ಬೆನ್ನಿಹಿನ್‌ಗೆ ಅವಕಾಶ ಬೇಡ: ಬಿಜೆಪಿ

7

ಬೆನ್ನಿಹಿನ್‌ಗೆ ಅವಕಾಶ ಬೇಡ: ಬಿಜೆಪಿ

Published:
Updated:

ಬೆಂಗಳೂರು: ಧರ್ಮ ಪ್ರಚಾರಕ ಬೆನ್ನಿಹಿನ್‌ಗೆ ನಗರದಲ್ಲಿ ಸಮಾವೇಶ ನಡೆಸಲು ಅವಕಾಶ ನೀಡಬಾರದು ಎಂದು ಬಿಜೆಪಿ ವಕ್ತಾರ ಎಸ್‌. ಸುರೇಶ್‌­ಕುಮಾರ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಹೊರಟಿದ್ದ ಸರ್ಕಾರ ಬೆನ್ನಿಹಿನ್‌ಗೆ ರತ್ನಗಂಬಳಿಯ ಸ್ವಾಗತ ನೀಡಲು ಹೊರಟಿರುವುದು ಸರಿಯಲ್ಲ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.ಬೆನ್ನಿಹಿನ್‌ ಜನರಿಗೆ ಮಂಕುಬೂದಿ ಎರಚಿ ಮತಾಂತರ ಕಾರ್ಯದಲ್ಲಿ ತೊಡಗಿದ್ದಾರೆ. ಮತಾಂತರ ಉದ್ದೇಶ ಇಟ್ಟುಕೊಂಡೇ ನಗರದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ವೋಟ್‌ಬ್ಯಾಂಕ್‌ ಉದ್ದೇಶ ಇಟ್ಟು ಕೊಂಡು ಕಾಂಗ್ರೆಸ್‌ ಪಕ್ಷ ಸಮಾವೇಶಕ್ಕೆ ಅವಕಾಶ ನೀಡಿದೆ ಎಂದರು.8ರಂದು ಪ್ರತಿಭಟನೆ: ಅಡುಗೆ ಅನಿಲ, ಆಟೊಗ್ಯಾಸ್‌ ದರ ಏರಿಕೆ ಖಂಡಿಸಿ ಇದೇ 8ರಂದು ಮಂಡಲಮಟ್ಟದಲ್ಲಿ

ಪ್ರತಿ­ಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಜೊಲ್ಲೆ ತಿಳಿಸಿದರು.‘ಸ್ಪಷ್ಟ ಆದೇಶ ನೀಡಿ’

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಆದರೂ ಆಧಾರ್‌ ಸಂಖ್ಯೆ ನೀಡು­ವಂತೆ ಇಂಡಿಯನ್‌ ಆಯಿಲ್‌ ಕಾರ್ಪೋ­ರೇಷನ್‌ ಗ್ರಾಹಕರಿಗೆ ಸೂಚಿ­ಸು­ತ್ತಿರುವುದು ಸರಿಯಲ್ಲ ಎಂದು ಎಸ್‌.ಸುರೇಶ್‌ಕುಮಾರ್‌ ಟೀಕಿಸಿದರು.

ಪೆಟ್ರೋಲಿಯಂ ಸಚಿವ ಎಂ.­ವೀರಪ್ಪ ಮೊಯಿಲಿ, ರಾಜ್ಯದ ಆಹಾರ ಸಚಿವ ದಿನೇಶ್‌ ಗುಂಡೂ­ರಾವ್‌ ಅವರು ‘ಆಧಾರ್‌ ಕಡ್ಡಾಯ ಅಲ್ಲ ಎಂದು ಹೇಳಿದ್ದಾರೆ. ಇಷ್ಟಾ­ದರೂ ಆಯಿಲ್‌ ಕಂಪೆನಿಗಳು ಆಧಾರ್‌ ಸಂಖ್ಯೆ ಕೇಳುತ್ತಿರುವುದು ಖಂಡನಾರ್ಹ. ಸರ್ಕಾರ ಕಠಿಣ ಎಚ್ಚರಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry