ಬೆಳೆ ಸಾಕಷ್ಟಿದೆ, ಕೊಯ್ಯುವವರಿಲ್ಲ:ರಹಮತ್

7

ಬೆಳೆ ಸಾಕಷ್ಟಿದೆ, ಕೊಯ್ಯುವವರಿಲ್ಲ:ರಹಮತ್

Published:
Updated:

ಮುದ್ದೇಬಿಹಾಳ: ವಿಜಾಪುರ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ, ಬರಗಾಲದ ಜಿಲ್ಲೆ ಎಂದೇ ನಾವು ಗುರುತಿಸುವುದು ಸರಿಯಲ್ಲ, ಬರಗಾಲಕ್ಕೆ ಸವಾಲು ಹಾಕುವಷ್ಟು ಅಪಾರ ಸಾಂಸ್ಕೃತಿಕ ಸಂಪತ್ತು ಇಲ್ಲಿದೆ, ಆದರೆ ಅದರ ಫಸಲನ್ನು ಕೊಯ್ಯುವವರೇ ಇಲ್ಲ ಎಂದು ಹಂಪಿ ವಿಶ್ವ ವಿದ್ಯಾಲಯದ ಕನ್ನಡ ಸಾಹಿತ್ಯ ಸಂಶೋಧನೆ ವಿಭಾಗದ ಮುಖ್ಯಸ್ಥ, ವಿಮರ್ಶಕ ಡಾ.ರಹಮತ್ ತರಿಕೇರೆ ಹೇಳಿದರು.ಮಂಗಳವಾರ ಬಿದರಕುಂದಿ ಗ್ರಾಮದಲ್ಲಿ  ಎಲ್.ಎನ್.ನಾಯ್ಕಡಿ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಪ್ರಗತಿಶೀಲ ಗೆಳೆಯರ ಬಳಗ, ಮಹಾಮನೆ ಬಳಗ ಹಮ್ಮಿಕೊಂಡಿದ್ದ ಎಲ್.ಎನ್. ನಾಯ್ಕಡಿ ಶಿಕ್ಷಕರ 23ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಡಿವೆಪ್ಪ ಕಡಿ, ಮಾಜಿ ಶಾಸಕ ಎಂ.ಎಂ.ಸಜ್ಜನ, ಹಿರಿಯ ಸಾಹಿತಿ ಪ್ರೊ.ಬಿ.ಎಂ. ಹಿರೇ ಮಠ, ಜಾನಪದ ಸಾಹಿತಿ ಡಾ.ಶಂಭು ಬಳಿಗಾರ ಮಾತನಾಡಿದರು. ಶಿರೂರದ ಮಹಾಂತತೀರ್ಥದ ಡಾ.ಬಸವಲಿಂಗ ಸ್ವಾಮಿಗಳು, ಕೂಡಲ ಸಂಗಮದ ವೀರಶೈವ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜೆ.ಡಿ.ಎಸ್. ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಭು ದೇಸಾಯಿ, ಬಿದರಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಪಿ.ಮುರಾಳ, ಇಲಕಲ್ಲ ಸಾರಿಗೆ ಘಟಕದ ವ್ಯವಸ್ಥಾಪಕ ಬಿ.ಬಿ. ಚಿತ್ತವಾಡಗಿ, ಎ.ಪಿ.ಎಂ.ಸಿ.ಸದಸ್ಯ ಸಿ.ಬಿ.ಪಾಟೀಲ, ಕಾ.ಹು.ಬಿಜಾಪೂರ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಇಲಾಖೆ, ಅಂಚೆ ಇಲಾಖೆ, ಮಹಾಮನೆ, ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ವಚನ ಗಾಯಕ ಎಚ್.ಕೆ. ನಾಗನೂರ ಪ್ರಾರ್ಥಿಸಿದರು. ಎಂ.ಎಸ್. ಗಡೇದ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ಅಬ್ದುಲ ರೆಹಮಾನ ಬಿದರಕುಂದಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವೈ.ಎಚ್. ವಿಜಯಕರ ಹಾಗೂ ಅಶೋಕ ಮಣಿ ನಿರೂಪಿಸಿದರು. ಇಬ್ರಾಹಿಂ ಬಿದರಕುಂದಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry