ಶನಿವಾರ, ನವೆಂಬರ್ 23, 2019
18 °C

`ಬೆಳ್ಳಿ ಚುಕ್ಕಿ' ಹೆಕ್ಕಿ!

Published:
Updated:
`ಬೆಳ್ಳಿ ಚುಕ್ಕಿ' ಹೆಕ್ಕಿ!

ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕು, ದೊಡ್ಡ ಹೆಸರು ಮಾಡಬೇಕು ಎಂಬ ಕನಸು ಹೊತ್ತ ಯುವಜನತೆ ಸಾಕಷ್ಟಿದ್ದಾರೆ. ಈ ಎರಡೂ ಕ್ಷೇತ್ರದಲ್ಲಿ ಸಿಗುವ ದಿಢೀರ್ ಜನಪ್ರಿಯತೆ ಯುವಕರನ್ನು ಹೆಚ್ಚು ಈ ಕ್ಷೇತ್ರದತ್ತ ಆಕರ್ಷಿಸುತ್ತಿದೆ. ರೂಪದರ್ಶಿ ಅಥವಾ ನಟ/ನಟಿಯಾಗಬೇಕು ಎಂಬ ಹಂಬಲವುಳ್ಳ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದೆ `ಬೆಳ್ಳಿ ಚುಕ್ಕಿ' ಸಂಸ್ಥೆ.1995ರಲ್ಲಿ ಪ್ರಾರಂಭಗೊಂಡ ಬೆಳ್ಳಿ ಚುಕ್ಕಿ ಸಂಸ್ಥೆಯು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಜತೆಗೆ ಸೂಕ್ತ ತರಬೇತಿಯನ್ನೂ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಟನೆ ತರಬೇತಿ ಕಾರ್ಯಾಗಾರ, ಫ್ಯಾಶನ್ ಶೋಗಳನ್ನು ಆಯೋಜಿಸುತ್ತಾ ಬರುತ್ತಿದೆ.ಪ್ರತಿವರ್ಷದಂತೆ ಈ ವರ್ಷ ಸಹ ಬೆಳ್ಳಿ ಚುಕ್ಕಿ `ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಆಫ್ ಕರ್ನಾಟಕ 2013' ಸ್ಪರ್ಧೆಯನ್ನು ಏ.18ರಂದು ಆಯೋಜಿಸಿದೆ. ಈ ಸ್ಪರ್ಧೆಯು ಮೂರು ಸುತ್ತುಗಳಲ್ಲಿ ನಡೆಯಲಿದೆ. ಗೆದ್ದವರಿಗೆ ಆಕರ್ಷಕ ಬಹುಮಾನವೂ ಇದೆ. ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಸೀರೆ, ಗಾಗ್ರಾ ಹಾಗೂ ವೆಸ್ಟ್ರನ್ ಸುತ್ತುಗಳಿರುತ್ತವೆ. ಹಾಗೆಯೇ ಮಕ್ಕಳ ಫ್ಯಾಷನ್ ಶೋ ಕೂಡ ಇರುತ್ತದೆ. ಇನ್ನುಳಿದಂತೆ ನೃತ್ಯ ಸ್ಪರ್ಧೆ ಇರಲಿದೆ. ಸ್ಥಳ: ಚೌಡಯ್ಯ ಸ್ಮಾರಕ ಭವನ, 16ನೇ ಕ್ರಾಸ್, ಜಿ.ಡಿ.ಪಾರ್ಕ್ ಬಡಾವಣೆ, ವೈಯಾಲಿಕಾವಲ್. ಸಂಜೆ 5. 

 

ಪ್ರತಿಕ್ರಿಯಿಸಿ (+)