ಗುರುವಾರ , ಫೆಬ್ರವರಿ 25, 2021
31 °C
ಪ್ರಜಾವಾಣಿ ವಾರ್ತೆ

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 4 ಸೇತುವೆ ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 4 ಸೇತುವೆ ಮುಳುಗಡೆ

ಬೆಳಗಾವಿ: ಬೆಳಗಾವಿ, ಖಾನಾಪುರದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಖಾನಾಪುರ ತಾಲ್ಲೂಕಿನಲ್ಲಿ ಬುಧವಾರದಿಂದ ಗುರುವಾರದವರೆಗೆ ಅತ್ಯಧಿಕ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಅತ್ತ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ 1,00,775 ಕ್ಯುಸೆಕ್‌ಗೆ ಏರಿಕೆಯಾಗಿದೆ. ಇದರಿಂದ ಚಿಕ್ಕೋಡಿ ತಾಲ್ಲೂಕಿನ ನಾಲ್ಕು ಸೇತುವೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಆರು ಸೇತುವೆಗಳು ಮುಳುಗಡೆಯಾಗಿವೆ.ಖಾನಾಪುರದಲ್ಲಿ 11 ಸೆಂ.ಮೀ., ಜಾಂಬೋಟಿಯಲ್ಲಿ 11 ಸೆಂ.ಮೀ ಹಾಗೂ ಕಣಕುಂಬಿಯಲ್ಲಿ 21 ಸೆಂ.ಮೀ. ಮಳೆ ದಾಖಲಾಗಿದೆ.ರಾಜಾಪುರ ಬ್ಯಾರೇಜ್ ನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ 1,00,775 ಕ್ಯುಸೆಕ್‌ಗೆ ಏರಿಕೆಯಾಗಿರುವುದರಿಂದ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಕ್ಕೋಳ- ಸಿದ್ನಾಳ, ಜತ್ರಾಟ್- ಭೀಂವಶಿ, ಬೋಜವಾಡಿ- ಕುನ್ನೂರು, ಕಾರದಗಾ- ಭೋಜ್ ಸೇತುವೆಗಳು ಮುಳುಗಡೆಯಾಗಿವೆ.ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರೊಂದಿಗೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಒಟ್ಟು 6 ಸೇತುವೆ ಮುಳುಗಡೆ ಆದಂತಾಗಿದೆ. ಬುಧವಾರ ಕಲ್ಲೋಳ- ಯಡೂರ ಹಾಗೂ ಮಲ್ಲಿಕವಾಡ- ದತ್ತವಾಡ ಸೇತುವೆಗಳು ಮುಳುಗಡೆ ಆಗಿದ್ದವು. ಗುರುವಾರ ಕಲ್ಲೋಳ ಬ್ಯಾರೇಜ್ ಸಹ ಮುಳುಗಡೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.