ಮಂಗಳವಾರ, ಏಪ್ರಿಲ್ 20, 2021
25 °C

ಬೆಳಗಾವಿ ಜಿಲ್ಲೆಯ ವಿವಿಧೆಡೆ ಸಡಗರ ಸಂಭ್ರಮದ 66ನೇ ಸ್ವಾತಂತ್ರ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಲಹೊಂಗಲ: ಶ್ರೀ ನೀಲಕಂಠೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಆವರಣದಲ್ಲಿ ಧ್ವಜಾರೋಹಣವನ್ನು ಕಾರ್ಯಾಧ್ಯಕ್ಷ ಚಂದ್ರಶೇಖರ ಸಾಧುನವರ ನೆರವೇರಿಸಿದರು.ನಿರ್ದೇಶಕರಾದ ಎಸ್.ಎಸ್.ಮೂಗಿ, ಎಸ್.ಸಿ.ಮೆಟಗುಡ್ಡ, ಜಿ.ಎಸ್.ಹೂಲಿ, ವಿ.ಎಸ್.ಕೋರಿಮಠ, ಕಾರ್ಯದರ್ಶಿ ಎಸ್.ಎಸ್.ಸಿದ್ನಾಳ, ಸಂಯೋಜಕ ಎಸ್.ಎಂ.ಸಿದ್ಧನಾಯ್ಕರ ಉಪಸ್ಥಿತರಿದ್ದರು.ದೈಹಿಕ ಶಿಕ್ಷಕ ಸಿ.ಎಸ್.ಕುಸಲಾಪೂರ, ಬಿ.ಕೆ.ಕಾದ್ರೊಳ್ಳಿ, ಎನ್.ಸಿ.ಸಿ. ಅಧಿಕಾರಿ ಹೇಮಗಿರಿಮಠ ಮಾರ್ಗದರ್ಶನದಲ್ಲಿ ಆಕರ್ಷಕ ಪಥಸಂಚಲನ ಜರುಗಿತು. ಎಸ್.ಎಂ.ಪಾಟೀಲ ನಿರೂಪಿಸಿದರು. ಎಸ್.ಆರ್. ಕಲಹಾಳ ವಂದಿಸಿದರು.ಶ್ರೀರಾಮಸೇನಾ ವತಿಯಿಂದ ಮಂಗಳವಾರ ಮಧ್ಯರಾತ್ರಿ ಉಪ್ಪಿನಕೂಟದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎನ್.ಬಾಳಿ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಅಧ್ಯಕ್ಷ ಅಶೋಕ ಸವದತ್ತಿ, ಜಿಲ್ಲಾ ಉಪಾಧ್ಯಕ್ಷ ವಿವೇಕಾನಂದ ಪೂಜಾರ, ಶಂಕರ ಪಟ್ಟೇದ, ಬಾಬು ಕಾದ್ರೊಳ್ಳಿ, ಅಶೋಕ ವಾಲಿ, ಮಹಾಂತೇಶ ಗುಮತಿ, ಪುಂಡಲೀಕ ಭಜಂತ್ರಿ, ಶಂಕರ ಇಂಚಲ, ಮಹಾಂತೇಶ ಹೊಸಮನಿ, ಬಸವರಾಜ ಶಿಂತ್ರಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಚೇತನ ವಿವಿಧೋದ್ಧೇಶಗಳ ಸಹಕಾರಿ ಸಂಘದಲ್ಲಿ ಹಿರಿಯ ನಿರ್ದೇಶಕ ಕುರೇರ ಧ್ವಜಾರೋಹಣ ನೆರವೇರಿಸಿದರು.ಸರಳ ರಾಜಕಾರಣಿ ಕೌಜಲಗಿ: ಚೋಪ್ರಾ

ಸವದತ್ತಿ: ಜಿಲ್ಲೆ ಹಾಗೂ ರಾಜ್ಯದಲ್ಲಿ ಸರಳ, ಸಜ್ಜನ ರಾಜಕಾರಣಿಯಾಗಿದ್ದಲ್ಲದೇ ತಮ್ಮ ಅಡಳಿತ ಅವಧಿಯಲ್ಲಿ ಯಾರಿಗೂ ಕೇಡು ಬಯಸದಂತೆ ಅಡಳಿತ ನಡೆಸುವ ಮೂಲಕ ಇಡೀ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸಿದ ಮಾಜಿ ಶಾಸಕ ಸುಭಾಷ ಕೌಜಲಗಿ ಜನನಾಯಕರಾಗಿದ್ದಾರೆ ಎಂದು ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಹೇಳಿದರು.ಬುಧವಾರ ಮಾಜಿ ಶಾಸಕ ಸುಭಾಷ ಕೌಜಲಗಿ ಅವರ 63ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲ್ಲೂಕಿನ ಸಮಸ್ತ ಜನಾಂಗದವರ ಅನುಕೂಲಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ತಾಲ್ಲೂಕಿನ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂದರು.ಬರುವ ದಿನಗಳಲ್ಲಿ ತಾಲ್ಲೂಕಿನ ಎಲ್ಲ ವರ್ಗದವರ ಶ್ರಯೋಭಿವೃದ್ಧಿಗಾಗಿ ಮತ್ತೊಮ್ಮೆ ಅವಕಾಶ ದೊರೆತಲ್ಲಿ ನಾಡಿನ ಪ್ರಗತಿಗಾಗಿ ಶ್ರಮಿಸಲು ಸಾಧ್ಯವಾಗಲಿದೆ ಎಂದ ಅವರು, ಕಾರ್ಯಕರ್ತರ ಶ್ರಮದಾನ ಹೆಚ್ಚಾಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕುರಿತು ನಾಗರಿಕರಲ್ಲಿ ಹೆಚ್ಚು ತಿಳಿವಳಿಕೆ ನೀಡಬೇಕಾಗಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾರಾಜಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಸ್. ಪುರದಗುಡಿ, ಚಂದ್ರಣ್ಣ ಶಾಮರಾಯಣ್ಣವರ, ಬಸವರಾಜ ಪ್ರಭುನವರ, ಮದನ ಚೋಪ್ರಾ, ರಮೇಶ ಮುನವಳ್ಳಿ, ಜಿ.ಎಸ್. ಶಿಂತ್ರಿ, ಕಾಶೇಪ್ಪಾ ಕುಳ್ಳೂರ, ಕಾಮಕರ, ಎಂ.ಬಿ. ಸವದತ್ತಿ ನೂರಾರು ಕಾಂಗ್ರೇಸ್ ಕಾರ್ಯಕರ್ತರು, ಕೌಜಲಗಿ ಅಭಿಮಾನಿಗಳು ಪಾಲ್ಗೊಂಡಿದ್ದರು. `ಸ್ವಾತಂತ್ರ್ಯ ತ್ಯಾಗ, ಬಲಿದಾನಗಳ ಪ್ರತೀಕ~

ಸವದತ್ತಿ: ಶತಶತಮಾನಗಳಿಂದ ದಬ್ಬಾಳಿಕೆ, ಒಡೆದಾಳುವ ನೀತಿ ಹಾಗೂ ಗುಲಾಮಗಿರಿಯನ್ನು ಸಹಿಸದೇ ನಡೆದ ಹೋರಾಟದಿಂದ ಪಡೆದ ಸ್ವಾತಂತ್ರ್ಯ, ಅನೇಕ ಮಹನೀಯರ ತ್ಯಾಗ ಬಲಿದಾನದ ಸಂಕೇತವಾಗಿದ್ದು, ಅದನ್ನು ಅತ್ಯಂತ ಜಾಗೃತೆಯಿಂದ ಉಳಿಸಿಕೊಳ್ಳಬೇಕಾಗಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಬುಧವಾರ ಇಲ್ಲಿನ ಎಸ್.ಕೆ. ಕಾಲೇಜಿನ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೊರಾಟಗಾರರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವರನ್ನು ಸನ್ಮಾನಿಸಲಾಯಿತು.ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ, ಬಸಯ್ಯ ಹಿರೇಮಠ, ಪರ್ವತಗೌಡ ಪಾಟೀಲ, ಮಹಾದೇವಿ ರವದಿ, ಜಗದೀಶ ಶಿಂತ್ರಿ, ಶಂಕರಗೌಡ ಪಾಟೀಲ, ಶ್ರಿಪಾದಭಟ್ಟ ಜೋಶಿ, ಎಂ.ಟಿ. ಶಿಗ್ಲಿ, ವಿ.ಜಿ. ಹಿತ್ತಲಮನಿ, ಸಿಪಿಐ ಎಂ.ಎಸ್. ನಾಯಕ, ಎಂ.ಎಂ. ಕೋಮಣ್ಣವರ, ನಿಂಗಪ್ಪ ಮೀಸಿ, ಗುರಪ್ಪ ಚಿಕ್ಕುಂಬಿ ಮುಂತಾದವರು ಹಾಜರಾ ಗಿದ್ದರು.ಕಾರ್ಯಕ್ರಮಕ್ಕೂ ಮೊದಲು ಪೊಲೀಸ್, ಗೃಹರಕ್ಷಕದಳ ಹಾಗೂ ಎನ್.ಸಿ.ಸಿ. ಭಾರತ ಸ್ಕೌಟ್ಸ, ಗೈಡ್ಸ್‌ಗಳ ಆಕರ್ಷಕ ಪಥಸಂಚಲನ, ಗೌರವ ರಕ್ಷೆ ಸ್ವೀಕಾರ ಮತ್ತು ಪರೇಡ್ ನಡೆಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆದವು. ಎಂ.ಎನ್. ಗೋಠೆ ಸ್ವಾಗತಿಸಿದರು. ಸಹದೇವ ಯರಗೊಪ್ಪ ನಿರೂಪಿಸಿದರು. ರವೀಂದ್ರ ಹಕಾಟಿ ವಂದಿಸಿದರು. ಮರಕುಂಬಿ ವರದಿ

ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಪ್ಪ ಬೈಲವಾಡ ಧ್ವಜಾರೋಹಣ ಮಾಡಿದರು.

ಗಾಂಧೀಜಿ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿರುಪಾಕ್ಷಿ ಮಠಪತಿ ಪೂಜೆ ಸಲ್ಲಿಸಿದರು.

 

ಗ್ರಾಮ ಪಂಚಾಯತಿ ಸದಸ್ಯ ಫಕ್ರುಸಾಬ ಮುಜಾವರ, ಸದಸ್ಯೆ ಮಹಾದೇವಿ ಪರುನವರ, ತಾಲೂಕ ಪಂಚಾಯಿತಿ ಸದಸ್ಯೆ ಯಲ್ಲವ್ವ ಭರಮೋತಿ. ಪಿ.ಡಿ.ಓ. ಎಸ್.ಎಸ್.ಮರಕುಂಬಿ, ಗ್ರಾ.ಪಂ. ಕಾರ್ಯದರ್ಶಿ ಎಸ್.ಎಂ. ವಾಲಿಕಾರ, ಗ್ರಾಮ ಲೆಕ್ಕಿಗ ಎಮ್.ಎಸ್.ಖಣಗಣ್ಣಿ, ಗ್ರಾಮ ಸಹಾಯಕ ಉಮೇಶ ಬೋಗೂರ, ಪಂಚಾಯತಿ ಸಿಬ್ಬಂದಿ ಸುಭಾಸ ಹರಿಜನ, ಈರಪ್ಪ ಪರುನವರ, ವಿರುಪಾಕ್ಷಿ ಕತ್ತಿ, ರಾಜಶೇಖರಯ್ಯ ಏಣಗಿಮಠ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಮರಕುಂಬಿ(ತಾ.ಸವದತ್ತಿ): ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ  ಸಂಘದ ಸದಸ್ಯ ಮುದಕಪ್ಪ ಬೋಗೂರ ಪೂಜೆ ಸಲ್ಲಿಸಿದರು.ಸಂಘದ ಅಧ್ಯಕ್ಷ ಕಾರ್ತಿಕ ಪಾಟೀಲ ಧ್ವಜಾರೋಹಣ ನೆರವೆರಿಸಿದರು. ಸದಸ್ಯರಾದ ಈಶ್ವರಪ್ಪ ಗುರಕನವರ, ವಿರುಪಾಕ್ಷಿ ಮೇಟಿ, ದೇಮಪ್ಪ ಭರಮೋತಿ, ಗ್ರಾಮ ಪಂಚಾಯತಿ ಸದಸ್ಯ ಅಡಿವೆಪ್ಪ ತೋಟಗಿ ಹಾಗೂ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಮರಕುಂಬಿ(ತಾ.ಸವದತ್ತಿ): ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗಾಂಧೀಜಿ ಭಾವ ಚಿತ್ರಕ್ಕೆ ಮುಖ್ಯಾಧ್ಯಾಪಕ ಎಸ್.ಎಸ್.ಬೆಳ್ಳಿಕಟ್ಟಿ ಪೂಜೆ ಸಲ್ಲಿಸಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ ಮುರಕಿಭಾಂವಿ ಜ್ಯೋತಿ ಬೆಳಗಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಪ್ಪ ಬೈಲವಾಡ ಧ್ವಜಾರೋಹಣ ನೆರವೇರಿಸಿದರು.ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್.ಡಿ.ಎಂ.ಸಿ,ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ತಾಲೂಕ ಪಂಚಾಯತಿ ಸದಸ್ಯೆ ಯಲ್ಲವ್ವ ಭರಮೋತಿ ಉಪಸ್ಥಿತರಿದ್ದರು. ಶಿಕ್ಷಕಿ ಎಸ್.ಎಸ್.ಮಚ್ಚೇದ ನಿರೂಪಿಸಿದರು. ಮುಖ್ಯ ಶಿಕ್ಷಕ ಎಸ್.ಎಸ್. ಬೆಳ್ಳಿಕಟ್ಟಿ ಸ್ವಾಗತಿಸಿದರು. ಎಮ್.ಆರ್.ಬಿಡಕರ ವಂದಿಸಿದರು.ಸಹಬಾಳ್ವೆ ನಡೆಸಲು ಸಲಹೆ

ಹಾರೂಗೇರಿ: ಜಾತಿ-ಮತ ಭೇದವನ್ನು ಮರೆತು ಸಮಾನತೆ ಹಾಗೂ ಸಹ ಬಾಳ್ವೆಯಿಂದ ಬದುಕುವುದು ಇಂದಿನ ಯುಗದಲ್ಲಿ ಅತಿ ಅವಶ್ಯಕವಾಗಿದೆ. ಜಾತೀಯತೆ ಎಂಬ ಭೂತವು ಸಮಾಜದಲ್ಲಿ ಬಿರುಕು ಮೂಡಿಸುತ್ತಿದ್ದು, ಯುವ ಪೀಳಿಗೆ ದಾರಿ ತಪ್ಪದಂತೆ ಜಾಗೃತರಾಗಿರಬೇಕು ಎಂದು ಸಂಸ್ಥೆಯ ಅಧ್ಯಕ್ಷ ಕೆಂಚಪ್ಪ ಪೂಜೇರಿ ಹೇಳಿದರು.

ಇಲ್ಲಿನ ಕರಿಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಅನುದಾನಿತ ಕರೆಸಿದ್ಧೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಚೌಗುಲೆ ರಾಷ್ಟ್ರ ನಾಯಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಐ.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿದ್ದಪ್ಪ ಹಾಡಕಾರ, ನಿರ್ದೇಶಕರಾದ ಹನಮಂತ ಬನಾಜ, ಡಿ.ಎಸ್.ಜಂಬಗಿ, ಆಡಳಿತ ಮಂಡಳಿ ಸದಸ್ಯರು, ಎನ್.ಎಲ್. ತಟ್ಟಿಮನಿ, ಡಿ.ಎಸ್. ಬಸಗೌಡರ, ಶಿಕ್ಷಕ ವರ್ಗ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.ಜೆ.ಜೆ.ಗಡಾದ ಪಥಸಂಚಲನ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಶಿಕ್ಷಕಿ ಜ್ಯೋತಿ ಹಸರೆ ನಡೆಸಿಕೊಟ್ಟರು.ಎನ್. ಎಲ್. ತಟ್ಟಮನಿ ಸ್ವಾಗತಿಸಿದರು. ಎಸ್.ಎ.ಜಲಗೇರಿ ನಿರೂಪಿಸಿದರು. ಎಚ್.ಎಂ. ಮಾಳಜಗೋಳ ವಂದಿಸಿದರು.ತೆಲಸಂಗ ವರದಿ

ಗ್ರಾಮದಲ್ಲಿ ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಯಲ್ಲಿ ರಾಷ್ಟ್ರ ನಾಯಕರ ವೇಷ ಧರಿಸಿ ಭಾರತಮಾತೆಯ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮಸ್ಥರು ತಮ್ಮ ಮನೆಯಂಗಳದಲ್ಲಿ ರಂಗೋಲಿ ಹಾಕಿ ಆರತಿ ಹಿಡಿದು ಹೂವು ಹಾಕಿ ಸ್ವಾಗತಿಸಿದರು.ನಾಡಕಚೇರಿ: ಉಪತಹಶೀಲ್ದಾರ ಕಾರ್ಯಾಲಯದಲ್ಲಿ ಉಪತಹಿಶೀಲ್ದಾರ ಎಂ. ಬಿ. ಕಾರಿಮನಿ ಧ್ವಜಾರೋಹಣ ಮಾಡಿದರು. ಗ್ರಾಮಲೆಕ್ಕಾಧಿಕಾರಿಗಳಾದ ಆರ್.ಪಿ. ಕ್ಷತ್ರಿ, ಗೋಪಾಲ ಶೆಲೆಪ್ಪಗೋಳ, ಅನಿಲ ಭಜಂತ್ರಿ, ಕೇಶವ ಉಂಡೊಡಿ ಹಾಜರಿದ್ದರು.ಮಾದರಿ ಶಾಲೆ: ಗ್ರಾಮದ ಕನ್ನಡ ಶಾಸಕರ ಮಾದರಿ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಣ್ಣು ಜಮಾದರ ಧ್ವಜಾರೋಹಣ ಮಾಡಿದರು. ಸದಸ್ಯರಾದ ವಿಲಾಸ ಕರ್ಣಿ, ಕಾಶಪ್ಪಾ ಹ್ಯಾಮಗೋಳ, ಮುಖ್ಯಾಧ್ಯಾಪಕ ಐ.ಎನ್.ಮುಜಾವರ ಹಾಗೂ ಶಿಕ್ಷಕರು ಹಾಜರಿದ್ದರು.ಬಿವಿವಿ ಸಂಘ: ಸಂಘದ ಮಹಾತ್ಮಾ ಗಾಂಧಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಡಾ.ಎ.ಎಸ್.ಆಯುಚತ್ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲ ಡಿ. ಎಂ. ಘೋರ್ಪಡೆ, ಮುರಿಗೆಪ್ಪಾ ಹತ್ತಿ, ಗಂಗಪ್ಪಾ ಗಂಗಾಧರ, ಶಿಕ್ಷಕರಾದ ಆರ್. ಎಸ್. ಈಟಿ, ದೊಡಮನಿ, ಪಾಟೀಲ, ಬಿರಾದರ, ಸಾರವಾಡ, ಗಲಗಲಿ, ಸನಗೊಂಡ, ಅರ್ದಾವೂರ, ಗದಗ, ವೀಬೂತಿ, ಅವಟಿ. ಬಿ, ಪಾಲ್ಗೊಂಡಿದ್ದರು.ಮಾಧವಾನಂದನಗರ: ನಗರದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಧನವಂತ ಹಳಿಂಗಿಳಿ ಧ್ವಜಾರೋಹಣ ನೆರವೇರಿಸಿದರು.ಎಸ್‌ಡಿಎಂಸಿ ಆಧ್ಯಕ್ಷ ಕಲ್ಲಪ್ಪಾ ಕನ್ನೂರ, ಮಾಯಪ್ಪಾ ನಿಡೊಣಿ, ವಿ.ಜಿ.ಮೋರೆ, ತುಕಾರಾಮ ಅಭಂಗರಾವ, ಸಿ.ಸಿ.ಪಾಟೀಲ, ಬಿ.ಬಿ.ಪಾಟೀಲ, ಮುಖ್ಯಾಧ್ಯಾಫಕ ರಮೇಶ ಗೋಂದಳಿ, ಬಿ.ಎಂ. ಮಾಳಿ ಹಾಜರಿದ್ದರು.ಹೆಸ್ಕಾಂ ಕಚೇರಿ: ಗ್ರಾಮದ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಶಾಖಾಧಿಕಾರಿ ಜಿ.ಎಸ್.ಜಂಬಗಿ ಧ್ವಜಾರೋಹಣ ಮಾಡಿದರು. ಸಿಬ್ಬಂದಿಗಳಾದ ಬಿ.ಎನ್.ಕಾಂಬಳೆ, ಯು.ಪಿ.ಪಾಂಗಿ, ಡಿ.ಎಂ. ಪೂಜಾರಿ, ಎಸ್.ಎಂ.ನಡೊಣಿ, ಎಸ್.ಎ.ಬಿಜ್ಜರಗಿ, ಎ.ಎಸ್.ಬುಪೂರ, ಎಮ್.ಆರ್.ಹೊನವಾಡ, ಪಿ.ಆರ್.ವಾಲಿ, ವಿ.ಎಲ್.ವಡೆಯರ್ ಇದ್ದರು.

 

ಬಾಲಕರ ವಸತಿನಿಲಯದಲ್ಲಿ ಪ್ರಾಂಶುಪಾಲರಾದ ಡಿ.ಎಂ ಘೋರ್ಪಡೆ, ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆ ಶಾರದಾ ಮೆಣಸಂಗಿ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಸಂಗು ಕಂದಾರೆ, ಮಾಳಪ್ಪಾ ಸವಣೂರ, ಬಸವರಾಜ ಚಿಕ್ಕಟ್ಟಿ, ಪಿಡಿಒ ಮಹಾದೇವಪ್ಪಾ ಉಪಸ್ತಿತರಿದ್ದರು.ಪತ್ತಿನ ಬ್ಯಾಂಕ: ಸಹಕಾರಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಅಧ್ಯಕ್ಷ ಸುರೇಶ ಹುಜರೆ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಸಿದ್ದು ಅಥಣಿ, ನಾಗಪ್ಪಾ ಶೇಲ್ಲೆಪ್ಪಗೋಳ, ಭೀಮು ಅವಟಿ, ಸುಭಾಷ ಮೋರೆ, ಗುರುರಾಜ ಕುಂಬಾರ, ಶ್ರೀಶೈಲ ಶೇಲ್ಲೆಪ್ಪಗೋಳ ಕಾರ್ಯದರ್ಶಿ ಮನೋಹರ ಬಡಿಗೇರ ಹಾಜರಿದ್ದರು.ಜ್ಞಾನ ಭಾರತಿ ಶಾಲೆಯಲ್ಲಿ ವಿ.ಪಿ ಮೋರೆ ಧ್ವಜಾರೋಹಣ ಮಾಡಿದರು. ಅಧ್ಯಕ್ಷ ಡಾ.ಬಿ.ಎಸ್. ಕಾಮನ್, ಬಿಜೆಪಿ ಮುಖಂಡ ಎನ್.ಎಸ್.ಶೇಲ್ಲೆಪ್ಪಗೋಳ, ಶಂಕರ ದಳವಾಯಿ, ಬಾಬಾಜಿ ಶಿಂಧೆ, ಶಿಕ್ಷಕರಾದ ಬಸವರಾಜ ಅವಟಿ. ಸಲೀಮ ಅಪರಾಜ, ದಸ್ಗೀರ. ಗಪೂರ ಮುಲ್ಲಾ, ಬಸವರಾಜ ಹೊನ್ಕಾಂಬ್ಳೆ, ಜಗದೀಶ ಪೂಜಾರಿ, ಉಪಸ್ತಿತರಿದ್ದರು.ವಿಶ್ವ ಚೇತನ ವಿದ್ಯಾ ಮಂದಿರದಲ್ಲಿ ಜಿ.ಪಂ.ಸದಸ್ಯೆ ವಿಜಯಲಕ್ಷ್ಮಿ ರೋಡಗಿ ಧ್ವಜಾರೋಹಣ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷ ಡಾ.ಎಸ್.ಐ. ಇಂಚಗೇರಿ, ಸಂಜು ಹುಜರೆ, ಬಾಳು ನಾಟೀಕಾರ, ಮಾಯಪ್ಪಾ ಸಾವಳಗಿ, ಮಲ್ಲು ರೊಟ್ಟಿ, ಅರುಣ ಮೋರೆ, ರಾಜು ಸೋರಡಿ, ಅಪ್ಪು ಬಿಜ್ಜರಗಿ, ಅಶೋಕ ಶಿಂಧೆ, ಮುಖ್ಯಾಧ್ಯಾಪಕಿ ರಾಜೇಶ್ವರಿ ಇಂಚಗೇರಿ ಹಾಜರಿದ್ದರು.ಮಲ್ಲಪ್ಪ ಯೇಗಪ್ಪ ಖ್ಯಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ವಿ.ಎನ್.ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.`ದೇಶದ ಅಭಿವೃದ್ಧಿಗೆ ಶ್ರಮಿಸಿ~

ಬೈಲಹೊಂಗಲ: ಸ್ವಾತಂತ್ರ್ಯಕ್ಕಾಗಿ ಜೀವನವನ್ನು ತ್ಯಾಗ, ಬಲಿದಾನ ಮಾಡಿದ ಹುತಾತ್ಮರ ಹಾಗೂ ಗಡಿ ರಕ್ಷಣೆಯಲ್ಲಿ ತೊಡಗಿರುವ ಯೋಧರ ಸ್ಮರಣೆ ಮಾಡಿ. ಎಲ್ಲರೂ ಭಾರತೀಯರು ಎನ್ನುವ ಒಗ್ಗಟ್ಟಿನಿಂದ ದೇಶದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕು ಎಂದು ಮೇ. ಸಿದ್ದಲಿಂಗಯ್ಯ ಹಿರೇಮಠ ಸಲಹೆ ನೀಡಿದರು.ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿಯ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಮೈಸೂರ ಮಿನರಲ್ಸ್ ಅಧ್ಯಕ್ಷ, ಶಾಸಕ ಜಗದೀಶ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ತಾ.ಪಂ.ಅಧ್ಯಕ್ಷೆ ಬಸವ್ವ ಗುರ್ಲಕಟ್ಟಿ, ಉಪಾಧ್ಯಕ್ಷೆ ಪ್ರೇಮಾ ಶಿವನ್ನವರ, ಪುರಸಭೆ ಅಧ್ಯಕ್ಷೆ ಸರಸ್ವತಿ ಕಟ್ಟಿಮನಿ, ಉಪಾಧ್ಯಕ್ಷೆ ಗುಡುಮಾಬಿ ದೇಶನೂರ, ನ್ಯಾಯಾಧೀಶರಾದ ವಿ.ಕೆ. ಬಡಿಗೇರ, ಎ.ಡಿ. ಮಹಾಂತಪ್ಪ, ಕೆ.ಎಂ. ರಾಜೇಂದ್ರಕುಮಾರ, ನಾಗರಾಜ ಅಂಕಸದೊಡ್ಡಿ, ಡಿಎಸ್ಪಿ ಎಸ್.ಬಿ. ಪಾಟೀಲ, ಸಿಪಿಐ ಡಾ.ಅರುಣಕುಮಾರ ಹಪ್ಪಳಿ, ತಹಸೀಲ್ದಾರ ಪಿ.ಎನ್.ಲೋಕೇಶ, ಕ್ಷೇತ್ರಶಿಕ್ಷಣಾಧಿಕಾರಿ ವಿನೋದ ನಾಯಕ, ಪುರಸಭೆ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ವಾತಂತ್ರ್ಯಯೋಧರು ಹಾಜರಿದ್ದರು.ಪಿಎಸ್‌ಐ ಪ್ರಭಾಕರ ಧರ್ಮಟ್ಟಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಎನ್.ಸಿ.ಸಿ., ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.ಸ್ವಾತಂತ್ರ್ಯಯೋಧರು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಸತ್ಕರಿಸಲಾಯಿತು. ಸ್ವಾತಂತ್ರೋತ್ಸವ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.