ಸೋಮವಾರ, ಮಾರ್ಚ್ 1, 2021
24 °C

ಬೆಳಗಿದ ಒಲಿಂಪಿಕ್ಸ್‌ ಜ್ಯೋತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಿದ ಒಲಿಂಪಿಕ್ಸ್‌ ಜ್ಯೋತಿ

ರಿಯೊ ಡಿ ಜನೈರೊ: ಕ್ರೀಡಾಕೂಟದ ಅತ್ಯಂತ ಪ್ರಮುಖ ಹಾಗೂ ಕೇಂದ್ರ ಬಿಂದುವಾಗಿದ್ದ ಒಲಿಂಪಿಕ್ಸ್‌ ಜ್ಯೋತಿಯನ್ನು ಬ್ರೆಜಿಲ್‌ನ ಕ್ರೀಡಾಪಟು, 2004ರ ಅಥೆನ್ಸ್‌ ಒಲಿಂಪಿಕ್ಸ್‌ನ ಮ್ಯಾರಾಥಾನ್‌ನಲ್ಲಿ ಕಂಚಿನ ಪದಕ ವಿಜೇತ ವಂಡರ್ಲಿ ಡಿ ಲಿಮಾ ಅವರು ಬೆಳಗಿಸಿದರು.ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ ಶನಿವಾರ ಬೆಳಗಿನ ಜಾವ 4.30ಕ್ಕೆ) ವರ್ಣರಂಜಿತವಾಗಿ ಚಾಲನೆ ಪಡೆದ ರಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು.ಟೆನಿಸ್‌ನ ಮಾಜಿ ವಿಶ್ವ ಚಾಂಪಿಯನ್ ಹಾಗೂ ಮೂರು ಬಾರಿ ಫ್ರೆಂಚ್ ಓಪನ್‌ ವಿಜೇತ ಗುಸ್ಟಾವೊ ಕ್ಯುರ್ಟೆನ್‌ ಅವರು ಒಲಿಂಪಿಕ್‌ ಜ್ಯೋತಿಯನ್ನು ಹಿಡಿದು ಕ್ರೀಡಾಂಗಣದಲ್ಲಿ ಬರುತ್ತಿದ್ದಂತೆ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಕೇಕೆ ಹಾಕಿ ಹಷೋದ್ಘಾರ ವ್ಯಕ್ತಪಡಿಸಿದರು.ಕ್ಯೂರ್ಟೆನ್‌ ಅವರಿಂದ ಜ್ಯೋತಿಯನ್ನು ಪಡೆದ ಡಿ ಲಿಮಾ ಅವರು ವೇದಿಕೆಯಲ್ಲಿದ್ದ ಒಲಿಂಪಿಕ್ಸ್‌ ಜ್ಯೋತಿಗೆ ಸ್ಪರ್ಶಿಸಿದರು. ಜ್ಯೋತಿ ಬೆಳಗಿಸಿದ ಬಳಿಕ ಹೆಮ್ಮೆಯಿಂದ ನೆರೆದಿದ್ದವರತ್ತ ಕೈ ಬೀಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.