ಬೆನಜೀರ್ ತಾಯಿ ನುಸ್ರತ್ ಭುಟ್ಟೋ ನಿಧನ

7

ಬೆನಜೀರ್ ತಾಯಿ ನುಸ್ರತ್ ಭುಟ್ಟೋ ನಿಧನ

Published:
Updated:
ಬೆನಜೀರ್ ತಾಯಿ ನುಸ್ರತ್ ಭುಟ್ಟೋ ನಿಧನ

ಇಸ್ಲಾಮಾಬಾದ್ (ಐಎಎನ್ಎಸ್): ಹತ್ಯೆಗೀಡಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ತಾಯಿ ನುಸ್ರತ್ ಭುಟ್ಟೋ ಅವರು ದುಬೈಯಲ್ಲಿ ನಿಧನರಾಗಿದ್ದಾರೆ ಎಂದು ಜಿಇಒ ನ್ಯೂಸ್ ವರದಿ ಮಾಡಿದೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.ನುಸ್ರತ್ ಅವರು ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಪತ್ನಿ. 1951ರಲ್ಲಿ ಇವರಿಬ್ಬರ ವಿವಾಹ ನೆರವೇರಿತ್ತು.ದೀರ್ಘಕಾಲದ ಅಸ್ವಸ್ಥತೆ ಪರಿಣಾಮವಾಗಿ ನುಸ್ರತ್ ಭುಟ್ಟೋ ಮೃತರಾದರು ಎಂದು ವರದಿ ಹೇಳಿದೆ.1929ರ ಮಾರ್ಚ್ 23ರಂದು ಇರಾನಿನ ಎಸ್ಫಹಾನ್ ನಗರದಲ್ಲಿ ಜನಿಸಿದ್ದ ನುಸ್ರತ್ ಭುಟ್ಟೋ ಶ್ರೀಮಂತ ಎಸ್ಫಹಾನಿ ಕುಟುಂಬಕ್ಕೆ ಸೇರಿದವರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry