ಬೆರಳ ಚಲನೆಯಿಂದಲೇ ಗುರುತಿಸುವ ಸ್ಮಾರ್ಟ್‌ಫೋನ್‌

7

ಬೆರಳ ಚಲನೆಯಿಂದಲೇ ಗುರುತಿಸುವ ಸ್ಮಾರ್ಟ್‌ಫೋನ್‌

Published:
Updated:

ಲಂಡನ್‌(ಪಿಟಿಐ): ಸ್ಮಾರ್ಟ್‌ ಫೋನ್‌ ಹೊಂದಿರುವವರು  ಪಾಸ್‌ವರ್ಡ್‌ ಹಾಕಿ ಇಡುವುದು ಸಾಮಾನ್ಯ. ಆದರೆ ಮೊಬೈಲ್‌ ಒಡೆಯನ ಕೈಬೆರಳುಗಳ ಚಲನೆಯೇ ಪಾಸ್‌ವರ್ಡ್‌ ರೀತಿ ಕೆಲಸ ಮಾಡಿದರೆ?ಹೌದು. ಒಡೆಯನ ಮಾಲೀಕ ಪರದೆಯನ್ನು ಯಾವ ವೇಗದಲ್ಲಿ ಸ್ಪರ್ಶಿಸಿದ್ದಾನೆ,  ಯಾವ ದಿಕ್ಕಿನಲ್ಲಿ ಸವರಿದ್ದಾನೆ ಎಂಬ ಸೂಕ್ಷ್ಮ ಸಂಗತಿಗಳೇ ಪಾಸ್‌ವರ್ಡ್‌ನಂತೆ ಕಾರ್ಯನಿರ್ವಹಿಸ ಬಲ್ಲ ತಂತ್ರಾಂಶವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.ಈ ತಂತ್ರಾಂಶವನ್ನು ಇಲಿನಾಯ್‌ ತಾಂತ್ರಿಕ ಸಂಸ್ಥೆಯ ಚೆಂಗ್‍ ಬೊ ಮತ್ತು ಅವರ ಸಹೋದ್ಯೋಗಿಗಳು ಅಭಿವೃದ್ಧಿ ಪಡಿಸಿದ್ದು, ತಂತ್ರಾಂಶವನ್ನು ‘ಸೈಲೆಂಟ್‌ ಸೆನ್ಸ್‍’ ಎಂದು ಕರೆದಿದ್ದಾರೆ.‘ಈ ತಂತ್ರಾಂಶವು ತರ್ಕ ಕೋಷ್ಟಕ ಆಧಾರದ ಮೇಲೆ ಕಾರ್ಯ­ನಿರ್ವ­ಹಿಸುತ್ತದೆ. ಒಂದು ವೇಳೆ ಮೊಬೈಲನ್ನು ಅಸಲಿ ಒಡೆಯನ ಬದಲು ಬೇರೆ ಯಾರಾದರೂ ಬಳಸಲು ಮುಂದಾ ದರೆ,  ತನ್ನಿಂದ ತಾನೇ ಲಾಕ್‌ ಆಗಲಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಈ ಹೊಸ ತಂತ್ರಾಂಶವನ್ನು ಹಾಕಲಾಗಿದ್ದ ಸ್ಮಾರ್ಟ್‌ಫೋನ್‌ ಅನ್ನು 100 ಜನರಿಗೆ ನೀಡಿ ಅದನ್ನು ಬಳಸಲು ಸೂಚಿಸಲಾಗಿತ್ತು.  ಸೈಲೆಂಟ್‌­ಸೆನ್ಸ್‌ ತಂತ್ರಾಂಶವು ಮೊಬೈಲ್‌ ಒಡೆಯರು ಹತ್ತು ಸಲ ಸ್ಪರ್ಶಿಸುವ ವೇಳೆಗೆ ಶೇ 99 ರಷ್ಟು ನಿಖರವಾಗಿ ಗುರುತಿಸುತ್ತದೆ ಎಂದು ವಿವರಿಸಲಾಗಿದೆ.ಈ ಫೋನ್‌ನಲ್ಲಿ ಅಪ್ಲಿಕೇಷನ್‌ ಮತ್ತು ಗೇಮ್‌ಗಳನ್ನು ಯಾರು ಬೇಕಾದರೂ ಬಳಸಬಹುದು. ಆದರೆ, ಎಸ್‌ಎಂಎಸ್‌, ಇ–ಮೇಲ್‌­ಗಳನ್ನು ಬೇರೊಬ್ಬರು ಬಳಸಲು ಮುಂದಾದರೆ ಲಾಕ್‌ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry