ಬೆಳಗಾವಿ, ಬೈಲಹೊಂಗಲದಲ್ಲಿ ಚಿತ್ರೋತ್ಸವ

7

ಬೆಳಗಾವಿ, ಬೈಲಹೊಂಗಲದಲ್ಲಿ ಚಿತ್ರೋತ್ಸವ

Published:
Updated:

ಬೆಳಗಾವಿ: ಕಿತ್ತೂರು ಉತ್ಸವದ ಅಂಗವಾಗಿ ಬೆಳಗಾವಿ ಹಾಗೂ ಬೈಲಹೊಂಗಲದಲ್ಲಿ ಅ.22 ರಿಂದ 25ರ ವರೆಗೆ ಕನ್ನಡ ಚಲನಚಿತ್ರೋತ್ಸವ ಏರ್ಪಡಿಸಲಾಗಿದೆ.ನಾಲ್ಕು ದಿನಗಳವರೆಗೆ ನಡೆಯಲಿರುವ ಈ ಚಿತ್ರೋತ್ಸವವನ್ನು ಅ.22 ರಂದು ಬೆಳಗ್ಗೆ 9.30 ಗಂಟೆಗೆ ನಗರದ ನರ್ತಕಿ ಚಿತ್ರಮಂದಿರದಲ್ಲಿ ಚಲನಚಿತ್ರ ನಿರ್ಮಾಪಕ ಬಸಂತಕುಮಾರ ಪಾಟೀಲ ಉದ್ಘಾಟಿಸಲಿದ್ದಾರೆ.ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಚಿವ ಲಕ್ಷ್ಮಣ ಸವದಿ, ಸಚಿವ ಬಾಲಚಂದ್ರ ಜಾರಕಿಹೊಳಿ, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಶಂಕರಗೌಡ ಪಾಟೀಲ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಶಾಸಕರಾದ ಫಿರೋಜ್ ಸೇಠ, ಸಂಜಯ ಪಾಟೀಲ, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಮೇಯರ್ ಮಂದಾ ಬಾಳೇಕುಂದ್ರಿ, ಜಿ.ಪಂ. ಅಧ್ಯಕ್ಷ  ಈರಣ್ಣ ಕಡಾಡಿ ಆಗಮಿಸಲಿದ್ದಾರೆ ಅವರು ಹೇಳಿದರು.ಜಿಲ್ಲಾಧಿಕಾರಿ ಡಾ.ಏಕ್‌ರೂಪ್ ಕೌರ್, ಜಿಪಂ ಸಿಇಒ ಡಾ. ಅಜಯ್ ನಾಗಭೂಷಣ, ಜಿಲ್ಲಾ ಪೋಲಿಸ ವರಿಷ್ಠ ಸಂದೀಪ ಪಾಟೀಲ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಅವಿನಾಶ ಪೋತದಾರ ಅತಿಥಿಗಳಾಗಿ ಆಗಮಿಸುವರು.ಒಟ್ಟು ಎಂಟು ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಕೆಳಗಿನಂತಿವೆ. ಅ.22 ರಂದು ನರ್ತಕಿ ಚಿತ್ರಮಂದಿರದಲ್ಲಿ ಬಂಗಾರದ ಮನುಷ್ಯ, ಸ್ವರೂಪ ಚಿತ್ರಮಂದಿರದಲ್ಲಿ ಅಮೆರಿಕಾ ಅಮೆರಿಕಾ, 23ರಂದು ಹೀರಾ ಚಿತ್ರಮಂದಿರದಲ್ಲಿ ನಾಗರ ಹಾವು, ಚಿತ್ರಾ ಚಿತ್ರಮಂದಿರದಲ್ಲಿ ಕಬಡ್ಡಿ ಚಲನಚಿತ್ರ ಪ್ರದರ್ಶನಗೊಳ್ಳಲಿವೆ.ಅ.24 ರಂದು ರೂಪಾಲಿ ಚಿತ್ರಮಂದಿರದಲ್ಲಿ ದೀಪಾವಳಿ, ಪ್ರಕಾಶ ಚಿತ್ರಮಂದಿರದಲ್ಲಿ ಜನುಮದ ಜೋಡಿ, ಅ.25 ರಂದು ನಿರ್ಮಲ ಚಿತ್ರಮಂದಿರದಲ್ಲಿ ಪ್ರೀತಿ ಪ್ರೇಮ ಪ್ರಣಯ, ಸಂತೋಷ ಚಿತ್ರಮಂದಿರದಲ್ಲಿ ಅಪ್ಪು ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಈ ಎಲ್ಲ ಚಲನಚಿತ್ರಗಳು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರ ವರೆಗೆ ಪ್ರದರ್ಶನಗೊಳ್ಳಲಿವೆ.ಬೈಲಹೊಂಗಲದ ಸಂಗಮ ಚಿತ್ರಮಂದಿರದಲ್ಲಿ ಅ.22 ರಂದು ಅಪ್ಪು, ಅ.23 ರಂದು ಜನುಮದ ಜೋಡಿ, ಅ.24 ರಂದು ಕಬಡ್ಡಿ, ಅ.25 ರಂದು ಅಮೆರಿಕಾ ಅಮೆರಿಕಾ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.ಭಾರತ ಚಲನಚಿತ್ರ ಮಂದಿರದಲ್ಲಿ ಅ.22 ರಂದು ಪ್ರೀತಿ ಪ್ರೇಮ ಪ್ರಣಯ, ಅ.23 ರಂದು ದೀಪಾವಳಿ, ಅ.24 ರಂದು ನಾಗರ ಹಾವು, ಅ.25 ರಂದು ಬಂಗಾರದ ಮನುಷ್ಯ ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಬೆಳಿಗ್ಗೆ 9 ಗಂಟೆುಂದ ಮಧ್ಯಾಹ್ನ 12ರ ವರೆಗೆ ಪ್ರದರ್ಶನಗೊಳ್ಳಲಿವೆ.ಈ ಚಲನಚಿತ್ರಗಳಿಗೆ ಪ್ರವೇಶ ಪಾಸ್ ನೀಡಲಾಗುತ್ತಿದ್ದು, ಆಯಾ ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕರು ಉಚಿತಪಾಸ್ ಪಡೆದುಕೊಳ್ಳಬಹುದಾಗಿದೆ.ವೀರಜ್ಯೋತಿಗೆ ಭವ್ಯ ಸ್ವಾಗತ

ಘಟಪ್ರಭಾ (ಗೋಕಾಕ):
ಕಿತ್ತೂರ ಉತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಕಿತ್ತೂರ ವೀರಜ್ಯೋತಿ ಯಾತ್ರೆಗೆ ಇಲ್ಲಿಗೆ ಸಮೀಪದ ಲೋಳಸೂರ ಗ್ರಾಮಕ್ಕೆ ಗುರುವಾರ ಸಂಜೆ ಆಗಮಿಸುತ್ತಿದ್ದಂತೆಯೇ  ಭವ್ಯ ಸ್ವಾಗತ ನೀಡಲಾಯಿತು.ಗ್ರಾಮಕ್ಕೆ ಆಗಮಿಸಿದ ವೀರಜ್ಯೋತಿ ಯಾತ್ರೆಗೆ ಗ್ರಾ.ಪಂ ಉಪಾಧ್ಯಕ್ಷೆ ಯಲ್ಲವ್ವ ಗುಡದನ್ನವರ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಸುರೇಶ ಗಸ್ತಿ, ಶಿದ್ರಾಮ ಬೆಣಚಿನಮರ್ಡಿ, ಕಸ್ತೂರಿ ಬೆಣಚಿನಮರ್ಡಿ ಹಾಗೂ ಲಕ್ಷ್ಮೀಬಾಯಿ ಪಡತಾರಿ, ತಹಶೀಲ್ದಾರ ಔದ್ರಾಮ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಸ್.ಪುಟಾಣಿ, ಗ್ರಾಮಲೆಕ್ಕಾಧಿಕಾರಿ ಎಸ್.ಎನ್.ಹಿರೇಮಠ, ಗ್ರಾ.ಪಂ. ಸಿಬ್ಬಂದಿ ಎಂ.ಬಿ.ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry