ಬೆಚ್ಚದ ಬಿಚ್ಚಮ್ಮ ಬತ್ತಲಾಗು... ಬಯಲಾಗು

ಶುಕ್ರವಾರ, ಜೂಲೈ 19, 2019
28 °C

ಬೆಚ್ಚದ ಬಿಚ್ಚಮ್ಮ ಬತ್ತಲಾಗು... ಬಯಲಾಗು

Published:
Updated:

ಕೆಂಪಂಚಿನ ಬಿಳಿ ಸೀರೆ. ಕುಪ್ಪಸವಿಲ್ಲ. ಎರಡೂ ಕೈಗಳಲ್ಲಿ ಬಿಳಿ ಹಾಗೂ ಕೆಂಪು ಬಳೆಗಳು. ಮೃದಂಗದ ಆಕಾರದ ಕುಂಕುಮಕೆಂಪು ಬಣ್ಣದ ದಿಂಬಿನ ಮೇಲೆ ಬಲ ಮೊಣಕೈ ಇಟ್ಟ ನಟಿ ತಮ್ಮ ಬಲಬದಿಯಲ್ಲಿರುವ ಕ್ಯಾಮೆರಾ ಕಣ್ಣನ್ನು ಎದುರುಗೊಂಡಿದ್ದಾರೆ. ಹಣೆ ಮೇಲೆ ಕಾಸಿನಗಲ ಕುಂಕುಮ.

 

ಸೊಂಟವನ್ನು ಸುತ್ತಿದ ಪ್ಲಾಟಿನಂ ಉಡಿದಾರ. ಕಾಲ್ಗೆಜ್ಜೆಯಲ್ಲೂ ಎರಡೆರಡು ಮುತ್ತು. ಮಾದಕ ನೋಟ. ಮೆಲ್ಲ ಗಾಳಿ ಮುದ್ದಿಸುತ್ತಿರುವ ನವಿರು ಕೂದಲು.ಸ್ಟೈಲಿಶ್‌ಗೆ ತನ್ನ ಕಲ್ಪನೆಯ ವಸ್ತ್ರ ನಟಿಗೆ ಹಸನಾಗಿ ಒಪ್ಪಿದೆ ಎಂಬ ಹೆಮ್ಮೆ. ಕ್ಯಾಮೆರಾ ಕಣ್ಣಿಗೆ ಬಯಸಿದ ಚಿತ್ರ ಸಿಕ್ಕ ಖುಷಿ. ಅದನ್ನು ಪ್ರಕಟಿಸಲಿರುವ ನಿಯತಕಾಲಿಕೆಯ ಸಂಪಾದಕನಿಗೆ ಪಾಯಸ ಸವಿದಷ್ಟೇ ಆನಂದ.ಆ ಪೋಸನ್ನು ತುಸುವೂ ಮುಜುಗರವಿಲ್ಲದೆ ನೀಡಿ, `ಓಕೇನಾ~ ಎಂಬ ಪ್ರಶ್ನಾರ್ಥಕ ನೋಟ ಹರಿಬಿಟ್ಟು ಮೇಲೆದ್ದ ನಟಿಯ ಹೆಸರು ಪವೋಲಿ ದಾಮ್. ಬಂಗಾಳಿ ಮೂಲದ ಹುಡುಗಿ. `ಹೇಟ್ ಸ್ಟೋರಿ~ಯ ಪವೋಲಿ ಎಂದರೆ ಅನೇಕರಿಗೆ ಈ ನಟಿಯ ಪರಿಚಯ ಸಿಕ್ಕೀತು.ಬಣ್ಣ ಎಣ್ಣೆಗೆಂಪು. ಸಿಂಹಕಟಿ. ಎತ್ತರದ ನಿಲುವು. ಬಂಗಾಳಿ ಚಿತ್ರ `ಚತ್ರಕ್~ನಲ್ಲಿ ಹೆಚ್ಚೂಕಮ್ಮಿ ಬೆತ್ತಲಾಗಿ ಕಾಣಿಸಿಕೊಂಡಿದ್ದ ಈ ನಟಿ `ಹೇಟ್ ಸ್ಟೋರಿ~ಯ ಹಸಿಬಿಸಿ ದೃಶ್ಯಗಳಲ್ಲೂ ಪಾತ್ರವನ್ನು ಆವಾಹಿಸಿಕೊಂಡಂತೆ ನಟಿಸಿದ್ದು ಬಾಲಿವುಡ್‌ನ ಅನೇಕರ ಗಮನ ಸೆಳೆದಿತ್ತು.`ಯಾರ ಹಂಗೂ ಇಲ್ಲ, ನಂಗೆ ನಾನೇ ಎಲ್ಲ~ ಎನ್ನುವ ಪವೋಲಿ ಕೌಟುಂಬಿಕ ಹಿನ್ನೆಲೆಯನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಗಂಡುಮಕ್ಕಳ ಹಾಗೂ ಹೆಣ್ಣುಮಕ್ಕಳ ಹೊಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಪೈಕಿ. `ನೀನು ಸೆಕ್ಸಿ. ನಿನ್ನ ಅಂಗಾಂಗಗಳು ಪ್ರಮಾಣಬದ್ಧವಾಗಿವೆ.ನಿನ್ನನ್ನು ನೋಡಿದರೆ ಹೊಟ್ಟೆಕಿಚ್ಚಾಗುತ್ತದೆ. ಇದ್ದರೆ ನಿನ್ನ ಬಣ್ಣವೇ ಇರಬೇಕು; ತುಂಬಾ ಬೆಳ್ಳಗಿದ್ದರೆ ಅಷ್ಟು ಚೆಂದ ಕಾಣಲ್ಲ. ನಿನಗೆ ನಾಚಿಕೆಯೇ ಇಲ್ಲವಲ್ಲ; ಅದು ಹೇಗೆ ಹೀಗೆ... ಎಂದು ಅನೇಕರು ಹೇಳಿದ್ದು, ಕೇಳಿದ್ದು ಇದೆ. ನಾನು ಅವಕ್ಕೆಲ್ಲಾ ಎಷ್ಟೋ ಸಲ ನಗೆಯ ಉತ್ತರ ಕೊಟ್ಟಿದ್ದೇನೆ. ನಟಿಯಾಗಲು ಬಂದವಳು ನಾನು.

 

ನಟನೆ ಎಂದಮೇಲೆ ಸ್ಕ್ರಿಪ್ಟ್‌ಗೆ ಬದ್ಧವಾಗಿರಬೇಕು. ಅಲ್ಲಿ ಬಟ್ಟೆ ಬಿಚ್ಚುವುದು ಅರ್ಥಪೂರ್ಣ ಎನಿಸಿದರೆ ಅದಕ್ಕೂ ನಾನು ಸಿದ್ಧ. ಬಟ್ಟೆ ಬಿಚ್ಚುವುದು ಆ ಪಾತ್ರಕ್ಕೆ ತರವಲ್ಲ ಎಂದರೆ ನಾನು ಮುಚ್ಚಮ್ಮ. ನಮ್ಮನ್ನು ನಾವು ತೆರೆದುಕೊಳ್ಳುವ ಮೂಲಕ ಹೆಚ್ಚು ಹೆಚ್ಚು ಬಯಲಾಗುತ್ತೇವೆ. ಜಗತ್ತನ್ನು ಒಳಗೊಳ್ಳುತ್ತೇವೆ ಎಂದು ನಂಬಿದವಳು ನಾನು~- ಇದು ಪವೋಲಿ ಸಿಡಿಸುವ ಮಾತಿನ ಬಾಂಬ್.`ಹೇಟ್ ಸ್ಟೋರಿ~ ಚಿತ್ರದ ಸ್ಕ್ರಿಪ್ಟನ್ನು ವಿವೇಕ್ ಅಗ್ನಿಹೋತ್ರಿ ಕೊಟ್ಟಾಗ, ಈ ಹುಡುಗಿ ಪಾತ್ರಕ್ಕೆ ಒಪ್ಪುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತಂತೆ. ಎರಡೇ ದಿನಗಳಲ್ಲಿ ಫೋನ್ ಮಾಡಿದ ಪವೋಲಿ, `ಆಗಬಹುದು~ ಎಂದಾಗ ವಿವೇಕ್ ನಿರಾಳವಾದರಂತೆ, ಶೂಟಿಂಗ್ ಮುಗಿದ ಮೇಲೆ ಅವರು ಹೇಳಿದ್ದು- `ಬೋಲ್ಡ್ ಎಂಬುದನ್ನು ಅತಿ ಸಹಜವಾದ ವರ್ತನೆಯಾಗಿಸಿಕೊಂಡಿರುವ ನಮ್ಮ ನಡುವಿನ ಅಪರೂಪದ ನಟಿ ಇವಳು~!

ಹೇಟ್ ಸ್ಟೋರಿಯ ನಿರ್ದೇಶಕರ ಹೊಗಳಿಕೆಯನ್ನು ಬೆನ್ನಿಗಿಟ್ಟುಕೊಂಡಿರುವ ಪವೋಲಿ ಗಟ್ಟಿಗಿತ್ತಿ.ಮನೆಗೆ ಬಂದ ನಾಲ್ಕೈದು ಡಜನ್ ಪ್ರೇಮಪತ್ರಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕಿಟ್ಟಿದ್ದಾರೆ. ಡೇಟಿಂಗ್ ಅವಕಾಶಗಳನ್ನು ಬದಿಗೊತ್ತಿದ್ದಾರೆ. ಸ್ಕ್ರಿಪ್ಟ್ ಓದುವುದಷ್ಟೇ ಸದ್ಯದ ಆದ್ಯತೆ. ಒಪ್ಪಿಗೆಯಾಗುವ ಸುಂದರಾಂಗನ ಜೊತೆಗಷ್ಟೇ ನಿಜವಾದ ಸರಸ ಎನ್ನುವ ಪವೋಲಿ, ಮದುವೆಯೇ ಈ ಕಾಲದಲ್ಲಿ ಲಿವ್-ಇನ್ ರಿಲೇಷನ್‌ಶಿಪ್ ಆಗಿ ಬದಲಾಗುತ್ತಿದೆಯಷ್ಟೆ ಎಂದು ನಿರುಮ್ಮಳವಾಗಿ ಹೇಳುತ್ತಾರೆ.

 

ಒಂದು ರಾತ್ರಿ ಮಂಚ ಹಂಚಿಕೊಳ್ಳುವ ಪ್ರೇಮಪ್ರಸಂಗಗಳನ್ನು ದ್ವೇಷಿಸುವ ಇವರಿಗೆ ಸೆಟ್‌ನಲ್ಲಿ ಎಷ್ಟೇ ಜನರಿದ್ದರೂ ಬಿಚ್ಚಮ್ಮನಾಗಬಲ್ಲ ಧೈರ್ಯ. ಅಂದರೆ, ಮನಸ್ಸಿನ ಭಾವವೇ ಬೇರೆ; ಕ್ಯಾಮೆರಾ ಎದುರಿನ ಧೋರಣೆಯೇ ಬೇರೆ. ಅಷ್ಟರ ಮಟ್ಟಿಗೆ ಪ್ರಾಕ್ಟಿಕಲ್ ಆಗಿರುವ ಪವೋಲಿ, `ಆಧುನಿಕ ಶತಮಾನದ ಅಪರೂಪದ ಹೆಣ್ಣು~ ಎಂದೇ ತಮ್ಮನ್ನು ತಾವು ಬಣ್ಣಿಸಿಕೊಳ್ಳುತ್ತಾರೆ.ಹುಡುಗನೊಬ್ಬ ಸರಸನಿರತನಾಗುವಂತೆ ಪ್ರೇರೇಪಿಸಲು ಏನು ಮಾಡುವಿರಿ ಎಂಬ ಕೀಟಲೆ ಪ್ರಶ್ನೆಗೆ ಅವರ ಉತ್ತರ ಹೀಗಿದೆ: `ಎದುರಲ್ಲಿ ನಾನಿದ್ದ ಮೇಲೆ ಸರಸಕ್ಕೆ ಮನಸ್ಸು ಮಾಡಲು ಇನ್ನೇನು ಬೇಕು?~`ಮೇಲ್ವಸ್ತ್ರವನ್ನು ತುಸು ಸರಿಸಿ~ ಎಂದು ಆಧುನಿಕ ಜಗತ್ತಿನ ನಗರ ನಾಗರಿಕ ಕ್ಯಾಮೆರಾಮನ್ ನಾಜೂಕಾಗಿ ಮಾಡಿಕೊಳ್ಳುವ ಮನವಿಗೆ ಪವೋಲಿ ಪ್ರತಿಕ್ರಿಯೆ- `ಎಷ್ಟು ಸರಿಸಬೇಕು; ಪೂರ್ತಿ ಎದೆ ಕಾಣಬೇಕೆ?~ಆಶ್ಚರ್ಯ, ಪ್ರಶ್ನಾರ್ಥಕ ಚಿಹ್ನೆಗಳನ್ನು ಪದೇಪದೇ ಜೋಡಿಸಿಕೊಳ್ಳುವಂತೆ ಮಾತನಾಡುವ ಪವೋಲಿ ನಟಿಸಲಿರುವ ಮುಂದಿನ ಚಿತ್ರ `ಲವ್ ಗೇಮ್~. ಅದರಲ್ಲಿ ಅವರು ಎಷ್ಟು ಬಿಚ್ಚಮ್ಮನಾಗುತ್ತಾರೆ ಎಂಬುದು ಅನೇಕರಲ್ಲಿ ಉಳಿದಿರುವ ಕುತೂಹಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry