ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ನಾಲ್ಕು ಸಾವು

7

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ನಾಲ್ಕು ಸಾವು

Published:
Updated:

ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭ ದಲ್ಲಿ ವಿದ್ಯುತ್‌ ಸ್ಪರ್ಶದಿಂದ ಅಮ್ಮ, ಮಗ ಸೇರಿದಂತೆ ನಾಲ್ವರು ಮೃತಪಟ್ಟ ದಾರುಣ ಘಟನೆ ಇಲ್ಲಿನ ಸದಾಶಿವ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ದುರಂತದಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಸದಾಶಿವನಗರದ ಒಂದನೇ ಮುಖ್ಯ ರಸ್ತೆಯ ಎರಡನೇ ಅಡ್ಡ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 28 ಅಡಿ ಎತ್ತರದ ಉತ್ತರಾಖಂಡದ ಕೇದಾರನಾಥ ದೇವರ ಮಾದರಿಯ ಪರಿಸರಸ್ನೇಹಿ ಗಣೇಶ ಮೂರ್ತಿ ಯನ್ನು ವಿಸರ್ಜನೆಗಾಗಿ ಟ್ರ್ಯಾಕ್ಟರ್‌ನಲ್ಲಿ  ಮೆರವಣಿಗೆಯಲ್ಲಿ ಕೊಂಡೊಯ್ಯು ವಾಗ  ಮೂರ್ತಿಗೆ ಆಧಾರವಾಗಿ ನಿಲ್ಲಿಸಿದ್ದ ಕಬ್ಬಿಣದ ಸಲಾಕೆಗೆ ವಿದ್ಯುತ್‌ ತಂತಿ ತಗುಲಿ ಈ ಅವಘಡ ಸಂಭವಿಸಿತು.

ಆಘಾತಕ್ಕೆ ಒಳಗಾದವರು  ಸುಮಾರು ಐದು ಅಡಿವರೆಗೆ ಹಾರಿ ಬಿದ್ದಿದ್ದರು.ಮೃತರು ಸದಾಶಿವನಗರದ ಪ್ರಜ್ವಲ ಅನೀಲ ಮಾಳಿ (16) ಗಂಗಪ್ಪ ಮುದಲಿ (52), ಗೀತಾ ಗಜಾನನ ಸಪ್ಲೆ (42) ಹಾಗೂ ಸುಜಲ್‌ ಸಪ್ಲೆ (10) ಎಂದು ಗುರುತಿಸಲಾಗಿದೆ. ಆಘಾತದ ತೀವ್ರತೆಯಿಂದ ಒಬ್ಬರ ಹೊಟ್ಟೆ ಭಾಗ ಸಿಡಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry