ಶನಿವಾರ, ಜೂನ್ 19, 2021
26 °C

ಬೆನ್ನು ನೋವಿನ ಕಾರಣ ವಿಶ್ರಾಂತಿ: ಸೆಹ್ವಾಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): `ಬೆನ್ನು ನೋವಿನ ಕಾರಣ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ವಿಷಯವನ್ನು ನಾನು ಮುಂಚಿತವಾಗಿಯೇ ಬಿಸಿಸಿಐಗೆ ತಿಳಿಸಿದ್ದೆ~ ಎಂದು ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.`ನನಗೆ ಬೆನ್ನು  ನೋವಿದೆ. ಹಾಗಾಗಿ ವಿಶ್ರಾಂತಿ ಬೇಕು. ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ನಾನು ತಂಡದ ಆಡಳಿತದಿಂದ ಯಾವುದೇ ವಿಷಯ ಮುಚ್ಚಿಟ್ಟಿಲ್ಲ~ ಎಂದು ಸೆಹ್ವಾಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.ಫಿಟ್‌ನೆಸ್ ಸಮಸ್ಯೆ ಕಾರಣ ಸೆಹ್ವಾಗ್ ಅವರನ್ನು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ತಂಡದಿಂದ ಕೈಬಿಡಲಾಗಿದೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಕೆ.ಶ್ರೀಕಾಂತ್ ನುಡಿದಿದ್ದರು.ಈ ಸಂದರ್ಭದಲ್ಲಿ ವರದಿಗಾರರೊಬ್ಬರು ಮತ್ತೊಂದು ಪ್ರಶ್ನೆ ಕೇಳಿದರು. ಆಗ ತಾಳ್ಮೆ ಕಳೆದುಕೊಂಡು ಶ್ರೀಕಾಂತ್ `ಶಟ್ ಅಪ್~ ಎಂದಿದ್ದರು. ಆಕಸ್ಮಾತ್ ವಿಶ್ರಾಂತಿ ನೀಡುವಂತೆ ಸೆಹ್ವಾಗ್ ಬಿಸಿಸಿಐ ಬಳಿ ಮನವಿ ಮಾಡಿದ್ದರೆ ಅದನ್ನು ಶ್ರೀಕಾಂತ್ ಮಾಧ್ಯಮದವರಿಗೆ ತಿಳಿಸುತ್ತಿದ್ದರು.ಅಷ್ಟು ಮಾತ್ರವಲ್ಲದೇ, ಶ್ರೀಕಾಂತ್ ಬುಧವಾರ ಟಿವಿ ಚಾನಲೊಂದರ ಜೊತೆ ಮಾತನಾಡುತ್ತಾ `ವೀರೂಗೆ ಭುಜ ನೋವಿದೆ~ ಎಂದಿದ್ದರು. ಆದರೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಸೆಹ್ವಾಗ್ `ಬೆನ್ನು ನೋವಿದೆ~ ಎಂದು ಹೇಳಿದ್ದಾರೆ. ಈ ಎರಡು ರೀತಿಯ ಅಭಿಪ್ರಾಯ ಅಚ್ಚರಿಗೆ ಕಾರಣ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.