ಬೆಳಕಿನ ಭರವಸೆ

7

ಬೆಳಕಿನ ಭರವಸೆ

Published:
Updated:

ನವದೆಹಲಿ (ಪಿಟಿಐ): ದೇಶವನ್ನು ಕಾಡುತ್ತಿರುವ ವಿದ್ಯುತ್ ಕೊರತೆಯನ್ನು ಬೆಳಕಿನ ಹಬ್ಬ ದೀಪಾವಳಿಗೆ ಮುನ್ನ ನೀಗಿಸಲಾಗುತ್ತದೆ ಎಂದು ಸರ್ಕಾರ ಶುಕ್ರವಾರ ಭರವಸೆ ನೀಡಿದೆ.`ಉತ್ಪಾದನಾ ಕಂಪೆನಿಗಳು ತಮ್ಮ ಬಳಿ ಇರುವ ಹೆಚ್ಚಿನ ಕಲ್ಲಿದ್ದಲನ್ನು ಕೊರತೆ ಇರುವ ಘಟಕಗಳಿಗೆ ನೀಡುವಂತೆ ಸೂಚಿಸಲಾಗಿದೆ. ಆದ್ದರಿಂದ ಸಮಸ್ಯೆ ಆದಷ್ಟು ಬೇಗನೆ ಬಗೆಹರಿಯುತ್ತದೆ~ ಎಂದು ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry