ಬೆಟ್ಟದಲ್ಲಿ ನೀರಿನ ಸೆಲೆ: ಸಂತಸ

7

ಬೆಟ್ಟದಲ್ಲಿ ನೀರಿನ ಸೆಲೆ: ಸಂತಸ

Published:
Updated:

ಹನುಮಸಾಗರ: ನಾಲ್ಕಾರು ವರ್ಷ­ಗಳಿಂದ ಈ ಭಾಗದಲ್ಲಿ ಅಂತರ್ಜಲ ಕುಸಿತಗೊಂಡಿದ್ದರಿಂದ ಜನತೆ ಕುಡಿ­ಯುವ ನೀರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದರು. ಆದರೆ ಮೂರು ದಿನಗಳ ಹಿಂದೆ ಬಿದ್ದ ಭಾರಿ ಮಳೆಗೆ ವೆಂಕಟೇಶ್ವರ ಕೆರೆ ತುಂಬಿದ್ದು, ಗ್ರಾಮದ ಕೊಳವೆ ಬಾವಿಗಳಲ್ಲಿ ನೀರು ತುಂಬಿದೆ.ಈ ಬೆಟ್ಟದ ಮೂಲೆಯೊಂದರಲ್ಲಿ ಹೆಚ್ಚು ಮಳೆಯಾದರೆ ಸಹಜವಾಗಿ  ಬರುವ ಈ ನೀರಿಗೆ ಸ್ಥಳೀಯರು ಆನೆ ಊಟಿ ಎಂದು ಕರೆಯುತ್ತಾರೆ.  ಎಂಟು ವರ್ಷಗಳ ಅವಧಿಯಲ್ಲಿ ಇದೆ ಪ್ರಥಮ ಬಾರಿಗೆ ಈ ನೀರಿನ ಸೆಲೆ ಬಂದಿದೆ.ಆದರೆ ಈ ಸೆಲೆ ನೀರು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬರಬೇಕಾದರೆ ಹೆಚ್ಚಿನ ಮಳೆ ಅವಶ್ಯವಾಗಿದೆ, ಹೆಚ್ಚು ಮಳೆಯಾದರೆ ಈ ನೀರು ಆನೆಯ ಸೊಂಡಿಲು ತರಹ ಬೀಳುವುದರಿಂದ ಜನರು ಆನೆ ಊಟಿ(ಸೆಲೆ) ಎಂದು ಹೇಳುತ್ತಾರೆ.ಒಂದು ಬಾರಿ ಈ ರೀತಿ ಊಟಿ ಕಿತ್ತಿ ಬಂದರೆ ನಮ್ಮ ಭಾಗದ ಕರೆ ತುಂಬಿಕೊಂಡು ಅಂತರ್ಜಲ ಭರ್ತಿ­ಯಾಗುತ್ತವೆ ಎಂದು ಸುರೇಶಬಾಬು ಜಮಖಂಡಿಕರ ಹೇಳುತ್ತಾರೆ.ನೀರಿಗಾಗಿ ತತ್ತರಿಸಿ ಹೋಗಿದ್ದ ಇಲ್ಲಿನ ಜನರು ಸೊಗಸಾಗಿ ಹಳ್ಳದ ರೀತಿಯಲ್ಲಿ ಹರಿದು ಬರುತ್ತಿದ್ದ  ನೀರು  ಸಂತಸ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry