ಭಾನುವಾರ, ನವೆಂಬರ್ 17, 2019
29 °C

ಬೆಳ್ಮಣ್: ಗಮನ ಸೆಳೆದ ಮಕ್ಕಳ ವನಮಹೋತ್ಸವ

Published:
Updated:

ಕಾರ್ಕಳ: ತಾಲ್ಲೂಕಿನ ಬೆಳ್ಮಣ್ ಸೇಂಟ್ ಜೋಸೆಫ್ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಂಯುಕ್ತವಾಗಿ ಇತ್ತೀಚೆಗೆ ವನಮಹೋತ್ಸವವನ್ನು ಆಚರಿಸಿದರು.ನಮ್ಮ ಶ್ರಮದ ಫಲ ನಾವೇ ಉಣ್ಣಬೇಕು. `ನಮ್ಮ ಬೆಳೆ ನಮಗೆ~ ಎಂಬ ಧ್ಯೇಯದೊಂದಿಗೆ ಶಾಲಾ ಅಕ್ಷರದಾಸೋಹಕ್ಕೆ ಪೂರಕವಾಗಿ ಶಾಲಾ ಪರಿಸರದಲ್ಲಿ ಸುವರ್ಣಗೆಡ್ಡೆ, ತರಕಾರಿ, ಬಾಳೆಗಿಡ, ಅಂಬಡೆ ಸಸಿ, ಕರಿಬೇವಿನ ಗಿಡ, ನುಗ್ಗೆ, ದೀವಿಗೆ ಹಲಸು ,ಪಪ್ಪಾಯಿ, ಮೊದಲಾದ ತರಕಾರಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವದ ಆನಂದ ಅನುಭವಿಸಿದರು.ಶಿಕ್ಷಕ ಬಿ. ಪುಂಡಲೀಕ ಮರಾಠೆ ಮನಮಹೋತ್ಸವ ಮಹತ್ವ ಕುರಿತು ಮಾತನಾಡಿ, ಮನೆಯಲ್ಲಿ ಜೀವಸಂಜೀವಿನಿಯಾದ ತರಕಾರಿ ಬೆಳಸುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯ. ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯ ಗಳಿಸಬಹುದು ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಮೊನಿಕಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಜೆನೆಟ್ ಡಿಸೋಜಾ, ಕಾರ್ಯಕ್ರಮ ಸಂಯೋಜಕಿ ಲಿಲ್ಲಿ ಡಿಸೋಜಾ, ಹಿರಿಯ ಶಿಕ್ಷಕಿ ಜುಲಿಯಾನ ಮೊರಾಸ್, ಸಿಸ್ಟರ್ ಸ್ಟೆಲ್ಲಾ ಡಿಸೋಜ, ಶಿಕ್ಷಕಿಯ ರಾದ ಗಾಯತ್ರಿ ಭಟ್, ಲೀನಾ ಮಥಾ  ಯಸ್, ದೈಹಿಕ ಶಿಕ್ಷಣ ಶಿಕ್ಷಕ ಹಷೇಂದ್ರಕುಮಾರ್ ಜೈನ್, ಲವಿನಾ ಪಿಂಟೊ, ಸುಚಿತ್ರಾ ಕುಲಾಲ್ ಮತ್ತಿತರರು ಇದ್ದರು.ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ವಿನ್ಸೆಂಟ್ ಪಿಂಟೊ ನಿರೂಪಿಸಿದರು. ನಾಗರಾಜ ಆಚಾರ್ಯ ವಂದಿಸಿದರು.

ಪ್ರತಿಕ್ರಿಯಿಸಿ (+)