ಮಂಗಳವಾರ, ಏಪ್ರಿಲ್ 20, 2021
25 °C

ಬೆಳಗಾವಿ ಅಧಿವೇಶನ ಯಾವ ಕಾರಣಕ್ಕೂ ಮುಂದೂಡಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬೆಳಗಾವಿ ಅಧಿವೇಶ ಯಾವ ಕಾರಣಕ್ಕೂ ಮುಂದಕ್ಕೆ ಹೋಗುವುದಿಲ್ಲ. ನಿಗದಿತ ದಿನಾಂಕದಂದೇ ಅದು ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.



 ನಗರದಲ್ಲಿ ಗುರುವಾರ  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,  ಶಾಸಕ ಎಚ್. ಹಾಲಪ್ಪ ಕೆಜೆಪಿ  ಸೇರ್ಪಡೆಯಾಗುವ ಹೇಳಿಕೆ ಕುರಿತು ಉತ್ತರಿಸಿದ ಅವರು, ಈ ಹಿಂದೆ ಬಂಗಾರಪ್ಪ ಅವರು ಬಿಜೆಪಿ ಸಂಸತ್ ಸದಸ್ಯರಾಗಿದ್ದಾಗ ಸಮಾಜವಾದಿ ಪಕ್ಷಕ್ಕೆ ಹೋಗುವುದಾಗಿ ಹೇಳುತ್ತಿದ್ದರು. ಆ ಸಂದರ್ಭದಲ್ಲಿ ತಾವು, ಬಿಜೆಪಿಯೊಂದಿಗೆ ತಾಳಿ ಕಟ್ಟುಕೊಂಡು ಸಮಾಜವಾದಿ ಪಕ್ಷದೊಂದಿಗೆ ಸಂಸಾರ ಮಾಡುವುದು ಸರಿಯಲ್ಲ. ಪಕ್ಷ ಬಿಡುವುದಾದರೇ ಬಿಡಿ ಎಂದು ಸಲಹೆ ಮಾಡಿದ್ದೆ. ಅದೇ ಹಾಲಪ್ಪ ಅವರಿಗೂ ಅನ್ವಯವಾಗಲಿದೆ ಎಂದರು.



ಕಾಯ್ದೆ ಯಾಥಾವತ್ತು ಮಂಡನೆ: ನಗರವಾಸಿಗಳಿಗೆ ಅನುಕೂಲಕ್ಕಾಗಾಗಿ ಸರ್ಕಾರ  ಜಾರಿಗೆ  ತರಲು  ಮುಂದಾಗಿದ್ದ  ಕರ್ನಾಟಕರ  ಭೂ  ಕಂದಾಯ  ಕಾಯ್ದೆ  94(ಸಿ) ತಿದ್ದುಪಡಿಯನ್ನು ಯಾಥಾವತ್ತು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದ ಈಶ್ವರಪ್ಪ, ರಾಜ್ಯಪಾಲರು ಗೊಂದಲದಿಂದಾಗಿ ಈ ತಿದ್ದುಪಡಿಯನ್ನು ಹಿಂದಕ್ಕೆ ಕಳುಹಿಸಿದ್ದರು. ಆದರೆ, ವಿರೋಧ ಪಕ್ಷಗಳ ಒಪ್ಪಿಗೆ ಪಡೆದೆ ಈ ವಿಧೇಯಕಕ್ಕೆ ತಿದ್ದುಪಡಿ ತರಲಾಗಿತ್ತು. ಇದಕ್ಕೆ ಆಶ್ರಯ ನಿವೇಶನಕ್ಕಿರುವ ಷರತ್ತುಗಳನ್ನೇ ಅಡಕಗೊಳಿಸಲಾಗಿದೆ ಎಂದರು.



ಹೆಚ್ಚುವರಿ `ನೆಮ್ಮದಿ~

ರಾಜ್ಯದಲ್ಲಿ ಈ ಹಿಂದೆ 777 ನೆಮ್ಮದಿ ಕೇಂದ್ರಗಳಿದ್ದು, ಹೊಸದಾಗಿ 73 ನೆಮ್ಮದಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಡಿ. 1ರಿಂದ ಈ ಎಲ್ಲವೂ ಸರ್ವ ಸಜ್ಜಿತವಾಗಿ ಕಾರ್ಯಾರಂಭ ಮಾಡಲಿವೆ ಎಂದು ಕಂದಾಯ ಸಚಿವರೂ ಆದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.



ದೊಡ್ಡ ದೊಡ್ಡ ನಗರಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ನೆಮ್ಮದಿ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಈ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಆರಂಭವಾಗಿದೆ ಎಂದರು.



ಪಂಚಾಯತ್ ರಾಜ್ ಇಲಾಖೆಯು ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತಲಾ 1,400 ಸಿವಿಲ್ ಎಂಜಿನಿಯರ್ ಹಾಗೂ ನಾನ್ ಎಂಜಿನಿಯರ್‌ಗಳನ್ನು ಮಾಸಿಕ ಗೌರವಧನದ ಆಧಾರದ ಮೇಲೆ ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೆರಿಟ್ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದ್ದು, ಆಯಾ ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.