ಬೆಳೆಹಾನಿ: ಪರಿಹಾರಕ್ಕೆ ಸೂಚನೆ

7

ಬೆಳೆಹಾನಿ: ಪರಿಹಾರಕ್ಕೆ ಸೂಚನೆ

Published:
Updated:

ಬೆಂಗಳೂರು: ಆನೆ, ಕೃಷ್ಣ ಮೃಗ ಸೇರಿದಂತೆ ಇತರ ವನ್ಯ ಪ್ರಾಣಿಗಳ ಹಾವಳಿಯಿಂದ ಆಗುತ್ತಿರುವ ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡಲು ಅರಣ್ಯ ಸಚಿವ ಸಿ.ಎಸ್.ವಿಜಯಶಂಕರ್ ಶನಿವಾರ ಇಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಅರಣ್ಯಭವನದಲ್ಲಿ ನಡೆದ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆನೆ ಹಾವಳಿಯಿಂದ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಅಪಾರ ನಷ್ಟ ಆಗುತ್ತಿದ್ದು, ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು.ಹಾಗೆಯೇ ಕೃಷ್ಣ ಮೃಗಗಳ ಹಾವಳಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ತಹವರಿಗೆ ್ಙ 25 ಸಾವಿರ ನಷ್ಟ ಆಗಿದ್ದರೆ, ಅಷ್ಟೂ ಮೊತ್ತದ ಪರಿಹಾರ ನೀಡುವುದು. ನಷ್ಟದ ಪ್ರಮಾಣ ಇದಕ್ಕಿಂತ ಜಾಸ್ತಿಯಾದರೆ, ಅದರ ಅರ್ಧದಷ್ಟು ಪರಿಹಾರ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry