ಬುಧವಾರ, ಮೇ 12, 2021
24 °C

ಬೆಟ್ಟಿಂಗ್: ವಿಕ್ರಮ್ ಅಗರ್‌ವಾಲ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಉದ್ಯಮಿ ವಿಕ್ರಮ್ ಅಗರ್‌ವಾಲ್ ಅವರನ್ನು ಚೆನ್ನೈ ಪೊಲೀಸರು ಸೋಮವಾರ ಬಂಧಿಸಿ ಸುಮಾರು ಏಳು ಗಂಟೆ ವಿಚಾರಣೆಗೆ ಒಳಪಡಿಸಿದರು.`ಬುಕ್ಕಿ ಉತ್ತಮ್ ಸಿ. ಜೈನ್ ಅಲಿಯಾಸ್ ಕಿಟ್ಟಿ ಜೊತೆ ಹಣಕಾಸು ವ್ಯವಹಾರ ನಡೆಸಿರುವ ಬಗ್ಗೆ ನಮಗೆ ಅನುಮಾನವಿದೆ.

ಆದ್ದರಿಂದ ವಿಕ್ರಮ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು' ಎಂದು ಕ್ರೈ ಬ್ರಾಂಚ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಎನ್. ವೆಂಕಟರಾಮನ್ ತಿಳಿಸಿದ್ದಾರೆ.  ಕಿಟ್ಟಿ ಬುಕ್ಕಿಂಗ್ ನಡೆಸಲು ವಿಕ್ರಮ್  ಅವರ ಹೋಟೆಲನ್ನು ಬಳಸಿಕೊಳ್ಳುತ್ತಿದ್ದ ಎನ್ನುವ ಅಂಶ ತನಿಖೆಯಿಂದ ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.