ಭಾನುವಾರ, ಜೂನ್ 13, 2021
24 °C

ಬೆರಗು ಗೊಳಿಸಿದ ತೆಂಗಿನಕಾಯಿ ಸಾಹಸ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತೆಂಗಿನಕಾಯಿ ಸುಲಿಯಲು ಹಲವು ಆಯುಧ ಬಳಸಿ ನಾವು ಬೆವರಿಳಿಸುತ್ತೇವೆ. ಆದರೆ, ಚನ್ನಪಟ್ಟಣದ ಪಟಲೂರಿನ ಗೌತಮ್‌ವರ್ಮ ಕೆಲವೇ ಸೆಕೆಂಡಿಗಳಲ್ಲಿ  ಹಲ್ಲಿನಲ್ಲಿ ತೆಂಗಿನಕಾಯಿ ಸುಲಿಯುತ್ತಾರೆ. ಈ ಮೂಲಕವೇ ಅವರು ಗಿನ್ನಿಸ್‌ ದಾಖಲೆ ಸೃಷ್ಟಿಸಿದ್ದಾರೆ.ಮನೆಯಲ್ಲಿ ತೆಂಗಿನಕಾಯಿ ಸುಲಿಯಲು, ಮೂಟೆ ಎತ್ತಲು ಹರಸಾಹಸ ಪಡುವವರನ್ನು ನೋಡಿದ್ದ ಮಕ್ಕಳು ನಗರದ ಬಕ್ಕೇಶ್ವರ ಶಾಲಾ ಆವರಣದಲ್ಲಿ ಮಂಗಳವಾರ ಗೌತಮ್‌ ವರ್ಮ ಅವರ ಸಾಹಸ ನೋಡಿ ಬೆರಗಾದರು!ಸಾಹಸಿ ಗೌತಮ್‌ ವರ್ಮ 50 ಸೆಂಕೆಂಡಿನಲ್ಲಿ ಎರಡು ತೆಂಗಿನಕಾಯಿ ಹಲ್ಲಿನಲ್ಲಿ ಸುಲಿದು ಮಕ್ಕಳಲ್ಲಿ ಆಶ್ಚರ್ಯದ ಜತೆಗೆ ಕುತೂಹಲ ಮೂಡಿಸಿದರು. 50 ಕೆ.ಜಿ ಅಕ್ಕಿ ಮೂಟೆಯನ್ನು ಹಲ್ಲಿನಿಂದ ಎತ್ತಿ ಮಕ್ಕಳಲ್ಲಿನ ಅಸಾಧ್ಯದ ಕಲ್ಪನೆಯನ್ನು ಸಾಧ್ಯಗೊಳಿಸಿದರು.

ಅವಿಸ್ಮರಣೀಯ ಕ್ಷಣ ಎಂಬಂತೆ ಗೌತಮ್‌ ಅವರ ಸಾಹಸವನ್ನು ಅಲ್ಲಿದ್ದ ಮಕ್ಕಳು  ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಅವರ ಖುಷಿಯಲ್ಲಿ ಶಿಕ್ಷಕರು ಕೂಡ ಭಾಗಿಯಾಗಿದ್ದರು.ಪ್ರದರ್ಶನ ಮುಗಿಯುತ್ತಿದ್ದಂತೆ ಗೌತಮ್‌  ಅವರ ಹಸ್ತಾಕ್ಷರಕ್ಕೆ ಆ ಮಕ್ಕಳು ಮುಗಿಬಿದ್ದದ್ದು ಕಂಡು ಬಂತು.ಸಾಹಸ ಕಲೆಯ ಮೂಲಕವೇ ಜನರ ಮನಸ್ಸಿನಲ್ಲಿ ಉಳಿದಿರುವ ಅವರು ಬಡ ಮಕ್ಕಳಿಗೆ ಶಿಕ್ಷಣ ಸೇವೆಯ ಕಾರ್ಯದಲ್ಲಿ ತೊಡಗಿದ್ದಾರೆ. ಗೌತಮ್‌ ಬುದ್ಧ ಸಾಮಾಜಿಕ ಸಾಂಸ್ಕೃತಿಕ ಶಿಕ್ಷಣ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಬಿಡದಿಯ ಭೈರಮಂಗಲದ ಹತ್ತಿರ 2 ಎಕರೆ ಜಾಗದಲ್ಲಿ ಶಾಲೆ ಪ್ರಾರಂಭಿಸಿದ್ದಾರೆ. ಅಲ್ಲಿ 120 ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.60 ಬಡಮಕ್ಕಳಿಗೆ ಅಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ರಾಜ್‌ಕುಮಾರ್ ಕಾಡಿನಿಂದ ಆಗಮಿಸಿದಾಗ ಮೊದಲ ಬಾರಿ ಬೆಂಗಳೂರಿಗೆ ಆಗಮಿಸಿ, 38 ನಿಮಿಷದಲ್ಲಿ 51 ತೆಂಗಿನಕಾಯಿ ಸುಲಿದು ಗಿನ್ನಿಸ್‌ ದಾಖಲೆಯ ಪುಟಗಳಲ್ಲಿ ತಮ್ಮ ಹೆಸರು ಮೂಡಿಸಿದ್ದಾರೆ. ವಿಧಾನಸೌಧದ ಎದುರು ಮಾರುತಿ ಕಾರನ್ನು 2 ನಿಮಿಷ 15 ಸೆಂಕೆಡಿನಲ್ಲಿ 157 ಮೀಟರ್‌ ಎಳೆಯುವ ಮೂಲಕ ಲಿಮ್ಕಾ ದಾಖಲೆ ಮಾಡಿದ್ದಾರೆ.

ಸೈಕಲ್‌ನ್ನು ಹಲ್ಲಲ್ಲಿ ಕಚ್ಚಿಕೊಂಡು 40 ಅಡಿ ತೆಂಗಿನ ಮರ ಹತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ರಾಜ್ಯಮಟ್ಟದ ಜೋಡೊ ಆಟಗಾರ.ಅವಿಸ್ಮರಣೀಯ ಕ್ಷಣ: ಇಲ್ಲಿಯವರೆಗೆ 1,800 ಕಡೆ ಸಾಹಸ ಪ್ರದರ್ಶಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಚಿನ್‌

ಎದುರು ತೆಂಗಿನಕಾಯಿ ಹಲ್ಲಿನಿಂದ ಸುಲಿದಿದ್ದೇನೆ. ಅವರು ನನ್ನ ಹಸ್ತಾಕ್ಷಾರ ಕೇಳಿದಿದ್ದು ನನ್ನ ಜೀವನದ ಅವಿಸ್ಮರಣೀಯ ಘಟನೆ ಎಂದು ತಮ್ಮ ನೆನಪಿನ ಕ್ಷಣಗಳನ್ನು ಬಿಚ್ಚಿಟ್ಟರು.ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.