ಬೆದರಿಕೆ ಒಡ್ಡಿಲ್ಲ: ಕರವೇ ಅಧ್ಯಕ್ಷ

7

ಬೆದರಿಕೆ ಒಡ್ಡಿಲ್ಲ: ಕರವೇ ಅಧ್ಯಕ್ಷ

Published:
Updated:

ಬೆಂಗಳೂರು: `ನಾನಾಗಲಿ ನನ್ನ ಕಾರ್ಯಕರ್ತರಾಗಲಿ ಯಾರಿಗೂ ಯಾವುದೇ ರೀತಿಯ ಬೆದರಿಕೆ ಒಡ್ಡಿಲ್ಲ. ಅಗ್ರಹಾರ ದಾಸರಹಳ್ಳಿ ನಿವಾಸಿ ಎ.ಎಸ್.ನಾಗರಾಜ್ ಎಂಬುವವರು ನನ್ನ ವಿರುದ್ಧ ಪಿತೂರಿ ನಡೆಸಿ ದೂರು ದಾಖಲಿಸುವ ನಾಟಕ ಆಡಿದ್ದಾರೆ~ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.`ನಾಗರಾಜ್ ನಮ್ಮ ವೇದಿಕೆಯ ಕಾರ್ಯದರ್ಶಿಯಾಗಿದ್ದರು. ಅಗ್ರಹಾರ ದಾಸರಹಳ್ಳಿಯ ಸೌಂದರ್ಯ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಸುತ್ತಮುತ್ತಲ ಗ್ರಾಹಕರನ್ನು ವಂಚಿಸಿ ಗ್ಯಾಸ್ ಸಿಲಿಂಡರ್‌ಗಳನ್ನು ಹೋಟೆಲ್‌ಗಳಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ವೇದಿಕೆಗೆ  ಬಂದಿದ್ದವು~ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. `ಹಲವು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲೂ ಹಣಕ್ಕಾಗಿ ಒತ್ತಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಪಕ್ಕದ ಮನೆಯ ವಕೀಲರ ಕೊಲೆ ಯತ್ನ ನಡೆಸಿದ ಸಂಬಂಧ ನಾಗರಾಜ್ ದಂಪತಿ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲೇ ದೂರು ದಾಖಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅವರನ್ನು ವೇದಿಕೆಯಿಂದ ಹೊರಗೆ ಹಾಕುವ ತೀರ್ಮಾನ ಕೈಗೊಂಡೆವು. ಇದಕ್ಕೆ ಪ್ರತಿಯಾಗಿ ಅವರು ದುರುದ್ದೇಶದ ದೂರು ನೀಡಿದ್ದಾರೆ~ ಎಂದು ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry