ಬೆಂಬಲಿಗರ ಪ್ರತಿಭಟನೆ, ಲಾಠಿಚಾರ್ಜ್

7
ಅಜಿತ್‌ ಸಿಂಗ್‌ ಸರ್ಕಾರಿ ಬಂಗಲೆ ತೆರವು ವಿವಾದ

ಬೆಂಬಲಿಗರ ಪ್ರತಿಭಟನೆ, ಲಾಠಿಚಾರ್ಜ್

Published:
Updated:

ಗಾಜಿಯಾಬಾದ್‌ (ಪಿಟಿಐ): ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಅಜಿತ್‌ ಸಿಂಗ್‌ ಅವರು ಸರ್ಕಾರಿ ನಿವಾಸ ತೊರೆಯುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿರುವುದು ಪ್ರತಿಭಟನೆಗೆ ಕಾರಣ­ವಾಗಿದೆ. ಪ್ರತಿಭಟನಾಕಾರರು ಪೊಲೀಸ­ರತ್ತ ಕಲ್ಲು ತೂರಾಟ ನಡೆಸಿದರು. ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು 18 ಜನರು ಗಾಯಗೊಂಡಿದ್ದಾರೆ.ಭಾರತೀಯ ಕಿಸಾನ್‌ ಯೂನಿಯನ್‌ ಮತ್ತು ಆರ್‌ಎಲ್‌ಡಿ ಕಾರ್ಯಕರ್ತರು ಮುರಾದ್‌ನಗರದಲ್ಲಿ ಗುರುವಾರ ಮೆರ­ವಣಿಗೆ ನಡೆಸಿದರು. ಗಂಗಾನಗರ್‌–ಮುರಾದ್‌ನಗರದಿಂದ ದೆಹಲಿಗೆ ನೀರು ಪೂರೈಕೆ ಕಡಿತಗೊಳಿಸುವ  ಪ್ರಯತ್ನವನ್ನು ಪೊಲೀಸರು ತಡೆದರು.‘ದೆಹಲಿಯ ನೀರು ಪೂರೈಕೆಯನ್ನು ಕಡಿತ­­ಗೊಳಿಸುವುದಾಗಿ ಪ್ರತಿಭಟನಾ­ಕಾ­ರರು ಮೊದಲೇ ಪ್ರಕಟಿಸಿದ್ದರು. ಅದ­ಕ್ಕಾಗಿ ಆರ್‌ಎಲ್‌ಡಿ ಮತ್ತು ಭಾರತೀಯ ಕಿಸಾನ್‌ ಯೂನಿಯನ್‌ನ 10 ಸಾವಿ­ರಕ್ಕೂ ಹೆಚ್ಚು ಜನರು ಸೇರಿದ್ದರು. ಜನರು ಕಲ್ಲು ಮತ್ತು ಬಾಟಲಿಗಳೊಂದಿಗೆ ಸಜ್ಜಾಗಿ ಬಂದಿದ್ದರಿಂದ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು’ ಎಂದು ಮೀರಠ್‌ ಪೊಲೀಸ್‌ ಮಹಾನಿರೀಕ್ಷಕ ಅಲೋಕ್‌ ಶರ್ಮಾ ಹೇಳಿದ್ದಾರೆ.ಜನರನ್ನು ನಿಯಂ­ತ್ರಿ­ಸಲು ಪೊಲೀ­ಸರು ಅಶ್ರುವಾಯು ಷೆಲ್ ಮತ್ತು ರಬ್ಬರ್‌ ಗುಂಡು ಸಿಡಿಸಿದ್ದಾರೆ. ಅಧಿಕೃತ ನಿವಾಸ ತೆರವು­ಗೊಳಿಸಲು ನಿರಾಕರಿಸಿರುವ ಮಾಜಿ ಸಂಸದರಾದ ಅಜಿತ್‌ ಸಿಂಗ್‌, ಜಿತೇಂದ್ರ ಸಿಂಗ್‌, ಮೊಹಮ್ಮದ್‌ ಅಜರುದ್ದೀನ್‌  ನಿವಾಸಗಳ ವಿದ್ಯುತ್‌, ನೀರು ಸಂಪರ್ಕ ಸರ್ಕಾರ ಕಳೆದ ವಾರ ಕಡಿತಗೊಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry