರಿವರ್ತಿಸುವುದು. ಇಂದು (ಜ.26) ಬೆಳಿಗ್ಗೆ 9.30ಕ್ಕೆ ಸರಿಯಾಗಿ ರಾಷ್ಟ್ರಧ್ವಜ ಹರಿಸುವುದರೊಂದಿಗೆ ಉತ್ತಮ ಗ್ರಾಹಕರನ್ನು ಹಾಗೂ ಅವರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು `ದಿ. ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್~ ತನ್ನ ಆಡಳಿತ ಕಚೇರಿ ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ತಮ್ಮೆಲ್ಲರನ್ನೂ ಕೈಜೋಡಿಸಿ ಬರಮಾಡಿಕೊಳ್ಳುತ್ತಿದೆ.

ತಾ. 31.12.2011 (ಲಕ್ಷಗಳಲ್ಲಿ)

ಷೇರು ಮೊಬಲಗು 3,266.19

ಕಾದಿಟ್ಟ ನಿಧಿ ಹಾಗೂ ಫಂಡುಗಳು 5,827.41

ಠೇವಣಿ  69,911.49

ಸಾಲ-ಮುಂಗಡ 48,780.11

ದುಡಿಯುವ ಬಂಡವಾಳ 80,813.86

ನಿವ್ವಳ ಲಾಭ 579.33

(9 ತಿಂಗಳಿಗೆ)

ಪ್ರತಿಕ್ರಿಯಿಸಿ (+)