ಮಂಗಳವಾರ, ಮೇ 11, 2021
24 °C

ಬೆದರಿಸಿದವರನ್ನುಹೆಸರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ~ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ತಮಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಬೇಕೆಂದು~ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡರು.ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಿರೇಮಠ ಅವರ ಹೋರಾಟದ ಬಗ್ಗೆ ತಮಗೆ ಅಪಾರ ಗೌರವವಿದೆ. ಅವರ ಹೋರಾಟಕ್ಕೆ ತಾವು ಕೂಡಾ ಬೆಂಬಲ ನೀಡುವುದಾಗಿ ಘೋಷಿಸಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವರಿಗೆ ಬೆದರಿಕೆ ಹಾಕುವ ಪ್ರವೃತ್ತಿ ಸರಿಯಲ್ಲ. ಅಂತಹ ಗೂಂಡಾಗಿರಿ ಪ್ರವೃತ್ತಿಯನ್ನು ಯಾವತ್ತು ಸಹಿಸುವುದಿಲ್ಲ ಎಂದು ಹೇಳಿದರು.ಹಿರೇಮಠ ಅವರ ಜತೆ ಮಾತುಕತೆ ನಡೆಸುವಿರಾ ಎಂಬ ಪ್ರಶ್ನೆಗೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿರುವ ಹಿರೇಮಠರು ತಮಗೆ ವೈರಿಯಲ್ಲ. ಅವರ ತಮ್ಮ ಹೋರಾಟ ಕುರಿತು ಮಾತುಕತೆ ನಡೆಸಲು ಮುಂದಾದರೆ, ತಾವು ಕೂಡಾ ಸಿದ್ಧರಿರುವುದಾಗಿ ಯಡಿಯೂರಪ್ಪ ತಿಳಿಸಿದರು. ಬೆದರಿಕೆ: ಸಂಭಾಷಣೆ ದಾಖಲಿಸಿಕೊಂಡಿಲ್ಲ

ಧಾರವಾಡ: ~ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಲ್ಕು ವಾರಗಳ ಹಿಂದೆ ಮಾತುಕತೆಗೆ ಬರುವಂತೆ ಆಪ್ತರೊಬ್ಬರ ಮೂಲಕ ಹೇಳಿ ಕಳುಹಿಸಿದ್ದು ಸತ್ಯ. ಆದರೆ ಈ ಕರೆಯನ್ನು ನಾನು ನಿರೀಕ್ಷಿಸದೇ ಇದ್ದ ಕಾರಣ ಆ ಸಂಭಾಷಣೆಯನ್ನು ದಾಖಲಿಸಿಕೊಂಡಿಲ್ಲ~ ಎಂದು ನಗರದ ~ಸಮಾಜ ಪರಿವರ್ತನ ಸಮುದಾಯದ~ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಆರ್.ಹಿರೇಮಠ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.~ಬೆದರಿಕೆ ಹಾಕಿದ್ದರೆ ಅದನ್ನು ಸಾಬೀತುಪಡಿಸಲಿ~ ಎಂಬ ಯಡಿಯೂರಪ್ಪ ಅವರ ಸವಾಲಿಗೆ ಪ್ರತಿಕ್ರಿಯೆ ನೀಡಿದ ಅವರು, ~ಕರೆ ಸ್ವೀಕರಿಸಿದ ಆಪ್ತರ ಹೆಸರನ್ನು ನಾನೀಗ ಬಹಿರಂಗಪಡಿಸುವುದಿಲ್ಲ. ಗಾಂಧೀಜಿ ತತ್ವದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ನಮ್ಮಂಥ ಭ್ರಷ್ಟಾಚಾರ ವಿರೋಧಿಗಳಿಗೆ ಸಶಸ್ತ್ರ ಭದ್ರತೆಯನ್ನು ನೀಡಬೇಕೆಂದು ಕೇಳುವುದಿಲ್ಲ. ಆದರೆ ಸರ್ಕಾರದ ಬಳಿ ಗುಪ್ತಚರ ಇಲಾಖೆ ಇದೆ. ಅದನ್ನು ಬಳಸಿಕೊಂಡು ಬೆದರಿಕೆ ಒಡ್ಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.