ಬೆಳ್ಳಿಹೆಜ್ಜೆಯಲ್ಲಿ ಅನಂತನಾಗ್

7

ಬೆಳ್ಳಿಹೆಜ್ಜೆಯಲ್ಲಿ ಅನಂತನಾಗ್

Published:
Updated:

ಕರ್ನಾಟಕ ಚಲನಚಿತ್ರ ಅಕಾಡೆಮಿ: ಶನಿವಾರ ಬೆಳ್ಳಿಹೆಜ್ಜೆಯಲ್ಲಿ ನಟ ಅನಂತನಾಗ್ ಅವರೊಡನೆ ಸಂವಾದ.ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರಗಳೆರಡರಲ್ಲೂ ಹೆಸರು ಮಾಡಿದ ಕಲಾವಿದರಲ್ಲಿ ಅನಂತನಾಗ್ ಅವರದು ಅಚ್ಚಳಿಯದ ಹೆಸರು. ಉತ್ತರ ಕನ್ನಡ ಜಿಲ್ಲೆಯ ನಾಗರಕಟ್ಟೆಯಲ್ಲಿ ಜನಿಸಿದ ಅನಂತನಾಗ್, ಪಿ.ವಿ. ನರಸಿಂಹರಾಜ ಅರಸ್ ನಿರ್ದೇಶನದ `ಸಂಕಲ್ಪ~ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜಿ.ವಿ. ಅಯ್ಯರ್ ನಿರ್ದೇಶನದ `ಹಂಸಗೀತೆ~ ಚಿತ್ರದಲ್ಲಿ ಶ್ರೇಷ್ಠ ಅಭಿನಯದ ಮೂಲಕ ಗಮನ ಸೆಳೆದವರು.ಮುಂಬೈನಲ್ಲಿ ಬ್ಯಾಂಕ್ ನೌಕರಿಯಲ್ಲಿ ಇರುವಾಗಲೇ ಮರಾಠಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಾಗರಕಟ್ಟೆ ಎಂಬ ಅಡ್ಡ ಹೆಸರನ್ನು ನಾಗ್ ಎಂದು ಬದಲಿಸಿಕೊಂಡ ಅವರು `ಬಯಲುದಾರಿ, ಬೆಂಕಿಯಬಲೆ, ಚಂದನದ ಗೊಂಬೆ~ ಮೊದಲಾದ ಕನ್ನಡ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ಇತ್ತೀಚಿನ ಮುಂಗಾರು ಮಳೆ, ಪಂಚರಂಗಿ ಮತ್ತಿತರ ಚಿತ್ರಗಳಲ್ಲಿ ಪೋಷಕ ನಟರಾಗಿಯೂ ಸಹೃದಯರ ಮೆಚ್ಚುಗೆಗೆ ಪಾತ್ರರಾದವರು.ನಾಟಕ, ಸಿನಿಮಾ ಕ್ಷೇತ್ರಗಳಲ್ಲದೇ ರಾಜಕಾರಣದಲ್ಲೂ ತಮ್ಮನ್ನು ತೊಡಗಿಸಿಕೊಂಡ ಅನಂತನಾಗ್ ಅವರು ಶಾಸಕರಾಗಿ, ದಿ. ಪಟೇಲರ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ಸ್ಥಳ: ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬಿಬಿಎಂಪಿ ಕಚೇರಿ ಎದುರು. ಸಂಜೆ 4.30. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry