`ಬೆಳ್ಳಿಹೆಜ್ಜೆ'ಯಲ್ಲಿ ರಮೇಶ್ ಭಟ್

7

`ಬೆಳ್ಳಿಹೆಜ್ಜೆ'ಯಲ್ಲಿ ರಮೇಶ್ ಭಟ್

Published:
Updated:
`ಬೆಳ್ಳಿಹೆಜ್ಜೆ'ಯಲ್ಲಿ ರಮೇಶ್ ಭಟ್

ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ (ಜ.19) ಆಯೋಜಿಸಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದ ಈ ಬಾರಿಯ ಅತಿಥಿಯಾಗಿ ರಂಗಭೂಮಿ, ಚಲನಚಿತ್ರ ನಟ ರಮೇಶ್ ಭಟ್ ಭಾಗವಹಿಸಲಿದ್ದಾರೆ.

ರಮೇಶ್ ಭಟ್ ಮೂಲತಃ ರಂಗಭೂಮಿಯಿಂದ ಬಂದವರು.

ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು `ಕಾಡು' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. `ಅಬಚೂರಿನ ಪೋಸ್ಟಾಫೀಸ್' ಸೇರಿದಂತೆ ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ ರಮೇಶ್ ಭಟ್ ಅವರು ಶಂಕರನಾಗ್ ಒಡನಾಡಿಯಾಗಿ ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಗಳಲ್ಲಿ ತೆರೆಯ ಮುಂದೆ ಹಾಗೂ ಹಿಂದೆ ತಮ್ಮನ್ನು ತಾವು ತೊಡಗಿಸಿಕೊಂಡರು.ನಟನೆಯಷ್ಟೇ ಅಲ್ಲದೆ ಇವರು ನಿರ್ದೇಶನವನ್ನೂ ಮಾಡಿದ್ದಾರೆ. `ಪರಮೇಶಿ ಪ್ರೇಮ ಪ್ರಸಂಗ' ಇವರ ನಿರ್ದೇಶನದ ಚಿತ್ರ. `ನಿಷ್ಕರ್ಷ' ಚಿತ್ರದ ನಟನೆ ಬಹುತೇಕರಿಗೆ ಮೆಚ್ಚುಗೆಯಾಯಿತು. `ಕ್ರೇಜಿ ಕರ್ನಲ್' ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆಯಿತು.

ಇತ್ತೀಚಿನ ಕನ್ನಡ ಚಲನಚಿತ್ರಗಳಲ್ಲೂ ಪೋಷಕ ನಟರಾಗಿ ಮಿಂಚುತ್ತಿರುವ ರಮೇಶ್ ಭಟ್ ಈ ಬಾರಿಯ ಬೆಳ್ಳಿಹೆಜ್ಜೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ: ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬಿಬಿಎಂಪಿ ಕಚೇರಿ ಎದುರು. ಸಂಜೆ 5.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry