ಗುರುವಾರ , ನವೆಂಬರ್ 14, 2019
18 °C

ಬೆಳ್ಮಣ್: ಯಕ್ಷಗಾನ ಕಲಾ ಮಂಡಳಿಗೆ ಸಾಧನಾ ಪ್ರಶಸ್ತಿ

Published:
Updated:

ಕಾರ್ಕಳ: ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ತಾಲ್ಲೂಕಿನ ಬೆಳ್ಮಣ್ ಯುವ ಜೇಸಿ ಯಕ್ಷಗಾನ ಕಲಾ ಮಂಡಳಿಗೆ ಸಮಗ್ರ ಯಕ್ಷಗಾನ ಸಾಧನಾ ಪ್ರಶಸ್ತಿಯನ್ನು ನೀಡಲಾಯಿತು.ಸೂಡ ಸುಬ್ರಹ್ಮಣ್ಯ ಯಕ್ಷಕಲಾ ಭಾರತಿ ವತಿಯಿಂದ ನಡೆದ ತುಳು ಯಕ್ಷಗಾನ ಕುದಿ ಕೂಟ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಕಳೆದ ಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಯುವ ಜೇಸಿ ಯಕ್ಷಗಾನ ಕಲಾ ಮಂಡಳಿ ಯಕ್ಷಗಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ.ಸ್ಥಳೀಯ ಯುವಕರಿಗೆ ಯಕ್ಷಗಾನ ತರಬೇತಿ ನೀಡುತ್ತ ಬರುತ್ತಿರುವ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಸಮಗ್ರ ಯಕ್ಷಗಾನ ಸಾಧನಾ ಪ್ರಶಸ್ತಿ ನೀಡಲಾಗುತ್ತಿದೆ. ಯುವ ಜೇಸಿ ಯಕ್ಷಗಾನ ಕಲಾ ಮಂಡಳಿಯ ಸಂಚಾಲಕ ಸುಭಾಷ್ ಕುಮಾರ್ ನಂದಳಿಕೆ ಅವರನ್ನು ಕಾರ್ಕಳ ಶಾಸಕ ಎಚ್.ಗೋಪಾಲ ಭಂಡಾರಿ ಅಭಿನಂದಿಸಿದರು.  ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್, ಸಾಹಿತಿ ಡಾ.ಎಂ.ಪ್ರಭಾಕರ ಜೋಷಿ, ಬೆಂಗಳೂರಿನ ಉದ್ಯಮಿ ಜನಾರ್ದನ ಶಾಸ್ತ್ರಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ, ಬೆಳ್ಮಣ್ ಜೇಸಿ ಅಧ್ಯಕ್ಷ ರಘುನಾಥ ನಾಯಕ್ ಪುನಾರು, ಸಮಾಜ ಸೇವಕ, ಉದ್ಯಮಿ ಎಸ್.ಕೆ.ಸಾಲಿಯಾನ್, ಯಕ್ಷಗಾನ ಭಾಗವತ ಹರೀಶ್ ಶೆಟ್ಟಿ ಸೂಡ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)