ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

7

ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

Published:
Updated:

ಗುಬ್ಬಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕ ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಮತ್ತೆ ಮತ್ತೆ ಏರಿಕೆ ಮಾಡುತ್ತಿರುವುದು ಸಾಮಾನ್ಯನಿಗೆ ಹೊರೆಯಾಗಿದೆ. ಆರ್ಥಿಕ ಸ್ಥಿತಿ ಹದಗೆಡೆಸುತ್ತಿರುವ ಯುಪಿಎ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಬಡ ಮಧ್ಯಮವರ್ಗದ ಜನಜೀವನ ದುಸ್ತರವಾಗಿದೆ. ಕೂಡಲೇ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸುವಂತೆ ಒತ್ತಾಯಿಸಿದರು.ತಾಲ್ಲೂಕು ಕಚೇರಿ ತಲುಪಿದ ಪ್ರತಿಭಟನಾಕಾರರು ತಹಶೀಲ್ದಾರ್ ಜ್ಞಾನೇಶ್‌ಗೆ ಮನವಿ ಸಲ್ಲಿಸಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್. ವಿಜಯ್‌ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಯತೀಶ್ ಕುಮಾರ್, ಜಿ.ಪಂ. ಸದಸ್ಯ ಚಂದ್ರಶೇಖರಬಾಬು, ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಎಸ್. ನಂಜೇಗೌಡ, ತಾ.ಪಂ. ಸದಸ್ಯರಾದ ಜಯಮ್ಮ, ಮುಳಕಟ್ಟಯ್ಯ, ಮುಖಂಡ ರಾದ ಗಂಗಾಧರಯ್ಯ, ಸಿದ್ದರಾಮಯ್ಯ, ಲೋಕೇಶ್, ಚೇಳೂರು ಕೆಂಪಣ್ಣ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry