ಬೆಲೆ ಏರಿಕೆ ವಿರುದ್ಧ ಆಕ್ರೋಶ

7

ಬೆಲೆ ಏರಿಕೆ ವಿರುದ್ಧ ಆಕ್ರೋಶ

Published:
Updated:

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ತಡೆಯಲು ವಿಫಲಗೊಂಡಿವೆ. ಆಮದು, ರಫ್ತು ನೀತಿ ಬೆಲೆ ಏರಿಕೆಗೆ ಕಾರಣವಾಗಿದೆ. ವ್ಯಾಪಾರಸ್ಥರ ಸಂಚು ತಡೆಯಲು ಸರ್ಕಾರಗಳು ವಿಫಲಗೊಂಡಿವೆ. ಅಂತಹ ವಂಚಕರ ಜತೆಗೆ ಸರ್ಕಾರಗಳು ಕೈ ಜೋಡಿಸಿವೆ ಎಂದು ಆರೋಪಿಸಿ ಸಂಯುಕ್ತ ಜನತಾದಳದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.ಪೆಟ್ರೋಲ್, ಡೀಸೆಲ್ ದರಗಳು ಪ್ರತಿ 15 ದಿನಗಳಿಗೊಮ್ಮೆ ಏರಿಕೆ ಯಾಗುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣದರವನ್ನು ಏರಿಸಲಾಗುತ್ತಿದೆ. ಆಟೋ ಚಾಲಕರು ಮನ ಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಸರಕು ಸಾಗಾಟ ದರದಲ್ಲಿ ಏರಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರತಿನಿಧಿಗಳು ಬರೀ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿ ದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಭೂ ಹಾಗೂ ಗಣಿ ಹಗಣರಕ್ಕೆ ನಿಯಂತ್ರಣ ಹಾಕಬೇಕು. ಅಗತ್ಯ ವಸ್ತುಗಳ   ಬೆಲೆ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕು, ಆ ಮೂಲಕ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಜೆಡಿಯು ಜಿಲ್ಲಾಧ್ಯಕ್ಷ ಮಲ್ಲನಗೌಡ ನಾಡಗೌಡ, ಬಸಗೌಡ ಪಾಟೀಲ, ವಸಂತ ಕುಲಕರ್ಣಿ, ದುಂಡಪಪ್ಪ ಬೆಳಗಲಿ, ಅಶೋಕ ದೇಶಪಾಂಡೆ, ತುಕಾರಾಮ ಕುಂಬಾರ ಘಟ ಕಾಂಬಳೆ, ದುಂಡಪ್ಪ ಬೆಳಗಲಿ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry