ಬೆಳಗಾವಿ ಶೃಂಗಾರಕ್ಕೆ ರೂ 17 ಕೋಟಿ ಬಿಡುಗಡೆ

7

ಬೆಳಗಾವಿ ಶೃಂಗಾರಕ್ಕೆ ರೂ 17 ಕೋಟಿ ಬಿಡುಗಡೆ

Published:
Updated:

ಬೆಂಗಳೂರು: `ಸುವರ್ಣ ಸೌಧ~ದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಅನೇಕ ರಾಜಕಾರಣಿಗಳು ಬೆಳಗಾವಿಗೆ ಗುರುವಾರ ಭೇಟಿ ನೀಡುತ್ತಿರುವ ಕಾರಣ, ನಗರವನ್ನು ಸಿಂಗರಿಸಲು ಸರ್ಕಾರ 17 ಕೋಟಿ ರೂಪಾಯಿ ವೆಚ್ಚ ಮಾಡಲಿದೆ.ರಾಷ್ಟ್ರಪತಿಗಳು ಭಾಗವಹಿಸಲಿರುವ ಎರಡು ಕಾರ್ಯಕ್ರಮಗಳ ಸಿದ್ಧತೆಗೆ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳು, ಪಾದಚಾರಿ ಮಾರ್ಗಗಳ ರಿಪೇರಿಗೆ ಲೋಕೋಪಯೋಗಿ ಇಲಾಖೆ ಎಂಟು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.600 ಮಂದಿ ಗಣ್ಯ ವ್ಯಕ್ತಿಗಳು ಹಾಗೂ 400 ಮಂದಿ ಅಧಿಕಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಐದು ಕೋಟಿ ರೂಪಾಯಿ ವೆಚ್ಚ ಮಾಡಲು ಉದ್ದೇಶಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸರ್ಕಾರವು ರಾಷ್ಟ್ರಪತಿಗಳಿಗೆ ಬೆಳ್ಳಿಯಿಂದ ತಯಾರಿಸಲಾದ, ಎರಡು ಕೆ.ಜಿ. ತೂಕದ ರಾಣಿ ಚೆನ್ನಮ್ಮಳ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ, ಎಂಟು ಆಸನಗಳುಳ್ಳ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಬುಧವಾರ ಸಂಜೆ 5ಕ್ಕೆ ತೆರಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry