ಬೆಲ್ಲದ ಬೆಲೆ ಕುಸಿತ: ಬೀದಿಯಲ್ಲಿ ಮಾರಾಟ ಮಾಡಿದ ರೈತರು

7

ಬೆಲ್ಲದ ಬೆಲೆ ಕುಸಿತ: ಬೀದಿಯಲ್ಲಿ ಮಾರಾಟ ಮಾಡಿದ ರೈತರು

Published:
Updated:

ಶ್ರೀನಿವಾಸಪುರ:ಈಗ ಬೆಲೆ ಕುಸಿತದ ಪರಿಣಾಮವಾಗಿ ಬೆಲ್ಲ ಬೀದಿಗೆ ಬಂದಿದೆ. ತಾಲ್ಲೂಕಿನ ರೈತರು ತಾವು ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಿದ ಬೆಲ್ಲದ ಮುದ್ದೆಗಳನ್ನು ಟೆಂಪೋಗಳಲ್ಲಿ ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ.ಈ ಹಿಂದೆ ಮುದ್ದೆಯೊಂದು (1 ಕೆ.ಜಿ 700 ಗ್ರಾಂ) ರೂ. 65ರಿಂದ 70 ತನಕ ಮಾರಾಟವಾಗುತ್ತಿತ್ತು.ಈಗ ಅದೇ ಬೆಲ್ಲ 35 ರಿಂದ 40ಕ್ಕೆ ಮಾರಾಟವಾಗುತ್ತಿದೆ.ಅಂಗಡಿ ಬೆಲೆಗಿಂತ ಕಡಿಮೆಗೆ ಸಿಗುತ್ತಿರುವುದರಿಂದ ನಾಗರಿಕರು ಮುಗಿ ಬಿದ್ದು ಬೆಲ್ಲವನ್ನು ಖರೀದಿಸುತ್ತಿದ್ದಾರೆ.ಈ ಹಿಂದೆ ಒಂದು ಗೋಣಿ ಬೆಲ್ಲ (80 ಮುದ್ದೆ) 5 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಈಗ 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ.ಈ ಬೆಲೆಯಿಂದ ಬೆಳೆಗಾರರಿಗೆ ಏನೂ ಗಿಟ್ಟುವುದಿಲ್ಲ ಎಂದು ಕೂರಿಗೇಪಲ್ಲಿ ಗ್ರಾಮದ ಕಬ್ಬು ಬೆಳೆಗಾರ ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಈಗ ಆಲೆಮನೆ ನಡೆಯುತ್ತಿವೆ.ಸುಗ್ಗಿ ಕಾಲದಲ್ಲಿ ಬೆಲ್ಲದ ಬೆಲೆ ಇಳಿಯುವುದು ಸಾಮಾನ್ಯ. ಒಂದೆರಡು ತಿಂಗಳು ಕಳೆದ ನಂತರ ಬೆಲೆ ಸುಧಾರಿಸುತ್ತದೆ.ಆದರೆ ಹಣದ ಅಗತ್ಯ ಇರುವವರು ಸೂಕ್ತ ಬೆಲೆಗೆ ಕಾಯಲಾಗದೆ ಸಿಕ್ಕಷ್ಟು ಸಿಗಲಿ ಎಂಬ ಧೋರಣೆಯಿಂದ ಮಾರಾಟ ಮಾಡುತ್ತಿದ್ದಾರೆ ಎಂದು ಜಯರಾಮ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry