ಬೆರಳು ಒದ್ದೆ ಆಗದೇ ನಾಣ್ಯ ಎತ್ತಿ

7
ಮಾಡಿ ನಲಿ ಸರಣಿ – 48

ಬೆರಳು ಒದ್ದೆ ಆಗದೇ ನಾಣ್ಯ ಎತ್ತಿ

Published:
Updated:
ಬೆರಳು ಒದ್ದೆ ಆಗದೇ ನಾಣ್ಯ ಎತ್ತಿ

ಸಾಮಗ್ರಿಗಳು: ಅಗಲ ಬಾಯಿಯ ಪಾತ್ರೆ, ನೀರು, ನಾಣ್ಯ, ಮೊಂಬತ್ತಿ, ಬೆಂಕಿ ಪೆಟ್ಟಿಗೆ, ಗಾಜಿನ ಗ್ಲಾಸು.

ವಿಧಾನ: ೧. ಚಿತ್ರದಲ್ಲಿ ತೋರಿಸಿದಂತೆ ಒಂದು ಅಗಲ ಬಾಯಿಯ ಪಾತ್ರೆಯನ್ನು ತೆಗೆದುಕೊಳ್ಳಿ.

೨. ಪಾತ್ರೆಯ ಒಂದು ಬದಿಗೆ ನಾಣ್ಯವನ್ನಿಟ್ಟು ಅದು ಮುಳುಗುವವರೆಗೆ ಮಾತ್ರ ನೀರು ಹಾಕಿ.ಪ್ರಶ್ನೆ: ನಿಮ್ಮ ಬೆರಳುಗಳು ಒದ್ದೆಯಾಗದಂತೆ ನಾಣ್ಯ ಎತ್ತಿಕೊಳ್ಳಿ.

ಉತ್ತರ :   ೨-೩ ಸೆಂಟಿ ಮೀಟರು ಎತ್ತರವುಳ್ಳ ಒಂದು ಉರಿಯುವ ಮೊಂಬತ್ತಿಯ ತಳಕ್ಕೆ ಭಾರವಾದ ಚಿಕ್ಕ ಲೋಹದ ತುಂಡನ್ನು ಅಂಟಿಸಿ, ಪಾತ್ರೆಯ ಇನ್ನೊಂದು ಬದಿಗೆ ಇಡಿ. ಉರಿಯುತ್ತಿರುವ ಮೊಂಬತ್ತಿಯ ಮೇಲೆ ಒಂದು ಗಾಜಿನ ಗ್ಲಾಸನ್ನು ಬೊರಲು ಹಾಕಿ. ಗ್ಲಾಸಿನಲ್ಲಿಯ ಆಕ್ಸಿಜನ್ ಉರಿದು  ನಿರ್ವಾತ ಪ್ರದೇಶ ನಿರ್ಮಾಣವಾಗಿ ಪಾತ್ರೆಯಲ್ಲಿನ ನೀರು ಗ್ಲಾಸಿನಲ್ಲಿ  ಸೇರುತ್ತದೆ. ಆಗ ಸರಳವಾಗಿ ಬೆರಳನ್ನು ಒದ್ದೆ ಮಾಡಿಕೊಳ್ಳದೆ ನಾಣ್ಯವನ್ನು ಎತ್ತಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry