ಶನಿವಾರ, ಮೇ 15, 2021
24 °C

ಬೆಟ್ಟಿಂಗ್: ರಾಜ್‌ಕುಂದ್ರಾ ತಪ್ಪೊಪ್ಪಿಗೆ - ದೆಹಲಿ ಪೊಲೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಟ್ಟಿಂಗ್: ರಾಜ್‌ಕುಂದ್ರಾ ತಪ್ಪೊಪ್ಪಿಗೆ - ದೆಹಲಿ ಪೊಲೀಸ್

ನವದೆಹಲಿ (ಪಿಟಿಐ/ಐಎಎನ್‌ಎಸ್): ಐಪಿಎಲ್ ಪಂದ್ಯಗಳಲ್ಲಿ ತಾವು ಬೆಟ್ಟಿಂಗ್ ನಡೆಸುತ್ತಿದ್ದುದಾಗಿ ರಾಜಸ್ತಾನ್ ರಾಯಲ್ಸ್ ತಂಡದ ಮಾಲೀಕ ರಾಜ್‌ಕುಂದ್ರಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದು, ಅವರ ಪಾಸ್‌ಪೋರ್ಟ್‌ನ್ನು ಗುರುವಾರ ಪೊಲೀಸರು ಮುಟ್ಟುಗೋಲು ಹಾಕಿಕೊಂಡು ದೇಶ ಬಿಟ್ಟು ತೆರಳದಂತೆ ಸೂಚನೆ ನೀಡಿದ್ದಾರೆ.ಕುಂದ್ರಾ ಬೆಟ್ಟಿಂಗ್ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು, ಅವರು ಅವರದೇ ತಂಡದ ಪರ ಬೆಟ್ಟಿಂಗ್ ಮಾಡುತ್ತಿದ್ದರು ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರು ತಿಳಿಸಿದ್ದಾರೆ. ಕುಂದ್ರಾ ಅವರ ಗೆಳೆಯ ಹಾಗೂ ಬುಕ್ಕಿಯಾಗಿರುವ ಉಮೇಶ್ ಗೊಯೆಂಕಾ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ.ಬ್ರಿಟನ್ ಪ್ರಜೆಯಾಗಿರುವ ಕುಂದ್ರಾ ದುಬೈ, ಉಕ್ರೇನ್ ಸೇರಿದಂತೆ ವಿದೇಶಗಳಲ್ಲಿ ವ್ಯಾಪಾರ-ವ್ಯವಹಾರಗಳನ್ನು ಹೊಂದಿದ್ದು ದೇಶಬಿಟ್ಟು ಹೋಗುವ ಸಾಧ್ಯತೆ ಇದೆ. ತನಿಖೆಗೆ ಸಂಬಂಧಿಸಿದ ಹಾಗೆ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಆದ್ದರಿಂದ ತಾವು ಈ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸರು ವಿವರಣೆ ನೀಡಿದ್ದಾರೆ.ರಾಜ್‌ಕುಂದ್ರಾ ಅವರನ್ನು ಬಂಧಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ತಾವಿನ್ನು ಅದರ ಬಗ್ಗೆ ನಿರ್ಧರಿಸಿಲ್ಲ. ಮತ್ತೊಮ್ಮೆ ವಿಚಾರಣೆ ನಡೆಸಿದ ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.ಇದಲ್ಲದೆ ಕುಂದ್ರಾ ಅವರ ಗೆಳೆಯ ಹಾಗೂ ಅವರ ವ್ಯವಹಾರಗಳಲ್ಲಿ ಭಾಗೀದಾರರಾಗಿರುವ ಉಮೇಶ್ ಗೊಯೆಂಕಾ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ರಾಜ್‌ಕುಂದ್ರಾ ಅವರನ್ನು ನವದೆಹಲಿಯ ಲೋಧಿ ರಸ್ತೆಯಲ್ಲಿರುವ ದೆಹಲಿ ಪೊಲೀಸ್ ವಿಶೇಷ ಘಟಕ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆಯಷ್ಟೆ 11 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದರು.ಕುಂದ್ರಾ ಅವರನ್ನು ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಮಾತ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವರು ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಈ ಮಧ್ಯೆ ತಮ್ಮನ್ನು ಪೊಲೀಸರು ವಿಚಾರಣೆಗೊಳಪಡಿಸಿರುವುದರ ಸಂಬಂಧ ಮಾಧ್ಯಮಗಳ ವರದಿಗೆ ರಾಜ್‌ಕುಂದ್ರಾ ಹಾಗೂ ಅವರ ಪತ್ನಿ ನಟಿ ಶಿಲ್ಪಾಶೆಟ್ಟಿ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.