ಬೆನಜೀರ್ ಭುಟ್ಟೊ ಮೊಬೈಲ್ ವಶ

7

ಬೆನಜೀರ್ ಭುಟ್ಟೊ ಮೊಬೈಲ್ ವಶ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಂಯುಕ್ತ ತನಿಖಾ ಏಜೆನ್ಸಿ (ಎಫ್‌ಐಎ) ಬೆನಜೀರ್ ಹತ್ಯೆಯಾದ ಸಮಯದಲ್ಲಿ ಬಳಸಿದ್ದ ಎರಡು ಬ್ಲಾಕ್ ಬೆರ್ರಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವಶ ಪಡಿಸಿಕೊಂಡಿದೆ.ಈ ಮೊಬೈಲ್ ಸೆಟ್‌ಗಳು ಬೆನಜೀರ್ ಅವರ ಕರಾಚಿಯಲ್ಲಿರುವ ಬಿಲ್ವಾಲ್ ಬಂಗ್ಲೆಯಲ್ಲಿ ಪತ್ತೆಯಾಗಿದ್ದು, ಈ ಬಂಗ್ಲೆಯ ನೌಕರರೊಬ್ಬರಿಂದ ಅದನ್ನು ಎಫ್‌ಐಎ ವಶಪಡಿಸಿಕೊಂಡಿದೆ.ಆದರೆ, ಬೆನಜೀರ್ ಭುಟ್ಟೊ ಅವರ ಮನೆಯಲ್ಲೇ ಇದ್ದ ಈ ಮೊಬೈಲ್ ಸೆಟ್‌ಗಳನ್ನು ಪತ್ತೆ ಮಾಡಲು ಮೂರು ವರ್ಷಗಳ ಕಾಲ ಹಿಡಿಯಿತೆ? ಎಂಬ ಪ್ರಶ್ನೆಗೆ ಎಫ್‌ಐಎ ಅಥವಾ ಬಿಲ್ವಾಲ್ ಬಂಗ್ಲೆಯ ವಕ್ತಾರು ಯಾವುದೇ ಪತ್ರಿಕ್ರಿಯೆ ನೀಡಿಲ್ಲ. ಬೆನಜೀರ್ ಅವರನ್ನು  ಡಿಸೆಂಬರ್, 2007ರಲ್ಲಿ ಹತ್ಯೆ ಮಾಡಲಾಗಿತ್ತು.ಹಾಗೆಯೇ ಬಿಲ್ವಾಲ್ ಬಂಗ್ಲೆಯಲ್ಲಿ ಪತ್ತೆಯಾದ ಈ ಮೊಬೈಲ್ ಸೆಟ್‌ಗಳನ್ನು ಬಂಗ್ಲೆಯ ನೌಕರರೇ ಖುದ್ದಾಗಿ ಎಫ್‌ಐಎಗೆ ನೀಡಿದ್ದಾರೆ ಎಂದು ಬಿಲ್ವಾಲ್ ಬಂಗ್ಲೆಯ ಮೂಲಗಳು ಹೇಳಿವೆ. ಆದರೆ ಈ ಸೆಟ್‌ಗಳನ್ನು ತನಿಖೆ ಆರಂಭಗೊಂಡಾಗಲೇ ಯಾಕೆ ಎಫ್‌ಐಎಗೆ ನೀಡಲಿಲ್ಲ ಎಂಬ ಪ್ರಶ್ನೆಗೆ ಬಿಲ್ವಾಲ್ ಬಂಗ್ಲೆಯ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry