ಶನಿವಾರ, ಏಪ್ರಿಲ್ 17, 2021
30 °C

ಬೆರಗು ಮೂಡಿಸಿದ ವಿಜ್ಞಾನ ಮಾದರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಎಲ್ಲೆಡೆ ಜಾಗತಿಕ ತಾಪಮಾನ ಏರಿಕೆಯ ಸುದ್ದಿ ಚರ್ಚೆಯಾಗುತ್ತಿದ್ದರೆ ಪುಟ್ಟ ವಿದ್ಯಾರ್ಥಿಗಳು ಇದಕ್ಕೆ ಪರ್ಯಾಯ ಕಂಡು ಹಿಡಿಯುವ ದಿಶೆಯಲ್ಲಿ ಪ್ರಯತ್ನ ಮಾಡಿದ್ದಾರೆ. ಸೋಲಾರ್ ವಿದ್ಯುತ್, ಚಲಿಸುವ ರೈಲಿನಿಂದ ವಿದ್ಯುತ್ ಉತ್ಪಾದನೆ, ಗಾಳಿ ವಿದ್ಯುತ್, ಮಾಲಿನ್ಯ ನಿಯಂತ್ರಣ, ಸುಸ್ಥಿರ ಕೃಷಿ, ಸುಭದ್ರ ಸಮಾಜ ನಿರ್ಮಾಣಕ್ಕೆ ಮೆಟ್ರೋ ನಗರದ ಮಾದರಿ ಹೀಗೆ ಮಕ್ಕಳು ಮನೋ ಸಾಮರ್ಥ್ಯಕ್ಕೆ ಸವಾಲೊಡ್ಡುವ ನೂರಾರು ಮಾದರಿಗಳನ್ನು ಸಿದ್ಧಪಡಿಸಿ ಬೆರಗು ಮೂಡಿಸಿದರು.ತಾಲ್ಲೂಕಿನ ಯಡಳ್ಳಿ ವಿದ್ಯೋದಯ ಶಿಕ್ಷಣ ಸಂಸ್ಥೆ ಆವಾರದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಇನ್‌ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ 650 ಶಾಲೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ವೀಕ್ಷಣೆಗೆ ಆಗಮಿಸಿದ ಸಾರ್ವಜನಿಕರಿಗೆ ಉತ್ಸಾಹದಿಂದ ತಾವು ಸಿದ್ಧಪಡಿಸಿದ ಮಾದರಿಗಳ ವಿವರಣೆ ನೀಡುತ್ತಿದ್ದಾರೆ.ನೂರಾರು ವೈವಿಧ್ಯ ವಿಜ್ಞಾನ ಮಾದರಿ ಸಿದ್ಧಪಡಿಸಿದವರು ಆರರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ 5 ಸಾವಿರ ರೂಪಾಯಿ ಮೊತ್ತದ ಇನ್‌ಸ್ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಾವು ಸಿದ್ಧಪಡಿಸಿದ ಮಾದರಿಗಳನ್ನು ಸ್ಥಳೀಯವಾಗಿ ಪ್ರದರ್ಶಿಸುತ್ತಿದ್ದಾರೆ.ಮೂಲ ವಿಜ್ಞಾನದಲ್ಲಿ ಸಂಶೋಧನೆ, ಆವಿಷ್ಕಾರ ಹೆಚ್ಚಬೇಕು ಎಂಬುದು ಪ್ರದರ್ಶನ ಮುಖ್ಯ ಆಶಯ. ಈ ಸಂಗತಿಯನ್ನು ಕೇಂದ್ರೀಕರಿಸಿ ವಿದ್ಯಾರ್ಥಿಗಳು ಸುಲಭ ತಂತ್ರಜ್ಞಾನದಲ್ಲಿ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಫಲಿತಾಂಶ ಪಡೆಯುವ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ.

 

ಮಳೆ ನೀರು ಸಂಗ್ರಹ, ಮಾದರಿ ಶಾಲೆ, ಹೈನುಗಾರಿಕೆಯಲ್ಲಿ ತಂತ್ರಜ್ಞಾನ, ಸುಗಮ ರಸ್ತೆ ಸಂಚಾರ, ಸ್ಕೈ ಬಸ್, ಹಸಿರು ವನ, ಸುಲಭ ನೀರೆತ್ತುವ ಯಂತ್ರ ಹೀಗೆ ನೂರಾರು ಮಾದರಿಗಳನ್ನು ಸ್ಥಳೀಯರು ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.