ಶನಿವಾರ, ಮೇ 8, 2021
18 °C
ರಾಜನಾಥ್ ಸಿಂಗ್‌ಗೆ ದಿಗ್ವಿಜಯ್ ಎಚ್ಚರಿಕೆ

ಬೆಳೆಸಿದವರ ಕೈ ಕತ್ತರಿಸಿದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳೆಸಿದವರ ಕೈ ಕತ್ತರಿಸಿದ ಮೋದಿ

ನವದೆಹಲಿ (ಪಿಟಿಐ): ಸದಾ ತನ್ನನ್ನು ಬೆಳೆಸಿದವರ ಕೈಗಳನ್ನು ಕತ್ತರಿಸುತ್ತ ಬಂದ ಮೋದಿ ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.ನವದೆಹಲಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಡ್ವಾಣಿ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. `ಮೋದಿ ಎಂದಿಗೂ ಅಪಾಯಕಾರಿ ಅಲ್ಲ. ಅವರನ್ನು ಕಾಂಗ್ರೆಸ್ ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ' ಎಂದರು.ಮುಂಬರುವ ಲೋಕಸಭಾ ಚುನಾವಣೆ ರಾಹುಲ್ ಮತ್ತು ಮೋದಿ ವರ್ಚಸ್ಸನ್ನು ಒರೆಗಲ್ಲಿಗೆ ಹಚ್ಚುವ ಅಗ್ನಿಪರೀಕ್ಷೆಯಾಗಲಿದೆ ಎಂಬ ವಾದವನ್ನು ಅಲ್ಲಗಳೆದ ದಿಗ್ವಿಜಯ್, `ನಾವು ತತ್ವ, ಸಿದ್ಧಾಂತಗಳ ಮೇಲೆ ಚುನಾವಣೆ ಎದುರಿಸುತ್ತೇವೆಯ ಹೊರತು ವ್ಯಕ್ತಿಗಳ ಆಧಾರದ ಮೇಲಲ್ಲ' ಎಂದರು.`ಕರ್ನಾಟಕ ಚುನಾವಣೆಯಲ್ಲಿ ಮೋದಿ ಜನಪ್ರಿಯತೆ ಕೆಲಸ ಮಾಡಿಲ್ಲ. ಕೋಮುವಾದಿ ರಾಜಕೀಯ ಮತ್ತು ಕೋಮುವಾದಿ ವ್ಯಕ್ತಿಗಳನ್ನು ಆರಾಧಿಸುವ ಜನರ ಗುಂಪಿನ ಮಧ್ಯೆ ಮಾತ್ರ ಅವರು ಜನಪ್ರಿಯತೆ ಗಳಿಸಿದ್ದಾರೆ' ಎಂದು ಅವರು ಲೇವಡಿ ಮಾಡಿದ್ದಾರೆ.ಈ ರೀತಿಯ ರಾಜಕೀಯ ದೇಶದ ತತ್ವ, ಸಿದ್ಧಾಂತಗಳ ಆಶಯಗಳಿಗೆ ವಿರೋಧವಾಗಿದೆ. ಜನಸಾಮಾನ್ಯರು ಕೋಮುವಾದಿ ರಾಜಕೀಯ ಮತ್ತು ಮೋದಿ ಅವರಂತಹ ಕೋಮುವಾದಿ ವ್ಯಕ್ತಿಗಳನ್ನು ಮೆಚ್ಚುವುದಿಲ್ಲ' ಎಂದೂ ದಿಗ್ವಿಜಯ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.